x

ಬಿಜೆಪಿ ಪಾದಯಾತ್ರೆಯಲ್ಲಿ ಯಾರೂ ಇಲ್ಲ; ಬೆಂಗಳೂರಲ್ಲೇ ಇದ್ದಾರೆ ನಾಯಕರೆಲ್ಲ; ಮತ್ತೆ ಬಣ ರಾಜಕೀಯ?

ಬಿ.ವೈ. ವಿಜಯೇಂದ್ರ ಪಾದಯಾತ್ರೆ ಮುನ್ನಡೆಸುತ್ತಿದ್ದರೆ, ಆರ್. ಅಶೋಕ್ ಸೇರಿದಂತೆ ಹಲವು ಹಿರಿಯ ನಾಯಕರು ದೂರ ಉಳಿದಿದ್ದಾರೆ.


ಕರ್ನಾಟಕ ಬಿಜೆಪಿಯ ಪಾದಯಾತ್ರೆ ಈಗ ಸರ್ಕಾರದ ವಿರುದ್ಧದ ಹೋರಾಟಕ್ಕಿಂತ ಪಕ್ಷದೊಳಗಿನ ಬಣಬಡಿದಾಟಕ್ಕೆ ಸಾಕ್ಷಿಯಾಗುತ್ತಿದೆಯೇ? ಬಿ.ವೈ. ವಿಜಯೇಂದ್ರ ಪಾದಯಾತ್ರೆ ಮುನ್ನಡೆಸುತ್ತಿದ್ದರೆ, ಆರ್. ಅಶೋಕ್ ಸೇರಿದಂತೆ ಹಲವು ಹಿರಿಯ ನಾಯಕರು ದೂರ ಉಳಿದಿದ್ದಾರೆ. ಮತ್ತೊಂದೆಡೆ, ಕೆಲ ನಾಯಕರು ಬೆಂಗಳೂರಿನಲ್ಲಿ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಟನೆಲ್ ರಸ್ತೆ ಯೋಜನೆ ವಿರುದ್ಧ ಹೋರಾಟ ಸಂಘಟಿಸಿದ್ದಾರೆ. ಹೀಗಾಗಿ ಬಿಜೆಪಿ ಹೋರಾಟಕ್ಕೆ ಒಂದೇ ನಾಯಕತ್ವ, ಒಂದೇ ಕಾರ್ಯತಂತ್ರ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಯಡಿಯೂರಪ್ಪ ಅವರಂತೆ ಪಕ್ಷದ ವಿವಿಧ ಬಣಗಳನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ವಿಜಯೇಂದ್ರ ತೋರಿಸಲಿಲ್ಲವೇ? ಪಾದಯಾತ್ರೆಯ ಯಶಸ್ಸಿಗಿಂತ ಪಕ್ಷದ ನಾಯಕರನ್ನು ಒಂದೇ ವೇದಿಕೆಗೆ ತರುವುದು ವಿಜಯೇಂದ್ರ ಅವರ ಮುಂದಿರುವ ನಿಜವಾದ ಸವಾಲೇ?

Read More
Next Story