ತಿಂಗಳಿಗೆ 6,000 ರೂ. 19 ವರ್ಷಗಳಿಂದ ಸೇವೆ, ಕಾಯಂ ಉದ್ಯೋಗವಿಲ್ಲ: ವಿಶೇಷಚೇತನರ ಗೋಳಾಟ
19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿಶೇಷಚೇತನ ಕಾರ್ಯಕರ್ತರು ಕಾಯಂ ಉದ್ಯೋಗಕ್ಕೆ ಆಗ್ರಹಿಸಿದ್ದಾರೆ. ಗೌರವಧನ ಹೆಚ್ಚಳ, 6,500 ಮಂದಿಯ ಕಾಯಂಗೊಳಿಸುವಿಕೆ ಹಾಗೂ ಮಾಸಾಶನ ಏರಿಕೆಗೆ ಒತ್ತಾಯಿಸಿದ್ದಾರೆ.
ಕಳೆದ 19 ವರ್ಷಗಳಿಂದ ಕನಿಷ್ಠ ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷಚೇತನ ಕಾರ್ಯಕರ್ತರು ಕಾಯಂ ಉದ್ಯೋಗಕ್ಕೆ ಆಗ್ರಹಿಸಿದ್ದಾರೆ. ಪ್ರಸ್ತುತ ನೀಡುತ್ತಿರುವ 6,000 ರೂ. ಗೌರವಧನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ರಾಜ್ಯದ 6,500 ಕಾರ್ಯಕರ್ತರನ್ನು ಕಾಯಂಗೊಳಿಸುವುದು ಹಾಗೂ 12 ಲಕ್ಷ ವಿಶೇಷಚೇತನರಿಗೆ ಮಾಸಾಶನವನ್ನು 5,000 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
Next Story

