
ಮತದಾನಕ್ಕೂ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಿಜೆಪಿ ಉಚ್ಚಾಟಿತ ಶಾಸಕಾರದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್
ವಿಧಾನ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ; 7ನೇ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ತೀವ್ರ ಪೈಪೋಟಿ!
, ಶಾಸಕರು ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು '1' ಎಂದು ಅಂಕಿಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಮುಂದೆ '1' ಎಂದು ಬರೆದರೆ ಅಥವಾ ಯಾವುದೇ ಸಂಖ್ಯೆ ಹಾಕದಿದ್ದರೆ ಆ ಮತ ಅಸಿಂಧುಗೊಳ್ಳಲಿದೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ಮತದಾನ ಪ್ರಕ್ರಿಯೆಯು ವಿಧಾನಸೌಧದಲ್ಲಿ ಬಿರುಸಿನಿಂದ ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಶೇ. 34.78 ರಷ್ಟು ಮತದಾನ ದಾಖಲಾಗಿದ್ದು, ಒಟ್ಟು 77 ಶಾಸಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ವಿಧಾನಸಭೆಯ ಕೆಳಮನೆಯ ಸದ್ಯದ ಸಂಖ್ಯಾಬಲ 222 ಶಾಸಕರಿದ್ದು, ಏಳು ಮೇಲ್ಮನೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ ಕನಿಷ್ಠ 28 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿದೆ.
ಪಕ್ಷಗಳ ಬಲ ಮತ್ತು ತಂತ್ರಗಾರಿಕೆ
ವಿಧಾನಸಭೆಯ ಸದ್ಯದ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಸುಲಭವಾಗಿ ನಾಲ್ಕು ಸ್ಥಾನಗಳನ್ನು ಹಾಗೂ ಪ್ರತಿಪಕ್ಷ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುವ ಅವಕಾಶ ಹೊಂದಿದೆ. ಆದರೆ, ಏಳನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಪರವಾಗಿ ಗೋವಿಂದರಾಜು ಕಣದಲ್ಲಿದ್ದರೆ, ಕಾಂಗ್ರೆಸ್ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಈ ಸ್ಥಾನದ ರೇಸ್ ಕುತೂಹಲ ಮೂಡಿಸಿದೆ.
ಶಾಸಕ ಸುನೀಲ್ ಕುಮಾರ್ ಮತದಾನ ಮಾಡಿದರು.
ಮತದಾನದ ನಿಯಮ
ಈ ಚುನಾವಣೆಯು ರಹಸ್ಯ ಬ್ಯಾಲೆಟ್ ಪೇಪರ್ ಮೂಲಕ ನಡೆಯುತ್ತಿದ್ದು, ಶಾಸಕರು ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು '1' ಎಂದು ಅಂಕಿಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಮುಂದೆ '1' ಎಂದು ಬರೆದರೆ ಅಥವಾ ಯಾವುದೇ ಸಂಖ್ಯೆ ಹಾಕದಿದ್ದರೆ ಆ ಮತ ಅಸಿಂಧುಗೊಳ್ಳಲಿದೆ.
ರೆಸಾರ್ಟ್ ರಾಜಕೀಯ
ಯಾವುದೇ ಮತಗಳು ಅಸಿಂಧುಗೊಳ್ಳದಂತೆ ತಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಗಳು ತಮ್ಮ ಶಾಸಕರಿಗೆ ಈಗಾಗಲೇ ಅಣಕು ಮತದಾನದ ತರಬೇತಿ ನೀಡಿವೆ. ಅಡ್ಡ ಮತದಾನದ ಭೀತಿಯಿಂದಾಗಿ ಪ್ರಮುಖ ಪಕ್ಷಗಳು ಬುಧವಾರ ರಾತ್ರಿಯೇ ತಮ್ಮ ಶಾಸಕರನ್ನು ಖಾಸಗಿ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಉಳಿಸಿಕೊಂಡು, ಇಂದು ಬೆಳಗ್ಗೆ ಒಟ್ಟಿಗೆ ವಿಧಾನಸೌಧಕ್ಕೆ ಕರೆತಂದು ಮತದಾನ ಮಾಡಿಸುತ್ತಿರುವುದು ವಿಶೇಷವಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಷ್ಠೆ ಈ ಚುನಾವಣೆಯಲ್ಲಿ ಪಣಕ್ಕಿಟ್ಟಂತಾಗಿದೆ. ಸಂಜೆ ವೇಳೆಗೆ ಮತದಾನದ ಪೂರ್ಣ ಚಿತ್ರಣ ಲಭ್ಯವಾಗಲಿದ್ದು, ತದನಂತರ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

