x

ನಂದಿನಿ ಬಳಿಕ ಖಾಸಗಿ ಹಾಲಿಗೂ ಬೆಲೆಯೂ ಏರಿಕೆ

ನಂದಿನಿ ಬಳಿಕ ಖಾಸಗಿ ಡೈರಿಗಳಿಂದಲೂ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ! ಹೆರಿಟೇಜ್, ದೊಡ್ಲಾ ಸೇರಿ ಹಲವು ಕಂಪನಿಗಳು ಹಾಲು, ಮೊಸರಿನ ದರ ಹೆಚ್ಚಿಸಿದ್ದು, ಗರಿಷ್ಠ 5.90 ರೂ. ಏರಿಕೆಯಾಗಿದೆ.


Click the Play button to hear this message in audio format

ಕರ್ನಾಟಕದಲ್ಲಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನು ಮತ್ತಷ್ಟು ಕಾಡುತ್ತಿದೆ. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕೆಎಂಎಫ್‌ ನಂದಿನಿ ಹಾಲು, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ದರ ಪರಿಷ್ಕರಣೆ ಮಾಡಿತ್ತು. ನಂದಿನಿ ಹಾಲಿನ ಬೆಲೆ ಏರಿಕೆಯಿಂದ ಬೇಸರಗೊಂಡಿದ್ದ ಗ್ರಾಹಕರು ಖಾಸಗಿ ಬ್ರ್ಯಾಂಡ್‌ಗಳತ್ತ ಮುಖ ಮಾಡಿದ್ದರು. ಆದರೆ ಇದೀಗ ಖಾಸಗಿ ಡೈರಿ ಕಂಪನಿಗಳೂ ಬೆಲೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿವೆ. ಹೆರಿಟೇಜ್, ದೊಡ್ಲಾ, ತಿರುಮಲ, ಹಡ್ಸನ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿವೆ. ಮದರ್ ಡೇರಿ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಿದೆ. ಹೆರಿಟೇಜ್ ಹಾಲಿನ ದರದಲ್ಲಿ ಲೀಟರ್‌ಗೆ ಗರಿಷ್ಠ 5 ರೂಪಾಯಿ 90 ಪೈಸೆಯವರೆಗೆ ಹೆಚ್ಚಳವಾಗಿದೆ.

Read More
Next Story