ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಜುಲೈ 24ರಿಂದ ಹೊಸ ದರ ಜಾರಿ
x

ಬೆಂಗಳೂರಿನ ಬಾಮೂಲ್ ನಂದಿನಿ ತುಪ್ಪ ಹಾಗೂ ಬೆಣ್ಣೆ ಉತ್ಪನ್ನಗಳ ಚಿಲ್ಲರೆ ದರವನ್ನು ಪರಿಷ್ಕರಿಸಿದೆ. 

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಜುಲೈ 24ರಿಂದ ಹೊಸ ದರ ಜಾರಿ

ಬೆಂಗಳೂರಿನ ಬಾಮೂಲ್ ನಂದಿನಿ ತುಪ್ಪ ಹಾಗೂ ಬೆಣ್ಣೆ ಉತ್ಪನ್ನಗಳ ಚಿಲ್ಲರೆ ದರವನ್ನು ಪರಿಷ್ಕರಿಸಿದ್ದು, ಜುಲೈ 24ರಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ.


Click the Play button to hear this message in audio format

ಬೆಂಗಳೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಾಮೂಲ್) ನಂದಿನಿ ಬ್ರ್ಯಾಂಡ್‌ನ ತುಪ್ಪ ಮತ್ತು ಬೆಣ್ಣೆ ಉತ್ಪನ್ನಗಳ ಚಿಲ್ಲರೆ ದರವನ್ನು ಪರಿಷ್ಕರಿಸಿದೆ. ಹೊಸ ದರಗಳು ಜುಲೈ 24ರಿಂದ ಜಾರಿಗೆ ಬರಲಿದ್ದು, ಬಾಮೂಲ್‌ನ ಎಲ್ಲಾ ಚಿಲ್ಲರೆ ಮಳಿಗೆಗಳು, ಡೆಪೋಗಳು, ಗ್ರಾಹಕ ಮಳಿಗೆಗಳು, ಫ್ರಾಂಚೈಸಿಗಳು, ಸಿಎಸ್‌ಡಿ ಕ್ಯಾಂಟೀನ್‌ಗಳು ಹಾಗೂ ನಂದಿನಿ ಹಾಲು ಪಾರ್ಲರ್‌ಗಳಲ್ಲಿ ಅನ್ವಯವಾಗಲಿವೆ.

ಪರಿಷ್ಕೃತ ದರಗಳ ಪ್ರಕಾರ, ನಂದಿನಿ ತುಪ್ಪದ 10 ಮಿ.ಲೀ. ಸ್ಯಾಶೆ 10 ರೂ., 200 ಮಿ.ಲೀ. ಪ್ಯಾಕ್ 160ರೂ., 500 ಮಿ.ಲೀ. ಪ್ಯಾಕ್ 358 ರೂ. ಹಾಗೂ 1 ಲೀಟರ್ ಪ್ಯಾಕ್ 715ರೂ.ಕ್ಕೆ ಲಭ್ಯವಾಗಲಿದೆ.

ಪಿಇಟಿ ಜಾರ್‌ನಲ್ಲಿ ಮಾರಾಟವಾಗುವ ತುಪ್ಪದ 50 ಮಿ.ಲೀ. ಪ್ಯಾಕ್ 55 ರೂ., 100 ಮಿ.ಲೀ. 90 ರೂ., 200 ಮಿ.ಲೀ. 170 ರೂ., 500 ಮಿ.ಲೀ. 368 ರೂ., 1 ಲೀಟರ್ 735 ರೂ. ಹಾಗೂ 5 ಲೀಟರ್ ಪ್ಯಾಕ್ 3,575 ರೂ.ಎಂದು ನಿಗದಿಪಡಿಸಲಾಗಿದೆ.

ಟಿನ್ ಪ್ಯಾಕ್‌ಗಳಲ್ಲಿ ಮಾರಾಟವಾಗುವ ತುಪ್ಪದ 1 ಲೀಟರ್ ಟಿನ್ 750 ರೂ. ಹಾಗೂ 15 ಕೆ.ಜಿ. ಟಿನ್ 11,625ರೂ.ಗೆ ದೊರೆಯಲಿದೆ.

ಬೆಣ್ಣೆಯ ದರವನ್ನೂ ಬಾಮೂಲ್ ಪರಿಷ್ಕರಿಸಿದೆ. ನಂದಿನಿ ಬಟರ್ ಬ್ಲಿಸ್ಟರ್ ಫ್ಯಾಮಿಲಿ ಪ್ಯಾಕ್ 80ರೂ.ಕ್ಕೆ ಲಭ್ಯವಾಗಲಿದೆ. ಉಪ್ಪಿನ ಬೆಣ್ಣೆಯ 100 ಗ್ರಾಂ ಪ್ಯಾಕ್ 70 ರೂ., 500 ಗ್ರಾಂ ಪ್ಯಾಕ್ 310 ರೂ. ಹಾಗೂ 10 ಕೆ.ಜಿ. ಬಲ್ಕ್ ಪ್ಯಾಕ್ 600ರೂ.ಗೆ ನಿಗದಿಯಾಗಿದೆ. ಉಪ್ಪಿಲ್ಲದ ಬೆಣ್ಣೆಯ 200 ಗ್ರಾಂ ಪ್ಯಾಕ್ 135ರೂ. ಹಾಗೂ 500 ಗ್ರಾಂ ಪ್ಯಾಕ್ 330ರೂ.ಗೆ ಮಾರಾಟವಾಗಲಿದೆ.

ಈ ಪರಿಷ್ಕೃತ ದರಗಳು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ ಎಂದು ಬಾಮೂಲ್ ತನ್ನ ಅಧಿಕೃತ ಆದೇಶದಲ್ಲಿ ತಿಳಿಸಿದೆ.

Read More
Next Story