x

SIR ದ್ರೋಹದ ಕಣ್ಣೀರನ ಕಥೆ ವಿವರಿಸಿದ ನಟ ಪ್ರಕಾಶ್ ರಾಜ್‌

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ಎಸ್‌ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ ನಡೆಸಿದ್ದ ನಟ ಪ್ರಕಾಶ್‌ ರಾಜ್‌ ಅವರು ʼದ 'ಫೆಡರಲ್ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.


ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಸೆಪ್ಟೆಂಬರ್ 20ರಿಂದ 30ರವರೆಗೆ ರಾಜ್ಯಾದ್ಯಂತ 10 ದಿನಗಳ 'ಎಸ್‌ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ ನಡೆಸಿದ್ದರು.‌ ಇಂದು ಪ್ರವಾಸದಲ್ಲಿ ಕಂಡು ಬಂದ ಅಂಶಗಳನ್ನು SIR ದ್ರೋಹ ಮತ್ತು ಕಣ್ಣೀರಿನ ಕಥೆಗಳು ಎಂಬ ಹೆಸರಿನಲ್ಲಿ ಪರಿಶೋಧನಾ ವರದಿ ಬಿಡುಗಡೆ ಮಾಡಿದರು.

ʼದ ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಪ್ರಕಾಶ್ ರಾಜ್ EXCLUSIVE ಆಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಎಸ್ ಐಆರ್ ನಲ್ಲಿ ನಡೆದಿರುವ ಲೋಪಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ಜನಸಂಖ್ಯೆಯ ಅಂಕಿ-ಅಂಶಗಳು, ನಿಯಮಗಳ ಜಾರಿ ಹಾಗೂ ಸ್ಥಳೀಯ ಅಸ್ಮಿತೆಗಳ ಕುರಿತು ಗಂಭೀರ ಚರ್ಚೆಗಳು ಮುನ್ನೆಲೆಗೆ ಬಂದಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವರ ಧ್ವನಿಯಾಗಲು ಶ್ರಮಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪ್ರವಾಸದ ವೇಳೆ ಎಸ್ ಐಆರ್ ನಿಂದ ಆಗಿರುವ ಮೋಸದ ಬಗ್ಗೆ ವಿವರವಾಗಿ ನೋಡಿದ್ದೇವೆ ನೋವಿಗೆ ಅಸಾಹಯಕತೆಗೆ ಗುರಿಯಾದವರು ಆದಿವಾಸಿಗಳು ಇದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದರು. ಕೊಡಗಿನಲ್ಲಿ ವಿಶೇಷವಾಗಿ ಶ್ರೀಂಮತರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವವರು ಆದಿವಾಸಿಗಳು ಮತ್ತು ಬಡವರು ಎಂದು ಆರೋಪಿಸಿದರು. ಆರೋಗ್ಯ ಸರಿಯಿಲ್ಲ ಅಂದರೂ ಹೊಡೆದು ಕರೆದುಕೊಂಡು ಹೋಗುತ್ತಾರೆ ನಾಯಿ ಮನೆಗಳಲ್ಲಿ ಕೂಡಿಹಾಕುತ್ತಾರೆ ಎಂದರು.

ಉತ್ತರ ಕರ್ನಾಟಕ ಬಹುತೇಕ ಭಾಗದಲ್ಲಿ ಬಹುತೇಕ ಮಂದಿಗೆ ಮತ ಹೋಗಿದೆ ಎಂಬುದೇ ಗೊತ್ತಿಲ್ಲ ಎಂದು ಹೇಳಿದರು. ಮುಸ್ಲಿಂ ಮತಗಳನ್ನು ಬೇಕಂತಲೆ ಬಿಜೆಪಿಯವರು ಅರ್ಜಿಕೊಟ್ಟು ತೆಗೆಸುವ ಕೆಲಸ ಆಗಿದೆ ಎಂದು ಆರೋಪಿಸಿದರು.ಎಸ್ ಐಆರ್ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ ಅದರಿಂದ ಆಗುತ್ತಿರುವ ತೊಂದರೆ ಪ್ರಕ್ರಿಯೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಎಸ್ ಐಆರ್ ಸಂಪೂರ್ಣವಾಗಿ ರದ್ದುಗೊಳಿಸಬೇಕು ಈ ಬಗ್ಗೆ ರಾಜ್ಯದಲ್ಲಿ ಪ್ರವಾಸದ ವೇಳೆ ಸಿಕ್ಕಿರುವ ದಾಖಲೆಗಳ ಸಮೇತ ಹೈಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು. ಇದು ಒಂದು ಕಡೆ ಆದರೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು ಎಂದು ಹೇಳಿದರು.

ಬಿಜೆಪಿಯವರು ನನ್ನ ಸ್ನೇಹಿತರಲ್ಲ ಕಳ್ಳರು ಎಂದು ದೂರಿದರು. ಕಾಂಗ್ರೆಸ್ ನವರು ತಪ್ಪು ಮಾಡಿದರೂ ನಾನು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದರು. ಮೋದಿಯವರಿಗೆ ಬಹುಮತವಿಲ್ಲ ಚಂದ್ರಬಾಬು ನಾಯ್ಡು ಹಾಗು ನಿತೀಶ್ ಕುಮಾರ್ ಅವರ ಊರುಗೋಲಿನಿಂದ ಮೋದಿ ನಿಂತಿದ್ದಾರೆ ಎಂದು ಹೇಳಿದರು. ಮುಂದೆ ಮೋದಿ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು.

Read More
Next Story