x

ಸ್ಟಿಂಗ್ ಆಪರೇಷನ್‌ ತನಿಖೆಯ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ ಎಂದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಹಾಗೂ ತನಿಖೆಯ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ದ 'ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಮಾತನಾಡಿದ್ದಾರೆ. ತನಿಖೆ ಹಳ್ಳಹಿಡಿಯುತ್ತಿರುವ ಲಕ್ಷಣ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ತನಿಖೆ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ದೂರಿನ ಮೇರೆಗೆ ನಡೆಯುತ್ತಿರುವ ತನಿಖೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಸ್ಟಿಂಗ್ ಆಪರೇಷನ್ ಹಾಗು ತನಿಖೆಯ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ 'ದ ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸ್ಟಿಂಗ್ ನ ಈ ವಿಡಿಯೋ ನೋಡಿದರೆ ಯಾರಿಗೋ ಲಾಭ ಮಾಡುವ ಉದ್ದೇಶದಿಂದ ಮಾಡಲಾಗಿದೆ ಎನಿಸುತ್ತದೆ ಎಂದು ಹೇಳಿದರು. ಇದೇ ವೇಳೆ ತನಿಖೆ ನೋಡಿದರೆ ಹಳ್ಳಹಿಡಿಯಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸ್ಟಿಂಗ್ ಡೆಫನೇಷನ್ ಬೇರೆಯೇ ಇರುತ್ತದೆ,ನಾನಾ ರೀತಿಯ ಸ್ಟಿಂಗ್ ಗಳು ಮಾಡಲಾಗುತ್ತದೆ. ವ್ಯಕ್ತಿಗೆ ಗೊತ್ತಿಲ್ಲದೆ ರೆಕಾರ್ಡ್ ಮಾಡುವುದು ಅಥವಾ ಗೊತ್ತಿದ್ದು ಮಾಡಿ ಲಾಭ ಮಾಡಿಕೊಳ್ಳುವುದು ಸೇರಿದಂತೆ ನಾನಾ ವಿಧಗಳಿರುತ್ತದೆ ಎಂದು ಹೇಳಿದರು. ಅಪರಾಧ ಮಾನಸಿಕ ವ್ಯಥೆಯಿರುವವರು ಈ ರೀತಿಯ ಸ್ಟಿಂಗ್ ಮಾಡುತ್ತಾರೆ. ಯಾರದಾದ್ದರೂ ಜೀವನ ಹಾಳಾಗಲಿ ಎಂದು ಲಾಭಾಂಶಪಡೆಯಲು ಮಾಡಲು ಈ ರೀತಿಯ ಸ್ಟಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದರು. ಮನುಷ್ಯತ್ವ ಇರುವವರು ಈ ರೀತಿಯ ಸ್ಟಿಂಗ್ ಮಾಡಲ್ಲ ಇಂತಹವರನ್ನು ಸಮಾಜ ದೂರ ಇಡಬೇಕು ಇಂತಹವರು ಉಸಿರಾಡಿದರೇ ಸಮಾಜಕ್ಕೆ ಡೇಂಜರ್ ಎಂದು ಹೇಳಿದರು.

ಮುಂದೆ ಯಾರಿಂದ ಲಾಭ ಪಡೆಯಬೇಕು ಯಾರಿಗೆ ಹೆದರಿಸಬೇಕು ಅವರ ಹೆಸರನ್ನು ಹೇಳಿಕೊಂಡು ಒಂದು ಪಾರ್ಟ್ ಸ್ಟಿಂಗ್ ಮಾಡಿದ್ದು ಎನಿಸುತ್ತದೆ ಈ ಸ್ಟಿಂಗ್ ಪ್ರಕರಣವನ್ನು ಸಾಮಾನ್ಯ ಹೆಡ್ ಕಾನ್ಟಟೇಬಲ್ ಮಾಡಬಹುದು ಎಂದು ಹೇಳಿದರು. ಯಾವುದರಲ್ಲಿ ರೆಕಾರ್ಡ್ ಮಾಡಿದೆ ಅದನ್ನು ವಶಕ್ಕೆ ಪಡೆಯುವುದು ಯಾರು ಮಾಡಿದ್ದಾರೆ ಎಂದುಹಾರ್ಡ್ ಡಿಸ್ಕ್ ವಶಕ್ಕೆ ಪಡೆದುಕೊಂಡಾಗ ಎಲ್ಲಾ ಗೊತ್ತಾಗಲಿದೆ, ಸ್ಟಿಂಗ್ ಮಾಡಿದವರ ವಾಯ್ಸ್ ಸ್ಯಾಂಪಲ್ ಕಲೆಕ್ಟ್ ಮಾಡಬೇಕಾಗುತ್ತದೆ ಎಂದು ಹೇಳಿದರು. ಯಾರಿಗೋ ಲಾಭ ಮಾಡಿಕೊಡಲು ಈ ಸ್ಟಿಂಗ್ ಮಾಡಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಸ್ಟಿಂಗ್ ನಲ್ಲಿ ಮಹಿಳೆಗೆ ಲೀಡಿಂಗ್ ಪ್ರಶ್ನೆ ಕೇಳುತ್ತಾರೆ ಆ ಮಹಿಳೆಗೆ ಏನು ಉತ್ತರ ಕೊಡಬೇಕು ಎಂದು ಗೊತ್ತಾಗುತ್ತಿರಲಿಲ್ಲ ಎಂದು ಕಾಣಿಸುತ್ತದೆ ಎಂದು ತಿಳಿಸಿದರು. ವಿಡಿಯೋ ಅಪ್ ಲೋಡ್ ಮಾಡುವುದು ಕಾನೂನು ಅಪರಾಧದಲ್ಲಿ ನಾನಾ ರೀತಿಯಿದೆ ಎಂದು ಹೇಳಿದರು. ಅಪ್ ಲೋಡ್ ವಿಡಿಯೋದಲ್ಲಿ ಅಶ್ಲೀಲ ಏನಿದೆ ಎಂದು ಹೇಳಿದರೆ ಏನು ಮಾಡಲಿಕ್ಕೆ ಆಗುತ್ತದೆ ಈ ಎಲ್ಲಾ ಬೆಳವಣಿಗೆ ನೋಡಿದರೆ ತನಿಖೆ ಹಳ್ಳಹಿಡಿಯುವ ಸಾಧ್ಯತೆಯಿದೆ ಎಂದು ಹೇಳಿದರು.

Read More
Next Story