ದೀಪಾವಳಿಗೆ ವಿಶೇಷ ಅಲಂಕಾರ: 5.25 ಕೋಟಿ ರೂ. ನೋಟುಗಳಿಂದ ಕಂಗೊಳಿಸಿದ ಮಹಾಲಕ್ಷ್ಮಿ ದೇಗುಲ
ಮಧ್ಯಪ್ರದೇಶದ ದೇವಾಸ್‌ನ ಮಾಂ ಯೋಗಮಾಯಾ ಮಹಾಲಕ್ಷ್ಮಿ ದೇವಸ್ಥಾನವನ್ನು 5.25 ಕೋಟಿ ರೂ. ಮೌಲ್ಯದ ನೋಟುಗಳಿಂದ ಅಲಂಕರಿಸಲಾಗಿದ್ದು, ದೀಪಾವಳಿಗೆ 11 ಸಾವಿರ ಕಮಲ ಅರ್ಪಣೆಗೆ ಸಿದ್ಧತೆ ನಡೆದಿದೆ.
ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಮಾಂ ಯೋಗಮಾಯಾ ಮಹಾಲಕ್ಷ್ಮಿ ದೇವಸ್ಥಾನ ದೀಪಾವಳಿ ಸಂಭ್ರಮಕ್ಕೆ ಸಜ್ಜಾಗಿದೆ. ಬರೋಬ್ಬರಿ 5.25 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಅಷ್ಟೇ ಅಲ್ಲ, ದೀಪಾವಳಿಯಂದು ದೇವಿಗೆ 11 ಸಾವಿರ ಕಮಲದ ಹೂವುಗಳನ್ನು ಅರ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಟುಗಳ ಅಲಂಕಾರ ಭಕ್ತರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಿದೆ.
Next Story

