Elephant Attack| ಕಾಡಾನೆ ದಾಳಿಗೆ ಕುಶಾಲನಗರದಲ್ಲಿ ಮಾಜಿ ಗ್ರಾ.ಪಂಚಾಯತ್ ಸದಸ್ಯೆ ಬಲಿ
x

ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ. 

Elephant Attack| ಕಾಡಾನೆ ದಾಳಿಗೆ ಕುಶಾಲನಗರದಲ್ಲಿ ಮಾಜಿ ಗ್ರಾ.ಪಂಚಾಯತ್ ಸದಸ್ಯೆ ಬಲಿ

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಸೋಮವಾರ ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಆನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.


Click the Play button to hear this message in audio format

ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಸೋಮವಾರ ನಡೆದಿದೆ. ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ(53) ಮೃತ ದುರ್ದೈವಿ.

ಜಲಜಾಕ್ಷಿ ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಕೇವಲ 10 ದಿನಗಳ ಅಂತರದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಎರಡನೇ ಪ್ರಕರಣ ಇದಾಗಿದೆ.

ಕೆಲ ದಿನಗಳ ಹಿಂದೆ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಆ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸಾವು ನಡೆದಿರುವ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸಿಎಫ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಜನವರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿತ್ತು. ಮೃತರನ್ನು ಶೋಭಾ (40) ಎಂದು ಗುರುತಿಸಲಾಗಿತ್ತು.

ಮಂಗಳವಾರ ಮುಂಜಾನೆ ಶೋಭಾ ಅವರು ತಮ್ಮ ತಾಯಿ ರಾಜಮ್ಮ ಹಾಗೂ ಸಹೋದರಿ ರಾಗಿಣಿ ಅವರೊಂದಿಗೆ ಗ್ರಾಮದ ಸಮೀಪದ ಕಾಫಿ ತೋಟದಲ್ಲಿ ಮರಗಳಿಗೆ ಸುಣ್ಣ ಹಚ್ಚುವ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಪ್ರತ್ಯಕ್ಷವಾದ ಕಾಡಾನೆ ಇವರ ಮೇಲೆರಗಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಮೂವರೂ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ, ಶೋಭಾ ಅವರನ್ನು ಬೆನ್ನಟ್ಟಿದ ಸಲಗ ಅವರ ಮೇಲೆ ದಾಳಿ ನಡೆಸಿ, ಕಾಲುಗಳಿಂದ ತುಳಿದು ಸಾಯಿಸಿತ್ತು.

ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಡಾನೆಗಳ ದಾಳಿ ವಿಪರೀತಿವಾಗಿ ನಡೆಯುತ್ತಿದ್ದು, ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಮತ್ತು ಯಸಳೂರು ವಲಯಗಳಲ್ಲಿ ಮಕ್ನಾ ಹಾಗೂ ಒಂಟಿ ಸಲಗಗಳ ಹಾವಳಿ ಅತಿ ಹೆಚ್ಚಾಗಿದೆ.

ಇತ್ತಿಚೆಗೆ ನಾಡಿನೊಳಗೆ ಹೆಚ್ಚಾಗುತ್ತಿರುವ ಆನೆಗಳ ಉಪಟಳಗಳನ್ನು ಕಡಿತಗೊಳ್ಳಿಸುವ ನಿಟ್ಟಿನಲ್ಲಿ"ಆನೆ ಸೆರೆ" ಕಾರ್ಯಚರಣೆ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ, ಈ ವೇಳೆ ಅತೀ ಹೆಚ್ಚು ಉಪಟಳ ನೀಡುತ್ತಿರುವ ಟಸ್ಕರ್‌ ಹಾಗೂ ಮಕ್ನಾ ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ. ಆದರೆ, ಈ ಎರಡು ಜಾತಿಯ ಆನೆಗಳನ್ನು ಸೆರೆ ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆನೆ ಸೆರೆ ಕಾರ್ಯಚರಣೆಗೆ ಆನೆ ಶಿಬಿರಗಳಲ್ಲಿ ತರಬೇತಿ ಹೊಂದಿರುವ ಸಾಕಾನೆಗಳ ಸಹಕಾರ ಬೇಕು. ಜತಗೆ ಅರವಳಿಕೆ ತಜ್ಞರು, ಡ್ರೋನ್‌ ಸಹಾಯ, ಅರಣ್ಯ ಇಲಾಖೆ ಸಿಬ್ಬಂದಿ, ಅವರಿಗೆಲ್ಲ ಬಿಡಾರ, ಊಟ, ತಿಂಡಿ ವ್ಯವಸ್ಥೆಗಳು ಅರಣ್ಯ ಇಲಾಖೆ ಹೊರೆಯನ್ನು ಹೆಚ್ಚಿಸಿದೆ.

Read More
Next Story