ಕೆ.ಆರ್. ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ
x

'ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು ಕಳ್ಳರ ಮಕ್ಕಳು' ಎಂಬ ವಿವಾದಾತ್ಮಕ ಬರಹವಿರುವ ಪೋಸ್ಟರ್‌ಗಳನ್ನು ಬಿಜೆಪಿ ಕಚೇರಿಯ ಶಟರ್, ಗೋಡೆ ಹಾಗೂ ವಿಜಯೇಂದ್ರ ನಿವಾಸದ ಕಾಂಪೌಂಡ್‌ಗೆ ಅಂಟಿಸಲಾಗಿದೆ.

ಕೆ.ಆರ್. ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

'ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು ಕಳ್ಳರ ಮಕ್ಕಳು' ಎಂಬ ವಿವಾದಾತ್ಮಕ ಬರಹವಿರುವ ಪೋಸ್ಟರ್‌ಗಳನ್ನು ಬಿಜೆಪಿ ಕಚೇರಿಯ ಶಟರ್, ಗೋಡೆ ಹಾಗೂ ವಿಜಯೇಂದ್ರ ನಿವಾಸದ ಕಾಂಪೌಂಡ್‌ಗೆ ಅಂಟಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ಅತಿ ಹೆಚ್ಚು ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಒಂದಾದ ಕೆ.ಆರ್. ಪುರದ ಟಿನ್ ಫ್ಯಾಕ್ಟರಿ ಜಂಕ್ಷನ್ ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿಸ್ತೃತ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪಾದಚಾರಿಗಳ ಸುರಕ್ಷತೆ, ಸುಗಮ ವಾಹನ ಸಂಚಾರ ಹಾಗೂ ಮೆಟ್ರೊ, ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ನಡುವೆ ಅಡೆತಡೆಯಿಲ್ಲದ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನೂತನ ಯೋಜನೆಯು ಸುಸಜ್ಜಿತ ಫುಟ್‌ಪಾತ್, ಬಸ್ ಬೇ, ರಸ್ತೆ ಅಗಲೀಕರಣ, ಜಂಕ್ಷನ್‌ನ ವೈಜ್ಞಾನಿಕ ವಿನ್ಯಾಸ ಹಾಗೂ ವಾಹನಗಳ ಮುಕ್ತ ಎಡ ತಿರುವಿಗೆ (ಫ್ರೀ ಲೆಫ್ಟ್ ಟರ್ನ್) ಆದ್ಯತೆ ನೀಡಲಿದೆ.

ಕಳಪೆ ನಿರ್ವಹಣೆಗೆ ತರಾಟೆ, ಗುಂಡಿ ಮುಚ್ಚಲು ಗಡುವು

ನವೆಂಬರ್ ೭ರಂದು ಟಿನ್ ಫ್ಯಾಕ್ಟರಿ ಜಂಕ್ಷನ್ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಸಚಿವರು, ರಸ್ತೆಗಳ ಕಳಪೆ ನಿರ್ವಹಣೆಯ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಮೆಟ್ರೊ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಜಂಕ್ಷನ್‌ಗೆ ಬೆಸೆಯುವ ಸಂಪರ್ಕ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಂದಿನ ಒಂದು ವಾರದೊಳಗೆ ಮುಚ್ಚಬೇಕು ಎಂದು ಗಡುವು ನೀಡಿದರು.

ಪಾಲಿಕೆ ಅನುದಾನ, ತಜ್ಞರ ಜಂಟಿ ಯೋಜನೆ

ಈ ಮಹತ್ವಾಕಾಂಕ್ಷಿ ಜಂಕ್ಷನ್ ಅಭಿವೃದ್ಧಿ ಯೋಜನೆಯನ್ನು ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ), ಮೆಟ್ರೊ ಅಧಿಕಾರಿಗಳು ಹಾಗೂ ನಗರ ವಿನ್ಯಾಸ ತಜ್ಞರು ಜಂಟಿಯಾಗಿ ಸಿದ್ಧಪಡಿಸಲಿದ್ದಾರೆ. ಈ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ನಗರ ಪಾಲಿಕೆಯ ಮೂಲಕವೇ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

'ವಾರ್ಡ್ ಒನ್' ಅಭಿಯಾನದ ಎರಡನೇ ಹಂತ ಆರಂಭ

ನಗರದ ಮೂಲಸೌಕರ್ಯ ಸುಧಾರಣೆಗಾಗಿ ಹಮ್ಮಿಕೊಂಡಿರುವ 'ವಾರ್ಡ್ ಒನ್' ಅಭಿಯಾನದ ಎರಡನೇ ಹಂತವು ಸುಮಾರು 40 ವಾರ್ಡ್‌ಗಳಲ್ಲಿ ಆರಂಭವಾಗಿದೆ. ಈ ಹಿಂದೆ 43 ವಾರ್ಡ್‌ಗಳಲ್ಲಿ ನಡೆದ ಮೊದಲ ಹಂತದ ಅಭಿಯಾನದಲ್ಲಿ ಗುರುತಿಸಲಾಗಿದ್ದ ಶೇಕಡಾ 90ರಷ್ಟು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

Read More
Next Story