ಸರ್ಕಾರಿ ಶಾಲೆಗಳ ಖಾಸಗೀಕರಣ ವಿವಾದ: ಡಿಕೆಶಿ ಪುತ್ರಿ ಐಷ್ವರ್ಯಾ ಕ್ಷಮೆ ಯಾಚನೆಗೆ ಶಿಕ್ಷಕರ ಆಗ್ರಹ
ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತುಕೊಡುವ ಯೋಜನೆ ಹಾಗೂ ಸರ್ಕಾರಿ ಶಿಕ್ಷಕರ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ. ಈ ಬಗ್ಗೆ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ರಾಜಶೇಖರ್ ಮಾತನಾಡಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತುಕೊಡುವ ಯೋಜನೆ ವಿಚಾರ ಹಾಗು ಸರ್ಕಾರಿ ಶಿಕ್ಷಕರ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ರಾಜಶೇಖರ್, ವಿ.ಎನ್. ಅವರ ಜತೆ ದ 'ಫೆಡರಲ್ ಕರ್ನಾಟಕ' ಸಂದರ್ಶನ ನಡೆಸಿದೆ. ಸರ್ಕಾರಿ ಶಾಲೆಗಳನ್ನು ನಡೆಸಲಾಗದೆ ಖಾಸಗಿಯವರಿಗೆ ದತ್ತುಕೊಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಅವರು ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಕೆಲಸಮಾಡುವುದಿಲ್ಲ ಎಂಬ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಶಾಲೆ ನಿಮ್ಮ ಜವಾಬ್ದಾರಿ ಎಂಬ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಕಾರ್ಯಕ್ರಮ ನಡೆದಿದೆ. ಹೆಸರೇ ಹೇಳುವಂತೆ ನಮ್ಮ ಶಾಲೆ ನಿಮ್ಮ ಜವಾಬ್ದಾರಿ ಎಂದರೆ ಖಾಸಗಿಯವರ ಜವಾಬ್ದಾರಿ ಇದು ಖಂಡನಾರ್ಹ ಎಂದು ಹೇಳಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ ಅದನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಜನಗಳ ಪ್ರತಿನಿಧಿ ಅವರು ಚಕ್ರವರ್ತಿಗಳಲ್ಲ ಜನರು ತೆರಿಗೆ ಕೊಡುತ್ತಿದ್ದಾರೆ ಇದನ್ನು ಮರೆಯಬಾರದು ಎಂದು ಹೇಳಿದರು. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತುತೆಗೆದುಕೊಳ್ಳಿ ಎಂದು ಸರ್ಕಾರ ಅಂಗಲಾಚುತ್ತಿದೆ ಇದು ಕೇಳಲು ಅಸಹ್ಯವಾಗುತ್ತಿದೆ ಎಂದು ಅಸಮಧಾವ ವ್ಯಕ್ತಪಡಿಸಿದರು. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಬಿಕಾರಿಗಳಲ್ಲ ನಮ್ಮನ್ನು ಯಾಕೆ ದತ್ತುಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಬಹುತೇಕ ಖಾಸಗಿ ಸಂಸ್ಥೆಗಳು ಧನದಾಹಿ ಸಂಸ್ಥೆಗಳು ಅವರಿಂದ ಸರ್ಕಾರಿ ಶಾಲೆಗಳನ್ನು ಜನಕಲ್ಯಾಣ ಮಾಡಿ ಎಂದರೆ ಮಾಡಲು ಸಾಧ್ಯವೇ ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಖಾಸಗಿಯವರಿಗೆ ಕೊಡಲು ಹೊರಟಿರುವ ಹಿಂದಿರುವ ಅಜೆಂಡಾ ಬೇರೆಯೇ ಇದೆ ಎಂದು ಹೇಳಿದರು. ಏಳೆಂಟು ಶಾಲೆಗಳನ್ನು ಮುಚ್ಚಿ ಮ್ಯಾಗ್ನೆಟ್ ಶಾಲೆ ಮಾಡಲು ಈಗಾಗಲೇ ಹೊರಟಿದೆ ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಇದೆ ಎಂದು ಹೇಳಿದರು.
ಸಿಎಂ ಪುತ್ರಿ ಐಶ್ವರ್ಯ ಶಿಕ್ಷಕರಿಗೆ ಅವಮಾನ ಹೇಳಿಕೆಗೆ ಕ್ಷಮೆ ಕೇಳಲಿ
ಸರ್ಕಾರಿ ಶಾಲೆಯ ಶಿಕ್ಷಕರ ಬಗ್ಗೆ ಮುಖ್ಯಮಂತ್ರಿಗಳ ಪುತ್ರಿ ಐಶ್ವರ್ಯ ಅವಹೇಳನ ಹಾಗು ಅವಮಾನವಾಗುವ ಹಾಗೆ ಮಾತನಾಡಿದ್ದಾರೆ ಇದು ಸರಿಯಲ್ಲ ಎಂದು ಹೇಳಿದರು. ಸರ್ಕಾರಿ ಶಿಕ್ಷಕರು ಒಂದು ಲಕ್ಷ ಸಂಬಂಳ ತಗೋತಾರೆ ಸರಿಯಾಗಿ ಶಾಲೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ ಆದರೆ ಸಿಎಂ ಪುತ್ರಿ ಹೇಳಿದ ಮಾತುಗಳನ್ನು ಸರ್ಕಾರ ಹಾಗು ಅಧಿಕಾರಿಗಳು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ಯಾಕೆಂದರೆ ಸಿಎಂ ಪುತ್ರಿ ಹೇಳಿದ ಮಾತುಗಳಿಗೆ ಯಾವ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಅಸಮಧಾನ ತೋರಿದರು. ವಾರಕ್ಕೆ 5 ದಿನ ಶಿಕ್ಷಕರು ಬರುತ್ತಿಲ್ಲ ಎಂದಾಗ ಅಲ್ಲಿದ್ದ ಅಧಿಕಾರಿಗಳು ಎದ್ದು ನಿಂತು ಹೇಳಬೇಕಿತ್ತು ಇದು ಸುಳ್ಳು ಅಂತಾ ಆದರೆ ಯಾರೂ ಮಾತನಾಡಲಿಲ್ಲ ಎಂದು ಹೇಳಿದರು. ಶಿಕ್ಷಕರು ಎರಡು ಬಾರಿ ಹಾಜರಾತಿ ಹಾಕಬೇಕು ಸರ್ಕಾರಿ ಶಾಲಾ ಶಿಕ್ಷಕರು ತುಂಬಾ ಬುದ್ದಿವಂತರು ಪರೀಕ್ಷೆಗಳನ್ನು ಬರೆದು ಶಿಕ್ಷಕರಾಗಿದ್ದಾರೆ ಎಂದು ಹೇಳಿದರು. ಬಹುತೇಕ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಬಿಎಡ್ ಟಿಇಟಿ ಮಾಡಿರಲ್ಲ ಅಂತಹವರನ್ನು ಶಿಕ್ಷಕರನ್ನಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಸರ್ಕಾರಿ ಶಾಲೆಗಳ ಶಿಕ್ಷಕರ ಬಗ್ಗೆ ಅವಹೇಳನ ಮಾಡಿರುವುದು ಸರಿಯಲ್ಲ ಸರ್ಕಾರ ಭೆಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಕಾರ್ಪೊರೇಟ್ ಸಂಸ್ತೆಯ ಸೇವಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

