x

ನೈಸ್ ಅಕ್ರಮ: ಜಯಚಂದ್ರ ನೇತೃತ್ವದ ಸದನ ಸಮಿತಿ ಕೊಟ್ಟ ವರದಿಯ ದಶಕದ ಕಥೆ

ನೈಸ್ ಅಕ್ರಮದ ಬಗ್ಗೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಟಿ.ಬಿ.‌ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಅದು ನೀಡಿದ ವರದಿ ಬಗ್ಗೆ ಸಮಿತಿ ಸದಸ್ಯರಾಗಿದ್ದ ಶಾಸಕ ಎಂ. ಸತೀಶ್‌ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.


ನೈಸ್ ಯೋಜನೆಯ ಅಕ್ರಮದ ಸಂಬಂಧಿಸಿದಂತೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಜೆಡಿಎಸ್ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಹೈಕೋರ್ಟ್ ನೈಸ್ ಯೋಜನೆ ಬಗ್ಗೆ ನೀಡಿದ ಅಭಿಪ್ರಾಯ ಇದೀಗ ನೈಸ್ ಯೋಜನೆ ಅಕ್ರಮದ ಬಗ್ಗೆ ಸಾಕಷ್ಟು ಚರ್ಚೆಯ ವಿಚಾರವಾಗಿದೆ. ನೈಸ್ ಯೋಜನೆ ಬಗ್ಗೆ 2013 ರಿಂದ 2015 ರಲ್ಲಿ ಸದನ ಸಮಿತಿ ನೀಡಿದ್ದ ವರದಿಯ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿ.ಬಿ.‌ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ರಚನೆಯಾಗಿ 11 ತಿಂಗಳ ಕಾಲ ಅಧ್ಯಯನ ಹಾಗು ಪರಿಶೀಲನೆ ನಡೆಸಿ ವರದಿ ನೀಡಲಾಗಿತ್ತು. ಈ ವರದಿಯಲ್ಲಿ ನೈಸ್ ಯೋಜನೆಯಲ್ಲಿ ಅಕ್ರಮದ ಬಗ್ಗೆ ಮಾಹಿತಿ ನೀಡಿತ್ತು. ಸದನ ಸಮಿತಿಯಲ್ಲಿ ಸದಸ್ಯರಾಗಿದ್ದ ಬಿಜೆಪಿ ಶಾಸಕ ಎಂ.‌ಸತೀಶ್ ರೆಡ್ಡಿ ʼದ ಫೆಡರಲ್ ಕರ್ನಾಟಕʼ ಸಂದರ್ಶನದಲ್ಲಿ ವರದಿ ಬಗ್ಗೆ ಹಲವು ವಿಚಾರಗಳನ್ನು ಹೇಳಿದ್ದಾರೆ.

2013 ರಲ್ಲಿ ವಿಧಾನಸಭೆಯಲ್ಲಿ ನೈಸ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾದಾಗ ಆಗಿನ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಸದನ ಸಮಿತಿ ರಚಿಸಿದ್ದರು. 11 ತಿಂಗಳ ಕಾಲ ಸಮಿತಿ ಅಧ್ಯಯನ ನಡೆಸಿ ಸ್ಥಳ ಪರಿಶೀಲಿಸಿ ರೈತರು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ವರದಿ ತಯಾರು ಮಾಡಲಾಯಿತು ಎಂದು ಹೇಳಿದರು. ನೈಸ್ ಪೂರ್ಣವಾಗಿ ಕಾಂಕ್ರೀಟ್ ರಸ್ತೆ ಮಾಡಿ ಟೋಲ್ ಸಂಗ್ರಹಿಸಬೇಕಿತ್ತು. ಆದರೆ ನಾವು ಪರಿಶೀಲನೆ ನಡೆಸಿದ ವೇಳೆ ಪೂರ್ಣವಾಗಿ ರಸ್ತೆ ಮಾಡದೆ ಟೋಲ್ ಕಲೆಕ್ಟ್ ಮಾಡುತ್ತಿರುವುದು ಗೊತ್ತಾಯಿತು ಎಂದು ಹೇಳಿದರು.

ಹೆಚ್ಚುವರಿಯಾಗಿ 1500 ಎಕರೆ ಭೂಮಿಯನ್ನು ನೈಸ್ ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿರುವುದು ಕಂಡು ಬಂದಿದೆ. ಈ ಜಮೀನನ್ನು ರೈತರಿಗೆ ವಾಪಸು ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು. ಹೆಚ್ಚುವರಿಯಾಗಿ ವಶದಲ್ಲಿದ್ದ ರೈತರ ಜಮೀನನ್ನು ರಿಯಲ್ ಎಸ್ಟೇಟ್ ಗೆ ಬಳಸಲು ನೈಸ್ ಉದ್ದೇಶಿದೆ. ಈ ಬಗ್ಗೆ ಸಮಿತಿಯ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು. ರಸ್ತೆಗೆ ಅವಶ್ಯಕವಿಲ್ಲದೆ ಖಾಲಿ ಉಳಿದಿದ್ದ ಜಮೀನಿಗೂ ನಮ್ಮ ಸಮಿತಿಯು ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಹೇಳಿದರು. ಈ ಜಮೀನನ್ನು ಮಾರಿ ಹಣ ಮಾಡಿಕೊಳ್ಳಲು ನೈಸ್ ಸಂಸ್ಥೆ ಉದ್ದೇಶವಾಗಿದೆ ಎಂದು ಹೇಳಿದರು.

ಹೆಚ್ಚುವರಿಯಾಗಿ ಉಳಿದಿದ್ದ 1512 ಎಕರೆ ಜಮೀನಿನ ಬೆಲೆ 11 ವರ್ಷದ ಹಿಂದೆ ಎಕರೆಗೆ 6 ಕೋಟಿ ಇತ್ತು. ಈಗ ಎಕರೆಗೆ 15 ಕೋಟಿಯಿದೆ ಎಂದು ಹೇಳಿದರು. ನೈಸ್ ಸಂಸ್ಥೆ ಹಿರಿಯ ನಿವೃತ್ತ IAS ಅಧಿಕಾರಿಗಳನ್ನು ತಮ್ಮ ಸಂಸ್ಥೆಗೆ ನೇಮಿಸಿಕೊಂಡಿದೆ. ಸರ್ಕಾರದಲ್ಲಿನ ಲೋಪಗಳನ್ನು ಬಳಸಿಕೊಂಡು, ನ್ಯಾಯಾಲಯಗಳಲ್ಲಿ ಸರಿಯಾದ ದಾಖಲೆ ನೀಡಲು ಆಗದ ರೀತಿಯಲ್ಲಿ ಮ್ಯಾನೇಜ್ ಮಾಡಲಾಗಿದೆ ಎಂದು ಆರೋಪಿಸಿದರು.

ಸುಮಾರು 25 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ನಾವು ನೀಡಿದ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ ಎಂದು ಹೇಳಿದರು. ನಾವು ವರದಿ ನೀಡುವಾಗ ಸಾಕಷ್ಟು ಬೆದರಿಕೆ ಹಾಗು ಒತ್ತಡಗಳು ಬಂದಿದ್ದವು ಅದರ ನಡುವೆ ನಾವು ವರದಿ ನೀಡಿದ್ದೇವೆ ಎಂದು ಹೇಳಿದರು. ಮಾಜಿ ಪ್ರಧಾನಿ ಎಚ್. ‌ಡಿ. ದೇವೇಗೌಡ ಅವರು ಬೆಳಗಿನ ಜಾವ 5 ಕ್ಕೆ ಕರೆ ಮಾಡಿ ಯೋಜನೆಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿ ಹಾಗು ದಾಖಲೆಗಳು ಸಹಾ ಪ್ರಮುಖವಾಗಿದ್ದವು ಎಂದು ಹೇಳಿದರು.

ಹೈಕೋರ್ಟ್ ಇತ್ತೀಚೆಗೆ ಸಹಾ ಈ ಯೋಜನೆ ದೊಡ್ಡ ಹಗರಣ ಎಂದು ಹೇಳಿದೆ.‌ ಸರ್ಕಾರ ಈಗಾಲದರೂ ಎಚ್ಚೆತ್ತುಕೊಂಡು ಈ ಯೋಜನೆ ಬಗ್ಗೆ ಸಮಿತಿ ನೀಡಿರುವ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಇಷ್ಟೆಲ್ಲಾ ಅಕ್ರಮವಾಗಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಶ್ಚರ್ಯವಾಗುತ್ತಿದೆ. ಸುಮಾರು 50 ಸಾವಿರ ಕೋಟಿಗೂ ಹೆಚ್ಚು ಹಗರಣ ಇದಾಗಿದೆ ಇವರ ಹಣದ ಪ್ರಭಾವದಿಂದ ರಾಜಕೀಯದಿಂದ ಹಿಡಿದು ಅಧಿಕಾರಿಗಳವರೆಗೂ ಫಲಾನುಭವಿಗಳಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಸರ್ಕಾರ ಸಮಿತಿ ಮಾಡಿದ್ದು ಆದರೆ ವರದಿ ಸ್ವೀಕಾರ ಮಾಡಲಿಲ್ಲ ಜಾರಿಗೆ ತರಲಿಲ್ಲ ಎಂಬ ನೋವು ಆಗಿದೆ ಎಂದು ಹೇಳಿದರು.

Read More
Next Story