ಪೊಲೀಸ್ ಇಲಾಖೆಯ ಡಿಜಿಟಲ್  ಬಲಪಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
x

ಪೊಲೀಸ್ ಇಲಾಖೆಯ 'ಡಿಜಿಟಲ್ ' ಬಲಪಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

ಸಾರ್ವಜನಿಕರಿಗೆ ಪೊಲೀಸ್ ಸೇವೆಗಳು ತಮ್ಮ ಕೈಬೆರಳ ತುದಿಯಲ್ಲಿಯೇ ಸಿಗುವಂತೆ ಮಾಡುವಂತೆ ಡಿಜಿಟಲ್‌ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.


Click the Play button to hear this message in audio format

ರಾಜ್ಯ ಪೊಲೀಸ್ ಇಲಾಖೆಯ ತಾಂತ್ರಿಕ ಬೆನ್ನೆಲುಬಾಗಿರುವ ಪೊಲೀಸ್ ಕಂಪ್ಯೂಟರ್ ವಿಭಾಗಕ್ಕೆ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ರಾಜ್ಯದ ಡಿಜಿಟಲ್ ಪೊಲೀಸ್ ವ್ಯವಸ್ಥೆಯ ಕಾರ್ಯಚಟುವಟಿಕೆಗಳು, ಸೈಬರ್ ಭದ್ರತೆ ಮತ್ತು ತಾಂತ್ರಿಕ ಮೂಲಸೌಕರ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.

ಈ ಭೇಟಿಯ ವೇಳೆ ಪೊಲೀಸ್ ಮಹಾನಿರ್ದೇಶಕರಾದ (ಡಿಜಿಪಿ) ಡಾ. ಎಂ.ಎ. ಸಲೀಂ ಹಾಗೂ ಇಲಾಖೆಯ ಹಿರಿಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದು, ಡಿಜಿಟಲ್ ಯೋಜನೆಗಳ ಕುರಿತು ಪ್ರಸ್ತುತಿಯನ್ನು ನೀಡಿದರು. ಈ ವೇಳೆ ಸಚಿವರು ಮಾತನಾಡಿ, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಪರಾಧಗಳ ಸ್ವರೂಪವೂ ಡಿಜಿಟಲ್ ರೂಪ ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪೊಲೀಸ್ ಇಲಾಖೆಯು ಕೇವಲ ದೈಹಿಕ ಬಲವನ್ನಷ್ಟೇ ಅಲ್ಲ, ತಾಂತ್ರಿಕ ಬಲವನ್ನೂ ಹೊಂದಿರಬೇಕು. ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ಮಾತ್ರವೇ ನಾವು ಜನಸ್ನೇಹಿ ಮತ್ತು ಪಾರದರ್ಶಕ ಆಡಳಿತವನ್ನು ನೀಡಲು ಸಾಧ್ಯ ಎಂದು ಒತ್ತಿ ಹೇಳಿದರು.

ರಾಜ್ಯದಲ್ಲಿ ಆನ್‌ಲೈನ್ ವಂಚನೆ, ಕ್ರಿಪ್ಟೋಕರೆನ್ಸಿ ಹಗರಣಗಳು ಮತ್ತು ಹ್ಯಾಕಿಂಗ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೈಬರ್ ಕ್ರೈಂ ವಿಭಾಗದ ಕಾರ್ಯವೈಖರಿಯನ್ನು ಸಚಿವರು ಪರಿಶೀಲಿಸಿದರು. ಸೈಬರ್ ಫೋರೆನ್ಸಿಕ್ ಘಟಕವು ಡಿಜಿಟಲ್ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವಲ್ಲಿ ತೋರುತ್ತಿರುವ ನಿಖರತೆಯನ್ನು ಶ್ಲಾಘಿಸಿದ ಸಚಿವರು, ಈ ವಿಭಾಗಕ್ಕೆ ಅತ್ಯಾಧುನಿಕ ಉಪಕರಣಗಳು ಮತ್ತು ತಜ್ಞರ ಅಗತ್ಯವಿದ್ದರೆ ಕೂಡಲೇ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಪ್ರಮುಖ ಡಿಜಿಟಲ್ ಮೂಲಸೌಕರ್ಯಗಳ ಪರಿಶೀಲನೆ

ಸಚಿವರು ಕೆಳಕಂಡ ಪ್ರಮುಖ ವ್ಯವಸ್ಥೆಗಳ ಕಾರ್ಯನಿರ್ವಹಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಅಪರಾಧ ಮತ್ತು ಅಪರಾಧಿಗಳ ಪತ್ತೆಗೆ ನೆರವಾಗುವ ಈ ಜಾಲತಾಣವನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಿದರು. ಸಾರ್ವಜನಿಕರಿಗೆ ಪೊಲೀಸ್ ಸೇವೆಗಳು ತಮ್ಮ ಕೈಬೆರಳ ತುದಿಯಲ್ಲಿಯೇ ಸಿಗುವಂತೆ ಮಾಡುವ ಈ ಆ್ಯಪ್‌ಗಳನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ರಾಜ್ಯ ಪೊಲೀಸ್ ಇಲಾಖೆಯ ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ಇಆರ್‌ಪಿ ವ್ಯವಸ್ಥೆಯಾದ ಇದು, ಇಲಾಖೆಯ ಕೆಲಸಗಳನ್ನು ಏಕೀಕೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಉನ್ನತೀಕರಿಸಲು ನಿರ್ಧರಿಸಲಾಗಿದೆ.

ಭವಿಷ್ಯದ ಹಾದಿ: 100 ದಿನಗಳ ಕಾರ್ಯಯೋಜನೆ

ಸಭೆಯಲ್ಲಿ ಸಚಿವರು ಇಲಾಖೆಯ 100 ದಿನಗಳ ಮಹತ್ವಾಕಾಂಕ್ಷೆಯ ಕಾರ್ಯಯೋಜನೆಯ ಬಗ್ಗೆ ಚರ್ಚಿಸಿದರು. ಪೊಲೀಸ್ ಠಾಣೆಗಳಿಂದ ಹಿಡಿದು ಉನ್ನತ ಕಚೇರಿಗಳವರೆಗೆ ಡಿಜಿಟಲ್ ಫೈಲಿಂಗ್ ವ್ಯವಸ್ಥೆಯನ್ನು ಬಲಪಡಿಸುವುದು. ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಕಾರ್ಯಾಚರಣೆಯ ವೇಗವನ್ನು ಹೆಚ್ಚಿಸುವುದು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ಅನಾಲಿಟಿಕ್ಸ್ ಬಳಸಿಕೊಂಡು ಅಪರಾಧಗಳ ಮುನ್ಸೂಚನೆ ಮತ್ತು ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವ ಕುರಿತು ಸಮಾಲೋಚನೆ ನಡೆಸಲಾಯಿತು. ಪೊಲೀಸ್ ಇಲಾಖೆಯ ತಾಂತ್ರಿಕ ವ್ಯವಸ್ಥೆಗಳು ಕೇವಲ ಅಂಕಿಅಂಶಗಳಿಗೆ ಸೀಮಿತವಾಗಬಾರದು. ಅವು ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತಿರಬೇಕು ಎಂದು ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು. ವಿಶೇಷವಾಗಿ ತಾಂತ್ರಿಕ ಅಡೆತಡೆಗಳ ಕಾರಣದಿಂದ ದೂರು ದಾಖಲಿಸುವಲ್ಲಿ ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Read More
Next Story