
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಸಂಗ್ರಹ ಚಿತ್ರ)
PG-CET: ಮೊದಲ ಸುತ್ತಿನ ಅಣಕು ಫಲಿತಾಂಶ ಪ್ರಕಟ, ಆಯ್ಕೆ ಬದಲಾವಣೆಗೆ ಅವಕಾಶ
ಅಭ್ಯರ್ಥಿಗಳು ಮೊದಲ ಸುತ್ತಿಗೆ ದಾಖಲಿಸಿದ ಆಪ್ಷನ್ಸ್ ಅನ್ನೇ ನಂತರದ ಸುತ್ತುಗಳಿಗೂ ಪರಿಗಣಿಸಲಾಗುತ್ತದೆ. ಆಪ್ಷನ್ಸ್ ದಾಖಲಿಸಲು ಒಮ್ಮೆ ಮಾತ್ರ ಅವಕಾಶ ಇರುತ್ತದೆ.
ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಅಭ್ಯರ್ಥಿಗಳು ತಮ್ಮ ಇಚ್ಛೆಗಳನ್ನು ಬದಲಿಸಲು, ಅಳಿಸಲು ಹಾಗೂ ಹೊಸದಾಗಿ ಸೇರಿಸುವುದಕ್ಕೂ ಸೆ.22ರಂದು ಬೆಳಿಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅದರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಿದೆ.
ಇದುವರೆಗೂ ಆಪ್ಷನ್ಸ್ ದಾಖಲಿಸದಿರುವ ಅಭ್ಯರ್ಥಿಗಳು ಕೂಡ ಈಗ ಮಾಡಬಹುದು. ಅಭ್ಯರ್ಥಿಗಳು, ಮೊದಲ ಸುತ್ತಿಗೆ ದಾಖಲಿಸಿದ ಆಪ್ಷನ್ಸ್ ಅನ್ನೇ ನಂತರದ ಸುತ್ತುಗಳಿಗೂ ಪರಿಗಣಿಸಲಾಗುತ್ತದೆ. ಆಪ್ಷನ್ಸ್ ದಾಖಲಿಸಲು ಒಮ್ಮೆ ಮಾತ್ರ ಅವಕಾಶ ಇರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಆಪ್ಷನ್ಸ್ ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಯುಜಿ ನೀಟ್: ಶುಲ್ಕ ಪಾವತಿಗೆ ಸೆ.21ರವರೆಗೆ ಅವಕಾಶ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಸೆ.21ರಂದು ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳ ಕೋರಿಕೆ ಮೇರೆಗೆ ಸಮಯ ವಿಸ್ತರಿಸಲಾಗಿದೆ. ಇದರ ಉಪಯೋಗ ಬಳಸಿಕೊಂಡು ನಿಗದಿತ ದಿನಾಂಕ ದೊಳಗೆ ಶುಲ್ಕ ಪಾವತಿಸಬೇಕು. ಬಳಿಕ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸೆ.21ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಎಚ್.ಪ್ರಸನ್ನ ವಿವರಿಸಿದ್ದಾರೆ.

