ಸಚಿವರು, ಸಂಸದರ ವಾಹನ ಖರೀದಿ ಮಿತಿ 31 ಲಕ್ಷ ರೂ.ಗೆ ಏರಿಕೆ
x

ಹೊಸ ವಾಹನಗಳ ಖರೀದಿ ಸಂದರ್ಭದಲ್ಲಿ ಇಂಧನವನ್ನು ಕಡಿಮೆ ಬಳಸುವ ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಇರುವ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. 

ಸಚಿವರು, ಸಂಸದರ ವಾಹನ ಖರೀದಿ ಮಿತಿ 31 ಲಕ್ಷ ರೂ.ಗೆ ಏರಿಕೆ

ಹೊಸ ವಾಹನಗಳ ಖರೀದಿ ಸಂದರ್ಭದಲ್ಲಿ ಇಂಧನವನ್ನು ಕಡಿಮೆ ಬಳಸುವ ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಇರುವ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.


Click the Play button to hear this message in audio format

ರಾಜ್ಯ ಸರ್ಕಾರವು ರಾಜ್ಯದ ಸಚಿವರು ಹಾಗೂ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಅಧಿಕೃತ ಬಳಕೆಗಾಗಿ ಹೊಸ ವಾಹನ ಖರೀದಿಸಲು ನಿಗದಿಪಡಿಸಿದ್ದ ಆರ್ಥಿಕ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ 26 ಲಕ್ಷ ರೂ.ಗಳಷ್ಟಿದ್ದ ಗರಿಷ್ಠ ಮಿತಿಯನ್ನು ಇದೀಗ 31 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಈ ಕುರಿತು ಪರಿಷ್ಕೃತ ಆದೇಶ ಹೊರಡಿಸಿದೆ.

2022ರ ಆಗಸ್ಟ್‌ನಲ್ಲಿ ಹೊರಡಿಸಲಾಗಿದ್ದ ಆದೇಶದ ಪ್ರಕಾರ, ಸಚಿವರು ಮತ್ತು ಸಂಸದರ ವಾಹನ ಖರೀದಿಗೆ 26 ಲಕ್ಷ ರೂ.ಗಳ ಮಿತಿ ನಿಗದಿಪಡಿಸಲಾಗಿತ್ತು. ಇದೀಗ ಆರ್ಥಿಕ ಇಲಾಖೆಯ ಒಪ್ಪಿಗೆಯೊಂದಿಗೆ ಈ ಮಿತಿಯನ್ನು ಪರಿಷ್ಕರಿಸಲಾಗಿದೆ. ಹೊಸ ಮಿತಿಯು ಜಿಎಸ್‌ಟಿ ಒಳಗೊಂಡ ಎಕ್ಸ್‌-ಶೋರೂಂ ಬೆಲೆಗೆ ಅನ್ವಯಿಸುತ್ತದೆ.

ಇಂಧನ ಮಿತವ್ಯಯದ ವಾಹನಗಳಿಗೆ ಆದ್ಯತೆ

ಹೊಸ ವಾಹನಗಳ ಖರೀದಿ ಸಂದರ್ಭದಲ್ಲಿ ಇಂಧನವನ್ನು ಕಡಿಮೆ ಬಳಸುವ ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಇರುವ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಅಲ್ಲದೆ, ಖರೀದಿ ಪ್ರಕ್ರಿಯೆಯಲ್ಲಿ ನಿಗದಿತ ಡಿ.ಜಿ.ಎಸ್.ಡಿ. ದರಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಚಿವರು ಮತ್ತು ಸಂಸದರ ಅಧಿಕೃತ ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಈ ಪರಿಷ್ಕರಣೆ ಜಾರಿಗೆ ಬಂದಿದೆ. ವಾಹನ ಖರೀದಿಯ ಗರಿಷ್ಠ ಮಿತಿಯನ್ನು ಹೆಚ್ಚಿಸಿರುವ ಸರ್ಕಾರದ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

Read More
Next Story