
ಕರ್ನಾಟಕದಲ್ಲಿ ಅತ್ಯಂತ ಕೆಟ್ಟ ರಾಜಕೀಯ ಸಂಸ್ಕೃತಿ ಬೆಳೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ: ಇಂದು ದಾಖಲೆಗಳ ಸಮೇತ ಕೇಂದ್ರ ಹೆಚ್.ಡಿ.ಕೆ ಸುದ್ದಿಗೋಷ್ಠಿ
ಬಾಯಿಮಾತಿನ ಆರೋಪಗಳಿಗೆ ಸೀಮಿತವಾಗದೆ, ಅಧಿಕೃತ ದಾಖಲೆಗಳ ಸಮೇತ ಕೆಲವು ಪ್ರಮುಖ ಹಾಗೂ ಮಹತ್ವದ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಹೆಚ್.ಡಿ.ಕೆ ಸುದ್ದಿಗೋಷ್ಠಿ ಘೋಷಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದ್ದು, ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು ಹಾಗೂ ಜೆಡಿಎಸ ವರಿಷ್ಠರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು (ಸೆಪ್ಟೆಂಬರ್ 29) ನಗರದಲ್ಲಿ ಅತ್ಯಂತ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ.
ಬಾಯಿಮಾತಿನ ಆರೋಪಗಳಿಗೆ ಸೀಮಿತವಾಗದೆ, ಅಧಿಕೃತ ದಾಖಲೆಗಳ ಸಮೇತ ಕೆಲವು ಪ್ರಮುಖ ಹಾಗೂ ಮಹತ್ವದ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಅವರು ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯ ಮೂಲಕ ಕುಮಾರಸ್ವಾಮಿ ಅವರು ಬೃಹತ್ ಹಗರಣವೊಂದನ್ನು ಬಯಲಿಗೆಳೆಯುವ ಅಥವಾ ಆಡಳಿತ ವ್ಯವಸ್ಥೆಯ ಗಂಭೀರ ಲೋಪವೊಂದು ಜಗಜ್ಜಾಹೀರು ಮಾಡಲಿದ್ದಾರೆ ಎನ್ನಲಾಗಿದೆ. ಯಾವ ಇಲಾಖೆಯ, ಯಾವ ನಾಯಕರ ಅಥವಾ ಯಾವ ಹಗರಣದ ಕರಾಳ ಮುಖವನ್ನು ಬಿಚ್ಚಿಡಲಿದ್ದಾರೆ ಎಂಬ ಪ್ರಶ್ನೆಗಳು ಎಲ್ಲೆಡೆ ಹರಿದಾಡುತ್ತಿವೆ. ರಾಜ್ಯ ಸರ್ಕಾರದ ವಿರುದ್ಧ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸರಣಿ ರಾಜಕೀಯ ಬೆಳವಣಿಗೆಗಳು, ಆರೋಪ-ಪ್ರತ್ಯಾರೋಪಗಳ ನಡುವೆ ಕೇಂದ್ರ ಸಚಿವರ ಈ ದಿಢೀರ್ ನಡೆ ತೀವ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.
ತಾಜ್ ಹೋಟೆಲ್ನಲ್ಲಿ ವೇದಿಕೆ ಸಜ್ಜು
ಸಚಿವರ ಈ ಮಹತ್ವದ ಪತ್ರಿಕಾಗೋಷ್ಠಿಗೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಯಶವಂತಪುರದ ಪ್ರತಿಷ್ಠಿತ ಹೋಟೆಲ್ ತಾಜ್ ವೇದಿಕೆಯಾಗಲಿದೆ. 11 ಗಂಟೆಗೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರವೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಕುಮಾರಸ್ವಾಮಿ ಅವರು, ದೆಹಲಿ ಮಟ್ಟದಲ್ಲೂ ರಾಜ್ಯದ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಧ್ವನಿಸುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿಯೇ ಕುಳಿತು ಅವರು ವಿರೋಧಿಗಳ ವಿರುದ್ಧ ಯಾವ ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಎಂಬುದು ಕುತೂಹಲಕಾರಿ.
ರಾಜಕೀಯ ಲೆಕ್ಕಾಚಾರ ಮತ್ತು ಮುಂದಿನ ನಡೆ
ಕೇಂದ್ರದ ಪ್ರಮುಖ ಖಾತೆಯನ್ನು ನಿಭಾಯಿಸುತ್ತಲೇ ಜೆಡಿಎಸ್ ಸಂಘಟನೆ ಜವಾಬ್ದಾರಿ ಹೊತ್ತಿರುವ ಕಾರಣ, ಮುಂಬರುವ ರಾಜಕೀಯ ಸವಾಲುಗಳು ಹಾಗೂ ಪಕ್ಷದ ಸಂಘಟನೆಯ ದೃಷ್ಟಿಯಿಂದಲೂ ಇಂದಿನ ಅವರ ಮಾತುಗಳು ಅತ್ಯಂತ ನಿರ್ಣಾಯಕ. ಪ್ರಕಟಣೆಯಲ್ಲಿ ಸ್ಪಷ್ಟವಾಗಿ 'ದಾಖಲೆಗಳ ಸಮೇತ' ಮಾತನಾಡಲಿದ್ದಾರೆ ಎಂದು ಉಲ್ಲೇಖಿಸಿರುವುದು ಗಮನ ಸೆಳೆದಿದೆ.

