Vijayawada - Bengaluru closer, Vande Bharat train to start soon
x
ವಂದೇಭಾರತ್‌ ರೈಲು

ಮಾ.15 ರಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಬದಲು; ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ!

ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಪ್ರಯಾಣವನ್ನು ಯೋಜಿಸುವಂತೆ ನೈರುತ್ಯ ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.


Click the Play button to hear this message in audio format

ನೈರುತ್ಯ ರೈಲ್ವೆ ವಿಭಾಗದಲ್ಲಿ ಸಂಚರಿಸುವ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯನ್ನು ಇಲಾಖೆ ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿ ಮಾ.15ರಿಂದ ಜಾರಿಗೆ ಬರಲಿದೆ. ಈ ಕೆಳಗಿನ ರೈಲುಗಳು ಪರಿಷ್ಕೃತ ವೇಳಾಪಟ್ಟಿಯಂತೆ ನಿಲ್ದಾಣಗಳಲ್ಲಿ ಸಂಚರಿಸಲಿವೆ.

ಎಸ್ಎಸ್ಎಸ್ ಹುಬ್ಬಳ್ಳಿ–ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20669)

ಬೆಳಗಾವಿ (07.05/07.10 ಗಂಟೆ) ಮತ್ತು ಘಟಪ್ರಭಾ (07.48/07.50 ಗಂಟೆ) ನಿಲ್ದಾಣಗಳಿಗೆ ತಲುಪಲಿದೆ.

ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20661)

ದಾವಣಗೆರೆ (09:30/09:32 ಗಂಟೆ), ಹಾವೇರಿ (10:20/10:22 ಗಂಟೆ) ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ (11:15/11:20 ಗಂಟೆ) ನಿಲ್ದಾಣಗಳಲ್ಲಿ ಸಂಚರಿಸಲಿದೆ.

ಧಾರವಾಡ–ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌(ರೈಲು ಸಂಖ್ಯೆ 20662 )

ಹಾವೇರಿ (14:48/14:50 ಗಂಟೆ) ಮತ್ತು ದಾವಣಗೆರೆ (15:33/15:35 ಗಂಟೆ) ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಲಿದೆ. ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಯಶವಂತಪುರ ನಿಲ್ದಾಣಕ್ಕೆ 19:21/19:23 ಗಂಟೆಗೆ ತಲುಪಿ, ನಿರ್ಗಮಿಸಲಿದೆ.

ಬೆಳಗಾವಿ–ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 26751)

ಹಾವೇರಿ (08:42/08:44 ಗಂಟೆ), ದಾವಣಗೆರೆ (09:28/09:30 ಗಂಟೆ), ತುಮಕೂರು (12:15/12:17 ಗಂಟೆ) ಮತ್ತು ಯಶವಂತಪುರ (13:23/13:25 ಗಂಟೆ) ನಿಲ್ದಾಣಗಳಲ್ಲಿ ತಲುಪಲಿದೆ.

ಯಶವಂತಪುರ–ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20704)

ಹಿಂದೂಪುರ ನಿಲ್ದಾಣದಲ್ಲಿ (15:55/15:57 ಗಂಟೆ) ಪರಿಷ್ಕೃತ ಸಮಯ ಹೊಂದಿರುತ್ತದೆ.

ಕಾಚಿಗುಡ–ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20703 )

ಹಿಂದೂಪುರದಲ್ಲಿ (12:17/12:19 ಗಂಟೆ) ಪರಿಷ್ಕೃತ ವೇಳಾಪಟ್ಟಿಯಂತೆ ಸಂಚರಿಸಲಿದೆ.

ಕಲಬುರಗಿ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 22231)

ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (11:13/11:15 ಗಂಟೆ) ಮತ್ತು ಯಲಹಂಕ (12:58/13:00 ಗಂಟೆ) ನಿಲ್ದಾಣಗಳಲ್ಲಿ ಸಂಚರಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 22232 ) ರೈಲು ಯಲಹಂಕ (15:09/15:11 ಗಂಟೆ), ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (16:45/16:47 ಗಂಟೆ) ನಿಲ್ದಾಣಗಳಲ್ಲಿ ಸಂಚರಿಸಲಿದೆ.

ಕೊಯಮತ್ತೂರು–ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20642 )

ಹೊಸೂರು ನಿಲ್ದಾಣದಲ್ಲಿ (12:13/12:15 ಗಂಟೆ) ಪರಿಷ್ಕೃತ ಸಮಯ ಹೊಂದಿರಲಿದೆ. ಪ್ರಯಾಣಿಕರು ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಪ್ರಯಾಣವನ್ನು ಯೋಜಿಸುವಂತೆ ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

Read More
Next Story