ರಾಜ್ಯದ ಮತದಾರರ ಪಟ್ಟಿಯಿಂದ 84 ಲಕ್ಷ ಹೆಸರು ಡಿಲೀಟ್..!?
ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ 84.31 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಶಾಶ್ವತವಾಗಿ ಸ್ಥಳಾಂತರಗೊಂಡವರು 51 ಲಕ್ಷದ 74 ಸಾವಿರದ 968 ಮಂದಿಯಾಗಿದ್ದಾರೆ.
ಪಟ್ಟಿಯಿಂದ ಕೈಬಿಡಲು ಗುರುತಿಸಲಾದ 84.31 ಲಕ್ಷ ಮಂದಿಯ ವಿವರ ನೋಡುವುದಾದರೆ, ಶಾಶ್ವತವಾಗಿ ಸ್ಥಳಾಂತರಗೊಂಡವರು 51 ಲಕ್ಷದ 74 ಸಾವಿರದ 968 ಮಂದಿಯಾಗಿದ್ದಾರೆ. ಇವರು ಅತಿ ದೊಡ್ಡ ಸಂಖ್ಯೆಯಾಗಿದ್ದು, ರಾಜ್ಯದ ಮತದಾರರ ಪಟ್ಟಿಯ ಗೊಂದಲಕ್ಕೆ ಮುಖ್ಯ ಕಾರಣರಾಗಿದ್ದಾರೆ. ಮೃತಪಟ್ಟವರು 14 ಲಕ್ಷದ 99 ಸಾವಿರದ 799 ಮಂದಿ ಇದ್ದಾರೆ. ದೀರ್ಘಕಾಲದಿಂದ ಪಟ್ಟಿಯಲ್ಲಿ ಉಳಿದುಕೊಂಡಿದ್ದ ಮೃತರ ಹೆಸರುಗಳನ್ನು ಈ ಬಾರಿ ಅಧಿಕೃತವಾಗಿ ತೆಗೆಯಲಾಗಿದೆ. ನಾಪತ್ತೆಯಾದವರು 11 ಲಕ್ಷದ 61 ಸಾವಿರದ 231 ಮಂದಿಯಾಗಿದ್ದಾರೆ.
Next Story

