Operation Safai in Gujarat: Massive drive against illegal Bangladeshi immigrants
x
ಗುಜರಾತ್​ ಪೊಲೀಸರು ಬಂಧಿಸಿರುವ ಅಕ್ರಮ ಬಾಂಗ್ಲಾದೇಶ ವಲಸಿಗರು.

ರಾಜ್ಯಾದ್ಯಂತ 13,675 ಅಕ್ರಮ ವಲಸಿಗರು; ಬೆಂಗಳೂರಿನಲ್ಲೇ ಹೆಚ್ಚು ಮಂದಿ

ಪಶ್ಚಿಮ ಬಂಗಾಳದಿಂದ ಮೈಸೂರಿಗೆ ಆಗಮಿಸಿದ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸತತ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿ ಪ್ರಯಾಣಿಕರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.


ರಾಜ್ಯದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಅಕ್ರಮ ವಲಸಿಗರ ಪಟ್ಟಿಯನ್ನು ಗೃಹ ಇಲಾಖೆ ಅಧಿಕೃತವಾಗಿ ಸಿದ್ಧಪಡಿಸಿದೆ.

ಗೃಹ ಇಲಾಖೆಯ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 13,675 ಅಕ್ರಮ ವಲಸಿಗರು ಇರುವುದು ಪತ್ತೆಯಾಗಿದೆ. ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಅಂದರೆ ಬರೋಬ್ಬರಿ 10,650 ಮಂದಿ ಅಕ್ರಮವಾಗಿ ನೆಲೆಸಿದ್ದು, ಈ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ರಾಜಧಾನಿಯ ನಂತರದ ಸ್ಥಾನಗಳಲ್ಲಿ ಮೈಸೂರು, ಉತ್ತರ ಕನ್ನಡ, ಉಡುಪಿ ಹಾಗೂ ಬೆಳಗಾವಿ ಜಿಲ್ಲೆಗಳಿದ್ದು, ಇಲಾಖೆಯು ಇವರನ್ನು ಪತ್ತೆಹಚ್ಚಿ ಮುಂದಿನ ಕಾನೂನು ಕ್ರಮಕ್ಕೆ ಸಜ್ಜಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ?

ರಾಜ್ಯ ಗೃಹ ಇಲಾಖೆ ಬಿಡುಗಡೆ ಮಾಡಿರುವ ಜಿಲ್ಲಾವಾರು ವಲಸಿಗರ ಸಂಖ್ಯೆ ಇಂತಿದೆ.

ಬೆಂಗಳೂರು ನಗರದಲ್ಲಿ 10,650, ಮೈಸೂರು 810, ಬೆಳಗಾವಿ 458, ದಕ್ಷಿಣ ಕನ್ನಡ 268, ರಾಮನಗರ 191, ಬಳ್ಳಾರಿ 53, ಚಿಕ್ಕಬಳ್ಳಾಪುರ 38, ಮಂಡ್ಯ 37, ಹುಬ್ಬಳ್ಳಿ-ಧಾರವಾಡ 35, ದಾವಣಗೆರೆ 20, ರಾಯಚೂರು 19, ಕೋಲಾರ 13, ಕೊಡಗು 10, ಕೊಪ್ಪಳ 10, ಕಲಬುರ್ಗಿ 9, ಚಿತ್ರದುರ್ಗ 8, ಹಾಸನ 5, ಚಾಮರಾಜನಗರ 3 ಮಂದಿ ಸೇರಿ 13, 675 ಮಂದಿ ಅಕ್ರಮ ವಲಸಿಗರು ಇದ್ದಾರೆ.

ಹೌರಾ ಎಕ್ಸ್‌ಪ್ರೆಸ್ ಪರಿಶೀಲನೆ

ಇದೇ ವೇಳೆ, ಸಾಂಸ್ಕೃತಿಕ ನಗರಿ ಮೈಸೂರಿಗೆ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು (RPF ಮತ್ತು GRP) ಹೈ ಅಲರ್ಟ್ ಘೋಷಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ಬಂದಿಳಿದ ಕಾರ್ಮಿಕರನ್ನು ಅಕ್ರಮ ಬಾಂಗ್ಲಾ ವಲಸಿಗರು ಎಂದು ಸಂಶಯಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸ್ಥಳದಲ್ಲಿ ಭಾರಿ ಹೈಡ್ರಾಮಾ ಮತ್ತು ತೇಜೋವಧೆಯ ಯತ್ನ ನಡೆದಿತ್ತು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಅವರ ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ಅಗತ್ಯ ಭಾರತೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಅವರು ಪಶ್ಚಿಮ ಬಂಗಾಳದ ಸದ್ಭಾವನಾ ಕಾರ್ಮಿಕರೇ ಹೊರತು ಯಾವುದೇ ಬಾಂಗ್ಲಾ ವಲಸಿಗರಲ್ಲ ಎಂಬುದು ಸಾಬೀತಾಗಿತ್ತು.

ಆದ್ದರಿಂದ, ಸಾರ್ವಜನಿಕರಲ್ಲಿ ಗೊಂದಲ ಹಾಗೂ ಸುಳ್ಳು ವದಂತಿ ಹರಡುವುದನ್ನು ತಪ್ಪಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸ್ವತಃ ರೈಲ್ವೆ ಪೊಲೀಸರೇ ರಂಗಕ್ಕಿಳಿದಿದ್ದಾರೆ.

ಪಶ್ಚಿಮ ಬಂಗಾಳದಿಂದ ಮೈಸೂರಿಗೆ ಆಗಮಿಸಿದ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸತತ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿ ಪ್ರಯಾಣಿಕರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story