ಸಂಕಷ್ಟಕ್ಕೆ ಮಿಡಿದ ಟೀಮ್ ಏಕತಾ: ಅನಾರೋಗ್ಯಪೀಡಿತರಿಗೆ 52 ಲಕ್ಷ ರೂ. ಧನಸಹಾಯ
x

'ಟೀಮ್ ಏಕತಾ ಟ್ರಸ್ಟ್' ಸದಸ್ಯರ ಸಮಾಗಮ ಕುಂದಾಪುರದ ಶ್ರೀವ್ಯಾಸರಾಜ ಕಲ್ಯಾಣಮಂಟಪದಲ್ಲಿ ಏ.25ರ ಶನಿವಾರ ಯಶಸ್ವಿಯಾಗಿ ನೆರವೇರಿತು.

ಸಂಕಷ್ಟಕ್ಕೆ ಮಿಡಿದ ಟೀಮ್ ಏಕತಾ: ಅನಾರೋಗ್ಯಪೀಡಿತರಿಗೆ 52 ಲಕ್ಷ ರೂ. ಧನಸಹಾಯ

ಕುಂದಾಪುರದ ಟೀಮ್ ಏಕತಾ ಟ್ರಸ್ಟ್‌ನ ಸದಸ್ಯರ ಸಮಾಗಮ ಯಶಸ್ವಿಯಾಗಿ ಜರುಗಿತು. 7 ವರ್ಷಗಳಲ್ಲಿ 212 ಫಲಾನುಭವಿಗಳಿಗೆ 52.94 ಲಕ್ಷ ರೂ. ನೆರವು ನೀಡಿದ ತಂಡದ ಸದಸ್ಯರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.


Click the Play button to hear this message in audio format

ಕಳೆದ ಏಳು ವರ್ಷಗಳಿಂದ ಸಮುದಾಯದ ಅನಾರೋಗ್ಯ ಪೀಡಿತರ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮಾನ ಮನಸ್ಕರ ಗುಂಪಾದ 'ಟೀಮ್ ಏಕತಾ ಟ್ರಸ್ಟ್' ಸದಸ್ಯರ ವಿಶಿಷ್ಟ ಸಮಾಗಮವು ನಗರದ ಶ್ರೀವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 25ರ ಶನಿವಾರದಂದು ಅತ್ಯಂತ ಯಶಸ್ವಿಯಾಗಿ ಜರುಗಿತು.

ಯಾವುದೇ ಆಡಂಬರವಿಲ್ಲದೆ ನಡೆದ ಈ ಕಾರ್ಯಕ್ರಮವು ಸಂಘಟನೆಯ ಒಗ್ಗಟ್ಟು ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು.

ಕಳೆದ ಏಳು ವರ್ಷಗಳ ಸುದೀರ್ಘ ಪಯಣದಲ್ಲಿ ಟೀಮ್ ಏಕತಾ ಒಟ್ಟು 212 ಸಂಕಷ್ಟಕ್ಕೊಳಗಾದ ಫಲಾನುಭವಿಗಳಿಗೆ ಸುಮಾರು 52.94 ಲಕ್ಷ ರೂಪಾಯಿಗಳ ಆರ್ಥಿಕ ಧನಸಹಾಯವನ್ನು ಹಸ್ತಾಂತರಿಸಿದೆ. ಈ ಮಹತ್ತರ ಸಾಧನೆಯ ಹಿಂದೆ ಶ್ರಮಿಸಿದ ಪ್ರತಿಯೊಬ್ಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಸ್ನೇಹಮಿಲನವನ್ನು ಆಯೋಜಿಸಲಾಗಿತ್ತು. ಕುಂದಾಪುರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷರಾದ ಸತೀಶ್ ಹಾಗೂ ಟೀಮ್ ಏಕತಾದ ಹಿರಿಯ ಸದಸ್ಯರು ಜಂಟಿಯಾಗಿ ಈ ಸಮಾರಂಭವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದ ವಿಶೇಷತೆಯೆಂದರೆ ಇದು ಯಾವುದೇ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗಿರಲಿಲ್ಲ. ಸಂಘಟನೆಯ ಸುಮಾರು 200 ಸದಸ್ಯರನ್ನೇ ಮುಖ್ಯ ಅತಿಥಿಗಳಾಗಿ ಪರಿಗಣಿಸಿದ್ದು ವಿಶೇಷ ಮೆರುಗು ನೀಡಿತು. ಸಮಾರಂಭಕ್ಕೆ ಆಗಮಿಸಿದ ಪ್ರತಿಯೊಬ್ಬ ಸದಸ್ಯರಿಗೂ ಅವರ ನಿಸ್ವಾರ್ಥ ಸೇವೆ ಗುರುತಿಸಿ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಂತರ ಎಲ್ಲರಿಗೂ ವಿಶೇಷ ಭೋಜನ ಹಾಗೂ ಐಸ್‌ಕ್ರೀಮ್ ಸತ್ಕಾರದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು. ಅತಿಥಿ-ಅಭ್ಯರ್ಥಿಗಳೆಂಬ ಭೇದವಿಲ್ಲದೆ ನಡೆದ ಈ ಸಮಾಗಮವು ತಂಡದ ಏಕತೆಯನ್ನು ಮತ್ತಷ್ಟು ಬಲಪಡಿಸಿತು.

Read More
Next Story