ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಏರಿಕೆ; ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್
x

ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಏರಿಕೆ; ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್

ಹಾಲು, ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಕೆಎಂಎಫ್ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ದರವನ್ನೂ ಹೆಚ್ಚಿಸಿದೆ. ಹೊಸ ದರಗಳು ಬುಧವಾರದಿಂದ ಜಾರಿಗೆ ಬಂದಿವೆ. ಸಂಪೂರ್ಣ ದರಪಟ್ಟಿ ಇಲ್ಲಿದೆ.


Click the Play button to hear this message in audio format

ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಗಳನ್ನೂ ಹೆಚ್ಚಿಸಿದೆ. ಪರಿಷ್ಕೃತ ದರಗಳು ಬುಧವಾರದಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಒಂದು ವರ್ಷದ ಅವಧಿಯಲ್ಲಿ ನಂದಿನಿ ತುಪ್ಪದ ಬೆಲೆ ಮೂರನೇ ಬಾರಿಗೆ ಹೆಚ್ಚಳವಾಗಿದೆ. 2025ರ ನವೆಂಬರ್ ಹಾಗೂ 2026ರ ಜುಲೈನಲ್ಲಿ ತುಪ್ಪದ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಬೆಲೆ ಹೆಚ್ಚಿಸಲಾಗಿದೆ. ಈಗಾಗಲೇ ಐದು ದಿನಗಳ ಹಿಂದೆ ಹಾಲು ಮತ್ತು ಮೊಸರಿನ ದರ ಏರಿಕೆ ಜಾರಿಗೆ ಬಂದಿತ್ತು.

ಕೆಎಂಎಫ್ ಪರಿಷ್ಕರಿಸಿರುವ ದರಗಳ ಪ್ರಕಾರ, ನಂದಿನಿ ತುಪ್ಪದ ಒಂದು ಲೀಟರ್ ಸ್ಯಾಚೆಟ್ ಬೆಲೆ 715 ರೂ.ಗಳಿ<ದ 850 ರೂ.ಕ್ಕೆ ಏರಿಕೆಯಾಗಿದೆ. ಒಂದು ಲೀಟರ್ ಪೆಟ್ ಜಾರ್ ಬೆಲೆ 735 ರೂ. ರಿಂದ 870 ರೂ.ಗಳಿಗೆ, ಒಂದು ಲೀಟರ್ ಟಿನ್ ಬೆಲೆ 750 ರೂ.ಗಳಿಂದ 870ರೂ.ಗಳಿಗೆ ಹೆಚ್ಚಳವಾಗಿದೆ. ಐದು ಲೀಟರ್ ಪ್ಯಾಕ್ ಬೆಲೆ 3,575 ರೂ.ಗಳಿಂದ 4,250 ರೂ.ಗಳಿಗೆ ಹಾಗೂ 15 ಲೀಟರ್ ಟಿನ್ ಬೆಲೆ 11,625 ರೂ.ರಿಂದ 14,000 ರೂ.ಗಳಿಗೆ ಏರಿಕೆಯಾಗಿದೆ.

ಇನ್ನು ನಂದಿನಿ ಬೆಣ್ಣೆಯ ಒಂದು ಕೆ.ಜಿ. ಪ್ಯಾಕ್ ಬೆಲೆ 700 ರೂ.ಗಳಿಂದ 780 ರೂ.ವರೆಗೆ ಹೆಚ್ಚಳವಾಗಿದೆ. 500 ಗ್ರಾಂ ಉಪ್ಪಿಲ್ಲದ ಬೆಣ್ಣೆಯ ಬೆಲೆ 285 ರೂ.ಗಳಿಂದ 390ರೂ.ವರೆಗೆ ಏರಿಕೆಯಾಗಿದೆ. 500 ಗ್ರಾಂ ಉಪ್ಪು ಸಹಿತ ಬೆಣ್ಣೆಗೆ 380 ರೂ., 100 ಗ್ರಾಂ ಪ್ಯಾಕ್‌ಗೆ 90 ರೂ. ಹಾಗೂ 200 ಗ್ರಾಂ ಉಪ್ಪಿಲ್ಲದ ಬೆಣ್ಣೆಗೆ 160 ರೂ ಹೊಸ ದರ ನಿಗದಿಪಡಿಸಲಾಗಿದೆ.

ಪನ್ನೀರ್ ಬೆಲೆಯೂ ಏರಿಕೆಯಾಗಿದ್ದು, ಒಂದು ಕೆ.ಜಿ. ಪ್ಯಾಕ್ 408 ರೂ.ಗಳಿಂದ 485 ರೂ.ವರೆಗೆ ಹೆಚ್ಚಳವಾಗಿದೆ. 500 ಗ್ರಾಂ ಪ್ಯಾಕ್ ಬೆಲೆ 260 ರೂ.ಗಳಿಂದ ಏರಿಕೆಯಾಗಿದೆ. 200 ಗ್ರಾಂ ಪ್ಯಾಕ್ ಬೆಲೆ 96 ರೂ.ಗಳಿಂದ 115ರೂ.ವರೆಗೆ ಹೆಚ್ಚಳವಾಗಿದ್ದು, 200 ಗ್ರಾಂ ಮೀಡಿಯಂ ಫ್ಯಾಟ್ ಪನ್ನೀರ್ ಬೆಲೆ 110 ರೂ.ಗಳವರೆಗೆ ನಿಗದಿಯಾಗಿದೆ.

ಇದೇ ವೇಳೆ ಗುಜರಾತ್‌ನ ಅಮೂಲ್ ಸಂಸ್ಥೆಯೂ ನವೆಂಬರ್ 2ರಿಂದ ಜಾರಿಗೆ ಬರುವಂತೆ ತುಪ್ಪದ ಬೆಲೆ ಹೆಚ್ಚಿಸಿದೆ. ಅಮೂಲ್ ತುಪ್ಪದ ಒಂದು ಲೀಟರ್ ಪ್ಯಾಕ್ ಬೆಲೆ 680 ರೂ. ಎಂದು ವರದಿಯಾಗಿದೆ. ನಂದಿನಿ ಮತ್ತು ಅಮೂಲ್ ತುಪ್ಪದ ದರಗಳ ನಡುವಿನ ವ್ಯತ್ಯಾಸವೂ ಗ್ರಾಹಕರ ಗಮನ ಸೆಳೆಯುತ್ತಿದೆ.

ಒಟ್ಟಿನಲ್ಲಿ ಹಾಲು, ಮೊಸರು ಬೆಲೆ ಏರಿಕೆಯ ಬೆನ್ನಲ್ಲೇ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ದರವೂ ಹೆಚ್ಚಳವಾಗಿರುವುದು ನಂದಿನಿ ಉತ್ಪನ್ನಗಳನ್ನು ಅವಲಂಬಿಸಿರುವ ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗಿದೆ.

Read More
Next Story