ಕರ್ನಾಟಕದ ಎಲ್ಲಾ ಟ್ಯಾಕ್ಸಿಗಳಲ್ಲಿ ನಿಗದಿತ ಮೀಟರ್ ಅಳವಡಿಸುವಂತೆ ಸಾರಿಗೆ ಇಲಾಖೆ ಸೂಚಿಸಿದೆ.
ಟ್ಯಾಕ್ಸಿಗಳಿಗೆ ಇನ್ಮುಂದೆ ಮೀಟರ್ ಕಡ್ಡಾಯ;ಸಾರಿಗೆ ಇಲಾಖೆ ಆದೇಶ
ರಾಜ್ಯದಲ್ಲಿ ವಿವಿಧ ವರ್ಗದ ಟ್ಯಾಕ್ಸಿಗಳಿಗೆ ಪ್ರಯಾಣ ದರ ಹಾಗೂ ಇತರ ಶುಲ್ಕಗಳನ್ನು ಸರ್ಕಾರ ನಿಗದಿಪಡಿಸಿದೆ. ಈ ದರಗಳನ್ನು ಆಧರಿಸಿ ಪ್ರಯಾಣಿಕರಿಂದ ಶುಲ್ಕ ವಿಧಿಸಲು ನಿಗದಿತ ಮೀಟರ್‌ಗಳನ್ನು ಅಳವಡಿಸಬೇಕಾಗಿದೆ. ಆದರೆ ಕೆಲವು ಟ್ಯಾಕ್ಸಿ ನಿರ್ವಾಹಕರು ಅಗತ್ಯ ಮೀಟರ್‌ಗಳಿಲ್ಲದೆ ವಾಹನಗಳನ್ನು ಸಂಚರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ರಾಜ್ಯದಾದ್ಯಂತ ಸಂಚರಿಸುವ ಎಲ್ಲಾ ಟ್ಯಾಕ್ಸಿ ವಾಹನಗಳಲ್ಲಿ ನಿಗದಿತ ಟ್ಯಾಕ್ಸಿ ಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸಾರಿಗೆ ಇಲಾಖೆ ಸೂಚಿಸಿದೆ. ಬೆಂಗಳೂರಿನ ಟ್ಯಾಕ್ಸಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಆಗಸ್ಟ್ 20ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು, ಗುತ್ತಿಗೆ ವಾಹನಗಳು (ಮೋಟಾರ್ ಕ್ಯಾಬ್‌ಗಳು) ಹಾಗೂ ಆ್ಯಪ್ ಆಧಾರಿತ ಕ್ಯಾಬ್‌ಗಳು ಸೇರಿದಂತೆ ಎಲ್ಲಾ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ಮೀಟರ್ ಕಡ್ಡಾಯ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ವಿವಿಧ ವರ್ಗದ ಟ್ಯಾಕ್ಸಿಗಳಿಗೆ ಪ್ರಯಾಣ ದರ ಹಾಗೂ ಇತರ ಶುಲ್ಕಗಳನ್ನು ಸರ್ಕಾರ ನಿಗದಿಪಡಿಸಿದೆ. ಈ ದರಗಳನ್ನು ಆಧರಿಸಿ ಪ್ರಯಾಣಿಕರಿಂದ ಶುಲ್ಕ ವಿಧಿಸಲು ನಿಗದಿತ ಮೀಟರ್‌ಗಳನ್ನು ಅಳವಡಿಸಬೇಕಾಗಿದೆ. ಆದರೆ ಕೆಲವು ಟ್ಯಾಕ್ಸಿ ನಿರ್ವಾಹಕರು ಅಗತ್ಯ ಮೀಟರ್‌ಗಳಿಲ್ಲದೆ ವಾಹನಗಳನ್ನು ಸಂಚರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಕ್ರಮ
ಮೀಟರ್ ಅಳವಡಿಸದೆ ಕಾರ್ಯನಿರ್ವಹಿಸುತ್ತಿರುವ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚುವರಿ, ಜಂಟಿ ಹಾಗೂ ಉಪ ಸಾರಿಗೆ ಆಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮದ ಕಟ್ಟುನಿಟ್ಟಿನ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಯುಕ್ತರು ನಿರ್ದೇಶಿಸಿದ್ದಾರೆ.
ಮೋಟಾರ್ ಕ್ಯಾಬ್‌ಗಳಿಗೆ ಹಳೆಯ ನಿಯಮವೇ ಆಧಾರ
ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರ ನಿಯಮ 129ರ ಅನ್ವಯ ಗುತ್ತಿಗೆ ವಾಹನಗಳಲ್ಲಿ ಟ್ಯಾಕ್ಸಿ ಮೀಟರ್ ಅಳವಡಿಸುವುದು ಕಡ್ಡಾಯವಾಗಿದೆ. ಅದೇ ರೀತಿ, ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳು, 2016ರ ನಿಯಮ 7(D)ರಂತೆ ಪರವಾನಗಿ ಪಡೆದ ರೈಡ್ ಅಗ್ರಿಗೇಟರ್‌ಗಳಿಗೆ ಸಂಪರ್ಕ ಹೊಂದಿರುವ ವಾಹನಗಳಲ್ಲಿ ಡಿಜಿಟಲ್ ದರ ಮೀಟರ್ ಅಳವಡಿಸಬೇಕಾಗಿದೆ.