x

ಕರಾವಳಿ-ಮಲೆನಾಡು ಮಳೆ ಹೇಗಿದೆ? ಇನ್ನೂ ಮಳೆ ಬರುತ್ತಾ ಅಥವಾ ಬರವೇ? ವಿಜ್ಞಾನಿ ಸಿ.ಎಸ್. ಪಾಟೀಲ್ ವಿಶ್ಲೇಷಣೆ

ಕರ್ನಾಟಕದಲ್ಲಿ ಈ ಬಾರಿಯ ಮುಂಗಾರು ಏಕೆ ಕೈಕೊಟ್ಟಿದೆ? ಕರಾವಳಿ ಮತ್ತು ಮಲೆನಾಡಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಏಕೆ ದಾಖಲಾಗಿದೆ? ಮುಂದಿನ ದಿನಗಳಲ್ಲಿ ಭಾರೀ ಮಳೆ ಆಗುತ್ತದೆಯೇ ಅಥವಾ ಬರದ ಆತಂಕ ಮತ್ತಷ್ಟು ಹೆಚ್ಚಾಗುತ್ತದೆಯೇ? ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಮಹತ್ವದ ಮಾಹಿತಿ ನೀಡಿದ್ದಾರೆ


Click the Play button to hear this message in audio format

ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಹಾಗು ಹವಾಮಾನ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ಪ್ರಸ್ತುತ ಮಳೆ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.ಕಳೆದ ಒಂದು ವಾರದಿಂದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಆದರೆ ಉತ್ತರ ಹಾಗು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಷ್ಟೊಂದು ಮಳೆಯಾಗಿಲ್ಲ.ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಹಾಸನ ಈ ಭಾಗದಲ್ಲಿ ಮಾತ್ರ ಹೆಚ್ಚು ಮಳೆಯಾಗಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಬಂಗಾಳ ಉಪಸಾಗರ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಆದ ಹಿನ್ನಲೆಯಲ್ಲಿ ಈ ಭಾಗದಲ್ಲಿ ಮಳೆ ಬಂದಿದೆ. ಮುಂದಿನ ಒಂದು ವಾರ ಕರಾವಳಿ ಭಾಗ ಸೇರಿದಂತೆ ಬಹುತೇಕ ಕಡೆ ಮಳೆ ಪ್ರಮಾಣ ತಗ್ಗಲಿದೆ. ಇಂದಿನಿಂದ ಈ ಭಾಗದಲ್ಲಿ ಮಳೆ ಪ್ರಮಾಣ ಒಂದು ವಾರಕ್ಕೆ ಹೋಲಿಸಿದರೆ ಕಡಿಮೆಯಾಗಲಿದೆ.ಉಳಿದ ಜಿಲ್ಲೆಗಳಲ್ಲಿ ಹಗುರ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ದಕ್ಷಿಣ ಕರ್ನಾಟಕ ಒಳನಾಡಿನಲ್ಲಿ ಮಳೆ ಕೊರತೆಯಿದೆ. ಬೆಂಗಳೂರು ಶೇಕಡಾ 40 ರಿಂದ 50 ರಷ್ಟು ಮಳೆಕೊರತೆಯಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಚಿತ್ರದುರ್ಗ ದಾವಣಗೆರೆ ವಿಜಯನಗರ ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಕೊರತೆ ಜಾಸ್ತಿಯಿದೆ ಎಂದು ವಿವರಿಸಿದರು ಈ ಭಾಗದಲ್ಲಿ ವಾಡಿಕೆಗಿಂತ 40 ರಷ್ಟು ಮಳೆಕೊರತೆಯಿದೆ. ವಾಡಿಕೆಗಿಂತ ಮಳೆ ಪ್ರಮಾಣ ಈಗಲೂ ಕೊರತೆಯಿದೆ. ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೂ ನೈರುತ್ಯ ಮಾನ್ಸೂನ್ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು . ಆದರೆ ಎಲ್ ನಿನೊ ಪರಿಣಾಮ ಆಗಸ್ಟ್ ತಿಂಗಳಲ್ಲಿ ಮಳೆಯ ಮೇಲೆ ಪರಿಣಾಮ ಬೀರಿದೆ ಅದರ ಭಾಗವಾಗಿ ಬಹುತೇಕ ಜಿಲ್ಲೆಗಳಲ್ಲಿ ಮಳೆಕೊರತೆಯಿದೆ. ಈಗ ಮಲೆನಾಡು ಕರಾವಳಿ ಭಾಗದಲ್ಲಿ ಮಳೆಯಾದರೂ ಎಷ್ಟು ಮಳೆಯಾಗಬೇಕಿತ್ತು ಅಷ್ಟು ಆಗಿಲ್ಲ. ಸರಾಸರಿ 30 ವರ್ಷಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಕಡಿಮೆ ಆಗಿದೆ ಎಂದು ತಿಳಿಸಿದರು.

Read More
Next Story