x

ತುಳುವಿನ ರೀತಿ ಉರ್ದುಭಾಷೆಗೆ ಸ್ಥಾನ ಮಾನ ನೀಡಿ ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ SDPI

ತುಳುವಿಗೆ ರಾಜ್ಯದ ಎರಡನೇ ಆಡಳಿತ ಭಾಷೆಯಾಗಿ ಘೋಷಿಸಿದ ಬೆನ್ನಲ್ಲೇ ಉರ್ದುಭಾಷೆಯ ಸ್ಥಾನ ಮಾನದ ಬಗ್ಗೆ ಕೂಗು ಎದ್ದಿದೆ. ಬೇಡಿಕ ಈಡೇರದಿದ್ದರೆ ಮುಸ್ಲಿಂ ಸಮುದಾಯದ ದಿಂದ ಹೋರಾಟ ಮಾಡಲಾಗುವುದು ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್ಎಚ್ಚರಿಕೆ ನೀಡಿದ್ದಾರೆ.


Click the Play button to hear this message in audio format

ತುಳುವಿನ ರೀತಿ ಉರ್ದುಭಾಷೆಗೆ ಸ್ಥಾನ ಮಾನ ನೀಡಿ: SDPI

ತುಳುವಿಗೆ ರಾಜ್ಯದ ಎರಡನೇ ಆಡಳಿತ ಭಾಷೆಯಾಗಿ ಘೋಷಿಸಿದ ಬೆನ್ನಲ್ಲೇ ಉರ್ದುಭಾಷೆಯ ಸ್ಥಾನ ಮಾನದ ಬಗ್ಗೆ ಕೂಗೆದ್ದಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ದ 'ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಮಾತನಾಡಿದ ಅಬ್ದುಲ್ ಮಜೀದ್ ಬೇರೆ ರಾಜ್ಯಗಳಲ್ಲಿ ಉರ್ದುಭಾಷೆಗೆ ನೀಡಿದ ಸ್ಥಾನ ಕರ್ನಾಟಕದಲ್ಲೂ ನೀಡಿ ಎಂದು ಆಗ್ರಹಿಸಿದ್ದಾರೆ. ಮುಸ್ಲಿಂ ನಾಯಕತ್ವ, ಕಾಂಗ್ರೆಸ್ ರಾಜಕಾರಣ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸಂದರ್ಶನದಲ್ಲಿ ಮಾತನಾಡಿದ್ದಾರೆ.‌

ತುಳುವಿಗೆ ಅಧಿಕೃತ ಆಡಳಿತ ಭಾಷೆ ಸ್ಥಾನ ನೀಡಿದ್ದನ್ನು ಸ್ವಾಗತಿಸುತ್ತೇನೆ ಅದೇ ರೀತಿ ಕರ್ನಾಟಕದಲ್ಲಿ ಉರ್ದು ಭಾಷೆಗೂ ಅಧಿಕೃತ ಭಾಷಾ ಸ್ಥಾನಮಾನ ನೀಡಬೇಕು ಇದರಲ್ಲಿ ತಪ್ಪೇನಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಕನ್ನಡ ಬಿಟ್ಟರೆ ಹೆಚ್ಚು ಭಾಷೆ ಮಾತನಾಡುವುದು ಉರ್ದುಭಾಷೆಯನ್ನು. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಜನ ಉರ್ದು ಮಾತನಾಡುತ್ತಾರೆ ಎಂದು ತಿಳಿಸಿದರು.

ತೆಲಂಗಾಣ ರಾಜ್ಯದಲ್ಲಿ ಉರ್ದುಭಾಷೆಗೆ ಸ್ಥಾನ ನೀಡಲಾಗಿದೆ. ಅದೇ ರೀತಿ ಬಿಜೆಪಿ ಆಡಳಿತವಿರುವ ಕೆಲ ರಾಜ್ಯಗಳಲ್ಲಿ ಉರ್ದುಭಾಷೆಯನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಈಗಲಾದರೂ ಉರ್ದುಭಾಷೆಗೆ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿಮಾಡಲಾಗಿದೆ ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಸ್ಲಿಂ ಸಮುದಾಯದ ಚಿಂತಕರು, ಸಾಹಿತಿಗಳು ಸೇರಿದಂತೆ ಸಮುದಾಯದಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು

ಕಾಂಗ್ರೆಸ್ ಗೆ ಮುಸ್ಲಿಂರು ಮತಹಾಕಿದ್ದಾರೆ ಜತೆಗೆ ಉರ್ದುಭಾಷೆಗೆ ಸ್ಥಾನ ನೀಡುವ ಬಗ್ಗೆ ಸಮುದಾಯದ ಸಚಿವರು ಶಾಸಕರು ಮಾತನಾಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಗೆ ಮುಸ್ಲಿಂರು ಹೇಗಿದ್ದರು ಮತಹಾಕುತ್ತಾರೆ ಎಂಬ ಭಾವನೆ ಕಾಂಗ್ರೆಸ್ ನಲ್ಲಿದೆ ಅದಕ್ಕೆ ನಮ್ಮ ಬೇಡಿಕೆಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಆದರೆ ಕಾಂಗ್ರೆಸ್ ಗೆ ಮುಸ್ಲಿಂರು ದಾವಣಗೆರೆ ಉಪಚುನಾವಣೆಯಲ್ಲಿ ಇದರ ಬಿಸಿ ಮುಟ್ಟಿಸಿದ್ದಾರೆ ಎಂದು ನೆನಪಿಸಿದರು.

ಉರ್ದು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ ಗೋಹತ್ಯೆ ನಿಷೇಧ ಕಾಯ್ದೆ ವಾಪಸು ಪಡೆದಿಲ್ಲ ಮುಸ್ಲಿಂ ಸಮುದಾಯದ ಅನೇಕ ಬೇಡಿಕೆಗಳು ಈಡೇರಿಲ್ಲ ಈ ಬಗ್ಗೆ ಸಮುದಾಯದ ಶಾಸಕರು ಸಚಿವರು ಮಾತನಾಡಬೇಕು ಎಂದು ಆಗ್ರಹಿಸಿದರು.

ಇವರಿಬ್ಬರ ಜಗಳದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ

ಬಿಜೆಪಿಯ ಪ್ರಚಾರಕ್ಕೆ ಹೆದರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಎಂದು ದೂರಿದರು.‌ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಏನಾದರು ಮಾಡಿದರೆ ಬಿಜೆಪಿ ಹಿಂದುತ್ವ ಎಂದು ಪ್ರಚಾರ ಮಾಡುತ್ತದೆ ಅದಕ್ಕೆ ಕಾಂಗ್ರೆಸ್ ಹೆದರುತ್ತದೆ ಎಂದು ಹೇಳಿದರು. ಅಪ್ಪ ಅಮ್ಮ‌ ಜಗಳದಲ್ಲಿ ಕೂಸು ಬಡವ ಆದಂತೆ ಇವರಿಬ್ಬರ ಜಗಳದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು

ಜಮೀರ್ ಅಹಮದ್ ಖಾನ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಇದು ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಿದರು. ಕಾಂಗ್ರೆಸ್ ನಲ್ಲಿ ಸಾಕಷ್ಟು ಮುಸ್ಲಿಂ ಸಮುದಾಯದ ನಾಯಕರಿದ್ದರೂ ಮತತರುವ ಮಾಸ್ ಲೀಡರ್ ಎಂದರೆ ಅದು ಜಮೀರ್ ಅಹಮದ್ ಖಾನ್ ಎಂದು ತಿಳಿಸಿದರು


Read More
Next Story