Union Budget 2026: Which is cheaper? Which is more expensive? Here is the complete list!
x

ಕೇಂದ್ರ ಬಜೆಟ್‌ನಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಲಾಗಿದ್ದು, ಕ್ಯಾನ್ಸರ್‌ ಸೇರಿದಂತೆ ಹಲವು ಔಷಧಿಗಳ ದರವನ್ನು ಕಡಿಮೆ ಮಾಡಲಾಗಿದೆ. 

ಔಷಧ ಕಂಪನಿಗಳ ಲಾಭಕೋರತನ: 254 ಕಂಪನಿಗಳ ಅಕ್ರಮ ಜಾಲ ಬಯಲಿಗೆಳೆದ ಎಫ್‌ಡಿಎ

ಕಡಿಮೆ ವೆಚ್ಚದಲ್ಲಿ ಸಿಗುವ ಔಷಧಗಳನ್ನು ರೋಗಿಗಳಿಗೆ ಶೇ 60 ರಿಂದ 90 ಪಟ್ಟು ಹಾಗೂ ಕೆಲ ಜೀವ ರಕ್ಷಕ ಗಂಭೀರ ಕಾಯಿಲೆಗಳ ಔಷಧಗಳಿಗೆ ಶೇ 1000 ಪಟ್ಟಿಗಿಂತಲೂ ಹೆಚ್ಚು ಅಂತರದ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಹೊರಬಿದ್ದಿದೆ.


ರಾಜ್ಯದಲ್ಲಿ ಬಡ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರಿಯಾಗಿಸಿಕೊಂಡು, ಔಷಧ ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮೆಬಲ್ಸ್ ಗಳ ಮೇಲೆ ಅತಿಯಾದ ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಿ ದೋಚುತ್ತಿದ್ದ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆ ಬಯಲಿಗೆಳೆದಿದೆ.

ಆಸ್ಪತ್ರೆಗಳು ಹಾಗೂ ಪೂರೈಕೆದಾರರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಔಷಧಗಳನ್ನು ರೋಗಿಗಳಿಗೆ ಶೇ 60 ರಿಂದ 90 ಪಟ್ಟು ಹಾಗೂ ಕೆಲ ಜೀವ ರಕ್ಷಕ ಗಂಭೀರ ಕಾಯಿಲೆಗಳ ಔಷಧಗಳಿಗೆ ಶೇ 1000 ಪಟ್ಟಿಗಿಂತಲೂ ಹೆಚ್ಚು ಅಂತರದ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಹೊರಬಿದ್ದಿದೆ.

ಲಾಭಕೋರತನದ ಲೆಕ್ಕಾಚಾರ

ಎಫ್‌ಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ಉತ್ಪಾದನಾ,ಲ್ಯಾಂಡಿಂಗ್ ವೆಚ್ಚಕ್ಕೂ ಹಾಗೂ ಆಸ್ಪತ್ರೆಗಳು-ಔಷಧ ಮಳಿಗೆಗಳು ರೋಗಿಗಳಿಗೆ ವಿಧಿಸುವ ಎಂಆರ್ ಪಿ ಬೆಲೆಗೂಭಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ.

86 ರೂ.ಗೆ ಖರೀದಿಸಿದ ಸಾಮಾನ್ಯ ಔಷಧ-1ರ ಎಂಆರ್​ಪಿ ಬೆಲೆ 4,528 ರೂ. ನಿಗದಿಪಡಿಸಲಾಗಿದೆ. ಇದು ಮೂಲ ಬೆಲೆಗಿಂತ 52 ಪಟ್ಟು ಹೆಚ್ಚಾಗಿದೆ.

ಸಾಮಾನ್ಯ ಔಷಧ -2 ರ 160 ರೂ ಮೌಲ್ಯದ ಔಷಧಿಗೆ ನಿಗದಿಯಾಗಿದ್ದ ಎಂಆರ್​ಪಿ 7,110 ರೂ. ನಂತೆ‌ ಮಾರಾಟ ಮಾಡಲಾಗಿದೆ. ಇದು ಮೂಲ ಬೆಲೆಗಿಂತ 44 ಪಟ್ಟು ಹೆಚ್ಚಾಗಿದೆ.

ಕ್ಯಾನ್ಸರ್ ಔಷಧವಾದ ಸೈಟ್ಯಾಕ್ಸ್ 100MG ಯ ಲ್ಯಾಂಡಿಂಗ್ ವೆಚ್ಚ 342 ರೂ. ಇದ್ದರೆ, ಎಂಆರ್ ಪಿ

3,836 ರೂ. ನಿಗದಿಯಾಗಿದೆ. ಇದು ಮುಲ ಬೆಲೆಗಿಂತ 1021 ಪಟ್ಟು ಹೆಚ್ಚಾಗಿದೆ. ನ್ಯೂಕೈನ್ 300MCGಯ ಲ್ಯಾಂಡಿಂಗ್ ವೆಚ್ಚ 112 ರೂ. ಇದ್ದರೆ,ಎಂಆರ್​ಪಿ 1,239 ರೂ. ನಿಗದಿಪಡಿಸಲಾಗಿದೆ. ಇದು ಮೂಲ ಬೆಲೆಗಿಂತ 1006 ಪಟ್ಟು ಹೆಚ್ಚು. ಬಿವಾಟಾಸ್ 400MG ಇಂಜೆಕ್ಷನ್ ಲ್ಯಾಂಡಿಂಗ್ ವೆಚ್ಚ 5,850 ರೂ. ಇದ್ದರೆ, ಎಂಆರ್​ಪಿ 62,690 ರೂ. ನಿಗದಿಯಾಗಿದೆ. ಇದು ಮಃಲ ಬೆಲೆಗಿಂತ 971 ಪಟ್ಟು ಹೆಚ್ಚಾಗಿದೆ.

ಕಾನ್ಸೆಟ್ (Cosate 3 MIU Inj) ಲ್ಯಾಂಡಿಂಗ್ ವೆಚ್ಚ 340 ರೂ.ಇದ್ದರೆ,ಎಂಆರ್​ಪಿ 3,699 ರೂ. ನಿಗದಿಪಡಿಸಲಾಗಿದೆ.

ಎನ್‌ಪಿಪಿಎಗೆ ಎಫ್‌ಡಿಎ ಆಯುಕ್ತರ ಪತ್ರ

ಕರ್ನಾಟಕ ಎಫ್‌ಡಿಎ ಆಯುಕ್ತ ಕೆ. ಶ್ರೀನಿವಾಸ್ ಅವರು ರಾಜ್ಯದಲ್ಲಿ ಭಾರಿ ಲಾಭ ಗಳಿಸುತ್ತಿರುವ 254 ಔಷಧ ತಯಾರಿಕಾ ಕಂಪನಿಗಳ ಸಂಪೂರ್ಣ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ಹಾಗೂ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ ಪತ್ರ ಬರೆದಿದ್ದಾರೆ.

ಡ್ರಗ್ಸ್ ಪ್ರೈಸೆಸ್ ಕಂಟ್ರೋಲ್ ಆರ್ಡರ್ (DPCO), 2013ರ ನಿಯಮಗಳಡಿಯಲ್ಲಿ ಈ 254 ಕಂಪನಿಗಳ ಉತ್ಪನ್ನಗಳ ದರವನ್ನು ತಕ್ಷಣವೇ ನಿಯಂತ್ರಣಕ್ಕೆ ತರಬೇಕು. ಖಾಸಗಿ ಆಸ್ಪತ್ರೆಗಳು ಹಾಗೂ ಚಿಲ್ಲರೆ ಮಾರಾಟಗಾರರು ಪಡೆಯುತ್ತಿರುವ ಅತಿಯಾದ 'ಟ್ರೇಡ್ ಮಾರ್ಜಿನ್' ಪ್ರಮಾಣಕ್ಕೆ ತಕ್ಷಣ ಬೆಲೆ ಮಿತಿ ಹೇರಬೇಕು. ಔಷಧಗಳ ಮಾದರಿಯಲ್ಲೇ 24 ಪ್ರಮುಖ ವಿಭಾಗಗಳ ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್‌ಗಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ನಿಯಂತ್ರಣ ಚೌಕಟ್ಟು ತರಬೇಕು.

"ಆಸ್ಪತ್ರೆಗಳಲ್ಲಿ ರೋಗಿಗಳು ತುರ್ತು ಸ್ಥಿತಿಯಲ್ಲಿದ್ದಾಗ ಔಷಧ ಹಾಗೂ ಉಪಕರಣಗಳ ಬೆಲೆಯನ್ನು ಚೌಕಾಶಿ ಮಾಡಲು ಸಾಧ್ಯವಾಗುವುದಿಲ್ಲ. ಈ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಶೇ 1000 ಕ್ಕಿಂತಲೂ ಹೆಚ್ಚು ಲಾಭ ಮಾಡಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಹಾಗೂ ಅಮಾನವೀಯ. ಇದಕ್ಕೆ ತಕ್ಷಣವೇ ಕೇಂದ್ರ ಮಟ್ಟದಲ್ಲಿ ಕಡಿವಾಣ ಬೀಳಬೇಕು." ಎಂದು ಎಫ್ ಡಿಎ ಪತ್ರದಲ್ಲಿ ಒತ್ತಾಯಿಸಿದೆ.

Read More
Next Story