ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ; ಡಿ.ಕೆ. ಶಿವಕುಮಾರ್
x

ತಮಿಳುನಾಡಿನ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ಬಂದಿರುವ ವದಂತಿ ಸುಳ್ಳು, ಅದು ಸದ್ಯ ಮುಚ್ಚಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. 

ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ; ಡಿ.ಕೆ. ಶಿವಕುಮಾರ್

ತಮಿಳುನಾಡಿನ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ಬಂದಿರುವ ವದಂತಿ ಸುಳ್ಳು, ಅದು ಸದ್ಯ ಮುಚ್ಚಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.


Click the Play button to hear this message in audio format

ತಮಿಳುನಾಡಿನ ಶಾಸಕರು ಈಗಲ್ಟನ್ ರೆಸಾರ್ಟ್‌ಗೆ ಬಂದಿದ್ದಾರೆ ಎಂಬ ವದಂತಿಗಳನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಈ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, "ಅದೆಲ್ಲ ಸುಳ್ಳು. ಯಾವ ಶಾಸಕರು ಈಗಲ್ಟನ್ ರೆಸಾರ್ಟ್ ಗೆ ಬಂದಿಲ್ಲ. ಈಗಲ್ಟನ್ ಮುಚ್ಚಿದೆ, ರಿಪೇರಿ ಆಗುತ್ತಿದೆ. ಯಾರು ಹೈದರಾಬಾದ್, ಯಾರು ಬೆಂಗಳೂರಿಗೆ ಬಂದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ," ಎಂದು ಸ್ಪಷ್ಟಪಡಿಸಿದರು.

ಪಕ್ಷದ ನಿಲುವಿನ ಕುರಿತು ಮಾತನಾಡಿದ ಅವರು, ಈ ವಿಚಾರದಲ್ಲಿ ಹೈಕಮಾಂಡ್ ತಮ್ಮ ಬಳಿ ಚರ್ಚಿಸಿಲ್ಲ ಎಂದು ಹೇಳಿದ್ದಾರೆ. "ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಅವರು ಪ್ರಚಾರಕ್ಕೆ ಹೋಗಲು ಹೇಳಿದರೆ ಹೋಗುತ್ತೇನೆ. ಪ್ರಣಾಳಿಕೆ ಬಿಡುಗಡೆ ಮಾಡಲು ಸೂಚಿಸಿದರೆ ಅದನ್ನೂ ಮಾಡುತ್ತೇನೆ. ಅದನ್ನು ಬಿಟ್ಟರೆ ನನಗೆ ಯಾವುದೇ ಮಾಹಿತಿ ಇಲ್ಲ," ಎಂದು ಪಕ್ಷದ ವರಿಷ್ಠರ ನಿರ್ಧಾರಗಳಿಗೆ ಬದ್ಧವಾಗಿರುವುದನ್ನು ಪುನರುಚ್ಚರಿಸಿದ್ದಾರೆ.

ಯಡಿಯೂರಪ್ಪಗೆ ಶುಭಾಶಯ:

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ಅವರಿಗೆ ಉತ್ತಮ ಆರೋಗ್ಯ ಸಿಗಲಿ, ದೀರ್ಘಕಾಲ ಬಾಳಲಿ. ರಾಜ್ಯಕ್ಕೆ ಅವರು ಸೇವೆ ಮಾಡಿದ್ದಾರೆ. ಪಕ್ಷದವರು ಸಂಘಟನೆ ಮಾಡಿಕೊಂಡು ಅವರಿಗೆ ಗೌರವ ಕೊಡಬೇಕು ಎನ್ನುತ್ತಿದ್ದಾರೆ, ಅವರ ಡ್ಯೂಟಿ ಅವರು ಮಾಡಲಿ," ಎಂದು ಶುಭ ಹಾರೈಸಿದರು. ರಾಜಕೀಯವಾಗಿ ಇಬ್ಬರ ವಿಚಾರಧಾರೆಗಳು ಬೇರೆಬೇರೆ ಎಂಬುದನ್ನೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಪುದುಚೇರಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ತಾವು ದೇವಸ್ಥಾನಕ್ಕೆ ಹೋಗಿರಲಿಲ್ಲ, ಶನೇಶ್ವರನನ್ನು ನೋಡಲು ತೆರಳಿದ್ದೆ ಎಂದು ನಗುತ್ತಲೇ ಉತ್ತರಿಸಿದರು.

ಮರಗಳ ತೆರವು ಮತ್ತು ಟಿಕೆಟ್ ವಿವಾದ:

ನಗರದಲ್ಲಿ ಮರಗಳ ತೆರವು ಹಾಗೂ ಕ್ರಿಕೆಟ್ ಟಿಕೆಟ್ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಕೊಂಚ ಆಕ್ರೋಶಭರಿತರಾಗಿಯೇ ಉತ್ತರಿಸಿದ ಅವರು, "ಅರಮನೆ ಪಕ್ಕದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪೊಲೀಸ್ ಇಲಾಖೆ ನೀಡಿದ 480 ಮರಗಳ ಪಟ್ಟಿಯಂತೆ ರೆಂಬೆ-ಕೊಂಬೆ ಕತ್ತರಿಸಲು ಸೂಚಿಸಿದ್ದೇನೆ. ಟಿಕೆಟ್ ವಿವಾದದಲ್ಲೂ ಎಲ್ಲರ ಬೇಡಿಕೆಗಳನ್ನು ಈಡೇರಿಸಲಾಗಿದೆ," ಎಂದು ಸಮರ್ಥಿಸಿಕೊಂಡರು. ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, "ಇದು ಗುಜರಾತ್ ಮೂಲದವರ ರಾಜಕೀಯ, ತಮಗೆ ಹೆಚ್ಚು ಟಿಕೆಟ್ ಬೇಕು, ವ್ಯಾಪಾರ ಹೆಚ್ಚಾಗಬೇಕು ಎಂದು ಈ ರೀತಿ ಡ್ರಾಮಾ ಮಾಡುತ್ತಿದ್ದಾರೆ. ಎಲ್ಲ ಪಕ್ಷಗಳ ನಾಯಕರೂ ಟಿಕೆಟ್ ಬೇಡ ಎಂದರೆ ಸರೆಂಡರ್ ಮಾಡಲಿ," ಎಂದು ಸವಾಲು ಹಾಕಿದರು.

Read More
Next Story