x

ದೇವೇಗೌಡ–ಕುಮಾರಸ್ವಾಮಿಗೆ ಆಸ್ಕರ್ ಕೊಡ್ಬೇಕು

ನೈಸ್‌ ರಸ್ತೆ ಹಾಗೂ ಬಿಡದಿ ಟೌನ್‌ಶಿಪ್‌ ಯೋಜನೆಗೆ ದೇವೇಗೌಡ, ಕುಮಾರಸ್ವಾಮಿ ಶಿಫಾರಸು ಮಾಡಿದ್ದರು ಎಂದು ಆರೋಪಿಸಿದ ಪ್ರದೀಪ್ ಈಶ್ವರ್, ಈಗ ವಿರೋಧಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.


Click the Play button to hear this message in audio format

ನೈಸ್‌ ರಸ್ತೆ ಯೋಜನೆಗೆ ಶಿಫಾರಸು ಮಾಡಿದ್ದೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಬಿಡದಿ ಟೌನ್‌ಶಿಪ್‌ ಯೋಜನೆಗೆ ಶಿಫಾರಸು ಮಾಡಿದ್ದೇ ಎಚ್‌.ಡಿ.ಕುಮಾರಸ್ವಾಮಿ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ಇದೀಗ ಈ ಎರಡೂ ಯೋಜನೆಗಳಿಗೆ ಅವರೇ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಅವರು, ಶಿಫಾರಸು ಮಾಡುವ ಸಂದರ್ಭದಲ್ಲಿ ರೈತರ ಬಗ್ಗೆ ಕಾಳಜಿ ಇರಲಿಲ್ಲವೇ ಎಂದು ಕೇಳಿದ್ದಾರೆ.

ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದ ಪ್ರದೀಪ್ ಈಶ್ವರ್, ಹಿಂದೆ ಅವರನ್ನು ‘ನಾಟಕ ಮಂಡಳಿ’ ಎಂದು ಕರೆದಿದ್ದೆ, ಈಗ ಅವರ ನಾಟಕಕ್ಕೆ ಆಸ್ಕರ್ ಕೊಡಬೇಕು ಎಂದು ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Read More
Next Story