ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿಗೆ ಚಂದ್ರುಗೆ ಜೀವಮಾನ ಸಾಧನೆ ಪ್ರಶಸ್ತಿ
x

ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿಗೆ ಚಂದ್ರುಗೆ ಜೀವಮಾನ ಸಾಧನೆ ಪ್ರಶಸ್ತಿ

ರಂಗಭೂಮಿಗೆ ಸಲ್ಲಿಸಿದ ಅತ್ಯುನ್ನತ ಸೇವೆ ಪರಿಗಣಿಸಿ ಹಿರಿಯ ನಟ, ರಾಜಕಾರಣಿ ಡಾ. ಮುಖ್ಯಮಂತ್ರಿ ಚಂದ್ರು (ಬೆಂಗಳೂರು) ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಘೋಷಿಸಲಾಗಿದೆ. ರಂಗ ಕರ್ಮಿಗಳಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೀಮಠ (ಧಾರವಾಡ), ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್) ಸೇರಿ ಹಲವರಿಗೆ ವಾರ್ಷಿಕ ಪ್ರಶಸ್ತಿ ಸಂದಿದೆ.


ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕಲಾವಿದ ಹಾಗೂ ರಾಜಕಾರಣಿ ಡಾ. ಮುಖ್ಯಮಂತ್ರಿ ಚಂದ್ರು ಸೇರಿ ಹಲವು ಸಾಧಕರು ವಿವಿಧ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಡಾ. ಕೆ. ವಿ. ನಾಗರಾಜ ಮೂರ್ತಿ ನೇತೃತ್ವದ ಕಾರ್ಯಕಾರಿ ಸಮಿತಿಯು ಸಭೆ ನಡೆಸಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ರಂಗಭೂಮಿಗೆ ಸಲ್ಲಿಸಿದ ಅತ್ಯುನ್ನತ ಸೇವೆ ಪರಿಗಣಿಸಿ ಹಿರಿಯ ನಟ ಹಾಗೂ ರಾಜಕಾರಣಿ ಡಾ. ಮುಖ್ಯಮಂತ್ರಿ ಚಂದ್ರು (ಬೆಂಗಳೂರು) ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಘೋಷಿಸಲಾಗಿದೆ. ಈ ಪ್ರಶಸ್ತಿಯು 50 ಸಾವಿರ ನಗದು ಬಹುಮಾನ, ನಟರಾಜ ವಿಗ್ರಹ ಹಾಗೂ ಸ್ಮರಣಾ ಫಲಕ ಒಳಗೊಂಡಿದೆ. ರಂಗಕರ್ಮಿಗಳಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೀಮಠ (ಧಾರವಾಡ), ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್) ಸೇರಿ ಹಲವರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.



23 ಸಾಧಕರಿಗೆ ‘ವಾರ್ಷಿಕ ರಂಗಪ್ರಶಸ್ತಿ’

ಕನ್ನಡ ರಂಗಭೂಮಿಯ ಬೆಳವಣಿಗೆಗೆ ಶ್ರಮಿಸಿದ 23 ರಂಗಕರ್ಮಿಗಳನ್ನು ವಾರ್ಷಿಕ ‘ರಂಗಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಪತ್ರಕರ್ತ ಶಿವಾನಂದ ತಗಡೂರು, ಆರ್. ರಾಮಕೃಷ್ಣ, ಅನಸೂಯ ರೇವಣ ಸಿದ್ದಯ್ಯ ಹೊಸೂರುಮಠ ಸೇರಿದಂತೆ ಹಲವು ಕಲಾವಿದರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ನಗದು, ನಟರಾಜ ವಿಗ್ರಹ ಮತ್ತು ಫಲಕವನ್ನು ಹೊಂದಿದೆ. ವಿವಿಧ ದತ್ತಿ ಪುರಸ್ಕಾರಗಳು ತಲಾ 10 ಸಾವಿರ ನಗದು ಹಾಗೂ ಫಲಕ ಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳಿನಲ್ಲಿ ನೆರವೇರಲಿದೆ ಎಂದು ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.

'ಕಲ್ಬರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ'ಕ್ಕೆ ಚಿತ್ರದುರ್ಗದ ಚಂದ್ರಮ್ಮ, 'ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ'ಕ್ಕೆ ಕುಣಿಗಲ್‌ನ ಗಂಗಾಧರ್ ರೆಡ್ಡಿ, 'ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ'ಗೆ ತುಮಕೂರಿನ ವೈ.ಎನ್.ಶಿವಣ್ಣ, ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ'ಕ್ಕೆ ಗದಗದ ದಯಾನಂದ ಚ ಬೀಳಗಿ ಹಾಗೂ 'ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ'ಕ್ಕೆ ಮೈಸೂರಿನ ಡಾ. ಎಂ.ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 10 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ, ಫಲಕಗಳನ್ನು ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story