ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆ: ಡ್ರೆಸ್‌ ಕೋಡ್‌, ಮೊಬೈಲ್‌ಗೆ ನಿಷೇಧ
x

ಆಗಸ್ಟ್‌ 2ರಂದು ನಡೆಯುವ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆಗೆ ಕೆಇಎ ಕಟ್ಟುನಿಟ್ಟಿನ ಡ್ರೆಸ್‌ ಕೋಡ್‌ ಜಾರಿಗೊಳಿಸಿದೆ.

ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆ: ಡ್ರೆಸ್‌ ಕೋಡ್‌, ಮೊಬೈಲ್‌ಗೆ ನಿಷೇಧ

ಆಗಸ್ಟ್‌ 2ರಂದು ನಡೆಯುವ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆಗೆ ಕೆಇಎ ಕಟ್ಟುನಿಟ್ಟಿನ ಡ್ರೆಸ್‌ ಕೋಡ್‌ ಜಾರಿಗೊಳಿಸಿದೆ. ಮೊಬೈಲ್‌, ವಾಚ್‌, ಬ್ಲೂಟೂತ್‌ ಸೇರಿದಂತೆ ಹಲವು ವಸ್ತುಗಳಿಗೆ ನಿಷೇಧ ಹೇರಲಾಗಿದೆ.


Click the Play button to hear this message in audio format

ರಾಜ್ಯ ಪೊಲೀಸ್‌ ಇಲಾಖೆಯಲ್ಲಿನ ಖಾಲಿ ಇರುವ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳ ನೇರ ನೇಮಕಾತಿ ಲಿಖಿತ ಪರೀಕ್ಷೆ ಭಾನುವಾರ (ಆಗಸ್ಟ್‌ 2) ನಡೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಕ್ರಮ ರಹಿತವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಮತ್ತು ಪರೀಕ್ಷಾ ಕೇಂದ್ರದ ನಿಯಮಗಳನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಪರೀಕ್ಷಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ಕಿವಿ, ತಲೆ ಹಾಗೂ ಮುಖವನ್ನು ಸಂಪೂರ್ಣ ಮುಚ್ಚುವ ರೀತಿಯ ಉಡುಪು ಧರಿಸುವಂತಿಲ್ಲ. ಉದ್ದ ತೋಳಿನ ಶರ್ಟ್‌ ಅಥವಾ ಡ್ರೆಸ್‌ ಧರಿಸಲು ಅವಕಾಶ ಇರುವುದಿಲ್ಲ. ಮೂಗುತಿ ಹಾಗೂ ಮಂಗಳಸೂತ್ರವನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಆಭರಣ ಅಥವಾ ಲೋಹದ ವಸ್ತುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಶೂ ಹಾಗೂ ಹೆಚ್ಚು ಎತ್ತರದ ಹಿಮ್ಮಡಿ ಹೊಂದಿರುವ ಸ್ಯಾಂಡಲ್‌ಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಇರುವುದಿಲ್ಲ.

ಪರೀಕ್ಷಾ ಕೇಂದ್ರದೊಳಗೆ ಮೊಬೈಲ್‌ ಫೋನ್‌, ಕ್ಯಾಮೆರಾ, ಬ್ಲೂಟೂತ್‌ ಸಾಧನಗಳು, ಇತರ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಗೂ ಕೈಗಡಿಯಾರಗಳನ್ನು (ವಾಚ್‌) ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಗುರುತಿನ ಪರಿಶೀಲನೆ ಹಾಗೂ ಭದ್ರತಾ ತಪಾಸಣೆಗೆ ಸಹಕರಿಸುವಂತೆ ಕೆಇಎ ಸೂಚಿಸಿದೆ.

Read More
Next Story