ಸ್ಟಿಂಗ್ ಆಪರೇಷನ್ ಮಾಡಿದವರಿಗೆ ಅಪಾಯ ಖಚಿತ; ಯಾರೆಲ್ಲ ಜೈಲಿಗೆ ಹೋಗ್ತಾರೆ?: ವಕೀಲ ಬಾಲನ್
ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ ವಕೀಲ ಎಸ್. ಬಾಲನ್ ಮಾತನಾಡಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಬಹುದಾ? ಕಾನೂನು ಏನು ಹೇಳುತ್ತದೆ? ಬಾಲನ್ ಅವರು ವಿವರಿಸಿದ್ದಾರೆ
ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ (Sting operation) ವಿಚಾರ ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಸ್ಟಿಂಗ್ ಆಪರೇಷನ್, ಹನಿಟ್ರಾಪ್ ಗಳ ಬಗ್ಗೆ ಕಾನೂನು ಏನು ಹೇಳುತ್ತದೆ ಇದು ಕಾನೂನು ಬಾಹಿರ ಎಂದಾದರೆ ಶಿಕ್ಷೆ ಏನು ಎಂಬ ಹಿರಿಯ ವಕೀಲ ಎಸ್. ಬಾಲನ್ ಅವರು ದ 'ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡುವುದು ತಪ್ಪಲ್ಲ ಆದರೆ ಅದರ ಉದ್ದೇಶ ಬ್ಲಾಕ್ ಮೇಲ್ ಆಗಬಾರದು ಇದು ತಪ್ಪು ಎಂದು ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರ ಈ ಮಟ್ಟಿಗೆ ಚರ್ಚೆಯಾಗುತ್ತಿರುವುದು ಮಾಜಿ ಮುಖ್ಯಮಂತ್ರಿಗಳು ಸ್ಟೇ ತಂದಿರುವುದು ಏನಾಗುತ್ತಿದೆ ಇದು ಅಸಹ್ಯವಾಗುತ್ತದೆ ಮುಜುಗರವಾಗುತ್ತದೆ ಎಂದು ಹೇಳಿದರು.ಸ್ಟಿಂಗ್ ಆಪರೇಷನ್ ಮಾಡುವವರು ಯಾರು ಏನಕ್ಕೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಹನಿಟ್ರಾಪ್ ಎಂದು ಮತ್ತೊಂದೆಡೆ ಕರೆಯುತ್ತಾರೆ ಹನಿಟ್ರಾಪ್ ಗೆ ಕೇವಲ ಹುಡುಗಿಯರೇ ಕಾರಣನಾ ಇದಕ್ಕೆ ಹನಿಟ್ರಾಪ್ ಗೆ ಒಳಗಾಗಿರುವವರು ಕಾರಣ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಬರುವುದಾದರೆ ಅದಕ್ಕೆ ಬೇರೆಯದೆ ವಿಶ್ಲೇಷಣೆ ಮಾಡಬೇಕಾಗುತ್ತದೆ ಎಲ್ಲಾ ರೀತಿಯಿಂದಲೂ ನೋಡಬೇಕಾಗುತ್ತದೆ ಎಂದು ಬಾಲನ್ ಹೇಳಿದರು.ಸ್ಟಿಂಗ್ ಆಪರೇಷನ್ ಎಂದರೆ ಅಪರಾಧದ ತನಿಖೆಯ ಒಂದು ಭಾಗ ಸ್ಟಿಂಗ್ ಆಪರೇಷನ್ ಒಂದು ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಇದಕ್ಕೆ ಹಲವು ತೀರ್ಪುಗಳ ಉದಾಹರಣೆ ಇದೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಕಾನೂನುಬಾಹಿರ ಅಲ್ಲ ಆದರೆ ಅದರ ಉದ್ದೇಶ ಹಾಗು ಯಾರು ಮಾಡಿದರು ಅದು ಪ್ರಾಮುಖ್ಯತೆ ವಾಗುತ್ತದೆ ಎಂದು ತಿಳಿಸಿದರು. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಒಬ್ಬರನ್ನು ಕಳಿಸಿ ವಿಡಿಯೋ ಮಾಡಿ ದುಡ್ಡಿಗೆ ಬೇಡಿಕೆಯಿಡುವುದು ಇದು ಬ್ಲಾಕ್ ಮೇಲ್ ಇದು ಅಪರಾಧ ಎಂದು ಹೇಳಿದರು. ನನ್ನ ಬಳಿ ಸ್ಟಿಂಗ್ ವಿಡಿಯೋ ಇದೆ ಹಲವು ವರ್ಷಗಳ ಹಿಂದೆ ಮಾಡಿದ್ದು ಅಂತಾ ಹೇಳುತ್ತಾರೆ ಇದು ಅಪರಾಧ ಆಗುತ್ತದೆ ಯಾಕೆಂದರೆ ಸ್ಟಿಂಗ್ ಮಾಡಿದಾಗ ಅದರಲ್ಲಿ ಏನಾದರೂ ಬೇರೆ ಉದ್ದೇಶ ಇದ್ದರೆ ಅದನ್ನು ಪೊಲೀಸರಿಗೆ ತಿಳಿಸಬೇಕಿತ್ತು ಸ್ಟಿಂಗ್ ಮಾಡಿ ಯಾಕೆ ನೀನು ಇಟ್ಟುಕೊಳ್ಳುತ್ತೀಯ ಎಂದು ಪ್ರಶ್ನಿಸಿದರು.
ಮಹಿಳೆಯನ್ನು ಕೂರಿಸಿಕೊಂಡು ಖಾಸಗಿಯವರು ಹೆಸರು ಹೇಳಿ ಹೇಗೆ ತನಿಖೆ ಮಾಡಲುಬರುತ್ತದೆ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಈ ರೀತಿ ವಿಚಾರ ಸ್ಟಿಂಗ್ ಆಪರೇಷನ್ ನಡೆಸಿದಾಗ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಿತ್ತು ಎಂದು ತಿಳಿಸಿದರು. ದುರುದ್ದೇಶಪೂರ್ವಕವಾಗಿ ಸ್ಟಿಂಗ್ ಆಪರೇಷನ್ ಮಾಡುವುದು ಅದನ್ನು ಬ್ಲಾಕ್ ಮೇಲ್ ಮಾಡುವುದು ಹಾಗು ಹಂಚಿಕೆ ಮಾಡುವುದು ಕಾನೂನುಬಾಹಿರ ಇದಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಪಡಿಸಬಹುದು ಎಂದು ಮಾಹಿತಿ ನೀಡಿದರು.
ಈಗಿನ ಸ್ಟಿಂಗ್ ವಿಡಿಯೋ ವಿಚಾರದ ತನಿಖೆ ನೋಡಿದರೆ ಸರಿಯಾದ ತನಿಖೆ ಆಗುವುದು ಅನುಮಾನ ಎಂದು ಹೇಳಿದರು. ಇದರಲ್ಲಿ ರಾಜಕೀಯ ಪ್ರಭಾವ ಬಳಕೆಯಾಗಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಸತ್ಯಾಂಶ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಾಗಲಿ ಎಂದು ಹೇಳಿದರು. ಬ್ಲಾಕ್ ಮೇಲ್ ಸ್ಟಿಂಗ್ ಆಪರೇಷನ್ ಇದು ಅಸಹ್ಯ ಇದರ ವಿರುದ್ಧಜನರು ಬೀದಿಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.

