ವೈದ್ಯರು–ರೋಗಿಗಳ ನಡುವಿನ ಭಾಷಾ ಸಂಘರ್ಷಕ್ಕೆ ಕನ್ನಡವೇ ಸೇತುವೆ
ವೈದ್ಯರು ಮತ್ತು ರೋಗಿಗಳ ನಡುವಿನ ಭಾಷಾ ಸಮಸ್ಯೆ ನಿವಾರಣೆಗೆ ವೈದ್ಯಕೀಯ ವಿದ್ಯಾರ್ಥಿಗಳು ಕನ್ನಡ ಕಲಿಯಬೇಕು. ರೋಗಿಗಳಿಗೆ ಅವರ ಭಾಷೆಯಲ್ಲೇ ಚಿಕಿತ್ಸೆ ವಿವರಿಸುವುದು ವೈದ್ಯರ ಜವಾಬ್ದಾರಿ ಎಂದಿದ್ದಾರೆ ವಿನಯ್ ಕುಮಾರ್.
ವೈದ್ಯರು ಕನ್ನಡ ಮಾತನಾಡದಿರುವುದು, ರೋಗಿಗಳಿಗೆ ವೈದ್ಯರ ಭಾಷೆ ಅರ್ಥವಾಗದಿರುವುದು ಸೇರಿದಂತೆ ಭಾಷೆಯ ವಿಚಾರವಾಗಿ ವೈದ್ಯರು ಮತ್ತು ರೋಗಿಗಳ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುತ್ತಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೈದ್ಯರು ಕನ್ನಡ ಕಲಿಯುವುದು ಮುಖ್ಯ. ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಸಮಸ್ಯೆಗಳು ಮತ್ತು ಔಷಧೋಪಚಾರದ ವಿವರಗಳನ್ನು ರೋಗಿಗಳಿಗೆ ಅವರ ಭಾಷೆಯಲ್ಲಿ ಅರ್ಥವಾಗುವಂತೆ ತಿಳಿಸುವುದು ವೈದ್ಯರ ಜವಾಬ್ದಾರಿ. ಕನ್ನಡಿಗ ರೋಗಿಗಳೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಲು ವೈದ್ಯಕೀಯ ವಿದ್ಯಾರ್ಥಿಗಳೂ ಕನ್ನಡ ಕಲಿಯಬೇಕು ಎಂದು ಬಿಎಂಸಿಆರ್‌ಐ ಅಂತಿಮ ವರ್ಷದ ವಿದ್ಯಾರ್ಥಿ ವಿನಯ್ ಕುಮಾರ್ ವಿ. ಅಭಿಪ್ರಾಯಪಟ್ಟಿದ್ದಾರೆ.
Next Story

