ಪಿಂಕ್ ಮೆಟ್ರೋಗೆ ಚಾಲನೆ- ಎಷ್ಟು ನಿಲ್ದಾಣಗಳಿವೆ? ಟಿಕೆಟ್ ದರ ಎಷ್ಟು?
ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಇಂದಿನಿಂದ ಉದ್ಘಾಟನೆಯಾಗ್ತಿದೆ. ಹಾಗಾದ್ರೆ ಈ ಮಾರ್ಗದಲ್ಲಿ ಪ್ರಯಾಣಿಸಲು ಟಿಕೆಟ್ ದರ ಎಷ್ಟು ಗೊತ್ತಾ? ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗದಲ್ಲಿ ನಾಳೆ ಮುಂಜಾನೆಯಿಂದ ಸಾರ್ವಜನಿಕರ ಸಂಚಾರಕ್ಕೆ ಮೆಟ್ರೋ ಮುಕ್ತವಾಗಲಿದೆ.

ಈ ಮಾರ್ಗದಲ್ಲಿ ಒಟ್ಟು ಐದು ಮೆಟ್ರೋ ರೈಲುಗಳು ಸಂಚರಿಸಲಿದ್ದು, ಪ್ರತಿ ಎಂಟು ನಿಮಿಷಕ್ಕೊಮ್ಮೆ ಒಂದು ರೈಲು ಲಭ್ಯವಾಗಲಿದೆ.
ಇನ್ನು ಟಿಕೆಟ್ ದರದ ವಿಚಾರಕ್ಕೆ ಬಂದ್ರೆ, ಕನಿಷ್ಠ 10 ರೂಪಾಯಿ ಹಾಗೂ ಗರಿಷ್ಠ 30 ರೂಪಾಯಿ ನಿಗದಿಪಡಿಸಲಾಗಿದೆ. ತಾವರೆಕೆರೆಯಿಂದ ಜೆಪಿ ನಗರ ನಾಲ್ಕನೇ ಹಂತಕ್ಕೆ 10 ರೂಪಾಯಿ, ಐಐಎಂಬಿ ಮತ್ತು ಹುಳಿಮಾವಿಗೆ 20 ರೂಪಾಯಿ, ಕಾಳೇನ ಅಗ್ರಹಾರಕ್ಕೆ 30 ರೂಪಾಯಿ ದರ ಇರಲಿದೆ. ಅದೇ ರೀತಿ ಕಾಳೇನ ಅಗ್ರಹಾರದಿಂದ ಹುಳಿಮಾವು ಹಾಗೂ ಐಐಎಂಬಿಗೆ 10 ರೂಪಾಯಿ, ಜೆಪಿ ನಗರ ನಾಲ್ಕನೇ ಹಂತಕ್ಕೆ 20 ರೂಪಾಯಿ ದರ ನಿಗದಿಯಾಗಿದೆ.
Next Story