x

ಫ್ಲೈಓವರ್‌ನಲ್ಲಿ ಬೈಕ್ ಬ್ಯಾನ್ ಸವಾರರ ಆಕ್ರೋಶಕ್ಕೆ ಕಮಿಷನರ್​ ಉತ್ತರವೇನು?

ಕೊಡಿಗೇಹಳ್ಳಿ ಫ್ಲೈಓವರ್‌ನಲ್ಲಿ ಹೆಚ್ಚುತ್ತಿರುವ ಸರಣಿ ಅಪಘಾತ ತಡೆಯಲು ಬೈಕ್‌ ಹಾಗೂ ಆಟೋ ಸಂಚಾರವನ್ನು 24/7 ನಿಷೇಧಿಸಲಾಗಿದೆ. ನಿರ್ಧಾರದ ಕಾರಣವನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


Click the Play button to hear this message in audio format

ಬೆಂಗಳೂರಿನ ಕೊಡಿಗೇಹಳ್ಳಿ ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ ಹಾಗೂ ಆಟೋಗಳ ಸಂಚಾರವನ್ನು 24/7 ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಟ್ರಾಫಿಕ್ ಪೊಲೀಸರ ಈ ದಿಢೀರ್ ನಿರ್ಧಾರದಿಂದ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ದಿಢೀರ್ ಬ್ಯಾನ್ ಹಿಂದಿನ ಕಾರಣವೇನು ಎಂಬ ಸಾರ್ವಜನಿಕರ ಪ್ರಶ್ನೆ ಹಾಗೂ ಕೋಪಕ್ಕೆ ಇದೀಗ ಉತ್ತರ ಸಿಕ್ಕಿದೆ. ಫ್ಲೈಓವರ್‌ನಲ್ಲಿ ಹೆಚ್ಚುತ್ತಿರುವ ಸರಣಿ ಅಪಘಾತಗಳನ್ನು ತಡೆಯುವ ಉದ್ದೇಶದಿಂದಲೇ ಈ ಕಠಿಣ ನಿಯಮ ಜಾರಿಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಬೈಕ್ ಸವಾರರ ಸುರಕ್ಷತೆ ದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

Read More
Next Story