3 ವರ್ಷಗಳಿಂದ ಬಿಪಿಎಲ್ ಕಾರ್ಡ್‌ಗಾಗಿ ಕಾಯುತ್ತಿರುವ ಬಡವರು: 7.76 ಲಕ್ಷ ನಕಲಿ ಪಡಿತರ ಚೀಟಿ ಪತ್ತೆ!
x

ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಪತ್ತೆ ಮಾಡಿದೆ. 

3 ವರ್ಷಗಳಿಂದ ಬಿಪಿಎಲ್ ಕಾರ್ಡ್‌ಗಾಗಿ ಕಾಯುತ್ತಿರುವ ಬಡವರು: 7.76 ಲಕ್ಷ ನಕಲಿ ಪಡಿತರ ಚೀಟಿ ಪತ್ತೆ!

ಒಂದೆಡೆ ಅರ್ಹರಿಗೆ ಕಾರ್ಡ್ ಸಿಗುತ್ತಿಲ್ಲ, ಮತ್ತೊಂದೆಡೆ ಅನರ್ಹರು ಬಿಪಿಎಲ್ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಪತ್ತೆ ಮಾಡಿದೆ.


Click the Play button to hear this message in audio format

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸದ ಕಾರಣ, ಲಕ್ಷಾಂತರ ಅರ್ಹ ಬಡವರು ಬಿಪಿಎಲ್ (BPL) ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರವು ಕೇವಲ ವೈದ್ಯಕೀಯ ತುರ್ತು ಪರಿಸ್ಥಿತಿ ಇರುವವರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಹಾಗೂ ಬುಡಕಟ್ಟು ಜನಾಂಗದವರಿಗೆ ಮಾತ್ರ ಆದ್ಯತಾ ಪಡಿತರ ಚೀಟಿ ನೀಡುತ್ತಿದೆ. ಇದರ ಜೊತೆಗೆ, ರಾಜ್ಯಾದ್ಯಂತ ಬರೋಬ್ಬರಿ 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಪತ್ತೆಹಚ್ಚಿದೆ.

ರಾಜ್ಯದಲ್ಲಿ ಲಕ್ಷಾಂತರ ಬಡವರು ಬಿಪಿಎಲ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ 2022ರ ಬಳಿಕ ಹೊಸ ಪಡಿತರ ಚೀಟಿಗೆ ಅಧಿಕೃತವಾಗಿ ಅರ್ಜಿ ಕರೆದಿಲ್ಲ. ವೈದ್ಯಕೀಯ ತುರ್ತು ಪ್ರಕರಣಗಳಡಿ 102 ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಆಹಾರ ಇಲಾಖೆಯ ತಂತ್ರಾಂಶದ ಮೂಲಕ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಉಳಿದಂತೆ ಸಾಮಾನ್ಯ ಬಡವರು ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿರುವ ಪಡಿತರ ಚೀಟಿಗಳ ಅಂಕಿ-ಅಂಶ

ಆಹಾರ ಇಲಾಖೆಯ ಮಾಹಿತಿಯ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ 1,54,57,567 ಪಡಿತರ ಚೀಟಿಗಳಿದ್ದು, ಒಟ್ಟು 5,45,41,740 ಫಲಾನುಭವಿಗಳಿದ್ದಾರೆ. ಅಂತ್ಯೋದಯ ಅನ್ನ ಯೋಜನೆ (AAY): 10,47,080 ಕಾರ್ಡ್‌ಗಳು (42,76,526 ಫಲಾನುಭವಿಗಳು). ಆದ್ಯತಾ ಪಡಿತರ ಚೀಟಿ (BPL): 1,14,38,886 ಕಾರ್ಡ್‌ಗಳು (4,00,46,744 ಫಲಾನುಭವಿಗಳು). ಆದ್ಯತೇತರ ಪಡಿತರ ಚೀಟಿ (APL): 29,71,601 ಕಾರ್ಡ್‌ಗಳು (1,02,18,470 ಫಲಾನುಭವಿಗಳು).

2025ರ ಅಂತ್ಯದ ವೇಳೆಗೆ, ಹೊಸ ಆದ್ಯತಾ ಕಾರ್ಡ್‌ಗಾಗಿ ಸಲ್ಲಿಕೆಯಾಗಿರುವ 3,36,982 ಅರ್ಜಿಗಳ ಸ್ಥಳ ತನಿಖೆ ನಡೆಸಿ, ಅರ್ಹರಿಗೆ ಕಾರ್ಡ್ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

7.76 ಲಕ್ಷ ನಕಲಿ ಪಡಿತರ ಚೀಟಿ ಪತ್ತೆ!

ಒಂದೆಡೆ ಅರ್ಹರಿಗೆ ಕಾರ್ಡ್ ಸಿಗುತ್ತಿಲ್ಲ, ಮತ್ತೊಂದೆಡೆ ಅನರ್ಹರು ಬಿಪಿಎಲ್ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಪತ್ತೆ ಮಾಡಿದೆ. ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರು, 25 ಲಕ್ಷಕ್ಕೂ ಅಧಿಕ ಜಿಎಸ್‌ಟಿ ವಹಿವಾಟು ನಡೆಸುವವರು, ದುಬಾರಿ ವಾಹನ ಹೊಂದಿರುವವರು ಹಾಗೂ 7.5 ಎಕರೆಗೂ ಹೆಚ್ಚು ಭೂಮಿ ಹೊಂದಿರುವವರು ಈ ಪಟ್ಟಿಯಲ್ಲಿದ್ದಾರೆ. ಇಂತಹ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ನಡೆಯುತ್ತಿದೆ.

ಆಹಾರ ಧಾನ್ಯ ದುರ್ಬಳಕೆ: 747 ಕ್ರಿಮಿನಲ್ ಕೇಸ್

ಪಡಿತರ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳ ದುರ್ಬಳಕೆಯನ್ನು ತಡೆಯಲು ಆಹಾರ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿಯಲ್ಲಿ 747 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. 2025-26ನೇ ಸಾಲಿನ ಜನವರಿವರೆಗೆ 25 ಲಕ್ಷಕ್ಕೂ ಅಧಿಕ ಮೌಲ್ಯದ 45,339 ಕ್ವಿಂಟಾಲ್ ಆಹಾರ ಧಾನ್ಯ, 6061 ಲೀಟರ್ ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ಹಾಗೂ 419 ವಾಹನಗಳನ್ನು ಜಪ್ತಿ ಮಾಡಲಾಗಿದೆ.

Read More
Next Story