ಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ;ಪೈಲಟ್‌ಗಳು ಸುರಕ್ಷಿತ
x

ಕಲಬುರಗಿ ವಿಮಾನ ನಿಲ್ದಾಣದ ಸಮೀಪ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತೊಗರಿ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ;ಪೈಲಟ್‌ಗಳು ಸುರಕ್ಷಿತ

ಖಾಸಗಿ ತರಬೇತಿ ಸಂಸ್ಥೆಗೆ ಸೇರಿದ ಎರಡು ಆಸನಗಳ ಈ ವಿಮಾನವು ನಿಯಮಿತ ತರಬೇತಿ ಹಾರಾಟದಲ್ಲಿತ್ತು. ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಕೃಷಿ ಜಮೀನಿನಲ್ಲಿ ಇಳಿಸಿದ್ದಾರೆ.


Click the Play button to hear this message in audio format

ಕಲಬುರಗಿ ವಿಮಾನ ನಿಲ್ದಾಣದ ಸಮೀಪ ಮಂಗಳವಾರ ಸಂಜೆ ತರಬೇತಿ ವಿಮಾನವೊಂದು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪಾಳಾ ಗ್ರಾಮದ ವ್ಯಾಪ್ತಿಯಲ್ಲಿರುವ ಕೃಷಿ ಜಮೀನಿನಲ್ಲೇ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ತರಬೇತಿ ನೀಡುತ್ತಿದ್ದ ಪೈಲಟ್ ಹಾಗೂ ತರಬೇತಿ ಪಡೆಯುತ್ತಿದ್ದ ಸಹಪೈಲಟ್ ಸುರಕ್ಷಿತವಾಗಿದ್ದಾರೆ.

ಖಾಸಗಿ ತರಬೇತಿ ಸಂಸ್ಥೆಗೆ ಸೇರಿದ ಎರಡು ಆಸನಗಳ ಈ ವಿಮಾನವು ನಿಯಮಿತ ತರಬೇತಿ ಹಾರಾಟದಲ್ಲಿತ್ತು. ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಕೃಷಿ ಜಮೀನಿನಲ್ಲಿ ಇಳಿಸಿದ್ದಾರೆ. ಸುಮಾರು ಸಂಜೆ 5.40ರ ವೇಳೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸರು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Read More
Next Story