ಕಲಾಪ ಆರಂಭವಾಗುತ್ತಿದ್ದಂತೆಯೇ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು, "ನಮಗೆ ಅಜೆಂಡಾ ನೋಡಲು ಲ್ಯಾಪ್‌ಟಾಪ್ ನೀಡಬೇಕು," ಎಂದು ಸಭಾಧ್ಯಕ್ಷರ ಮುಂದಿಟ್ಟರು.
"ಅಜೆಂಡಾ ನೋಡೋಕೆ ಲ್ಯಾಪ್‌ಟಾಪ್ ಕೊಡಿ" ಎಂದ ಪ್ರಭು ಚವ್ಹಾಣ್; "ಟ್ರೈನಿಂಗ್ ತಗೊಳ್ಳಿ" ಎಂದ ಸ್ಪೀಕರ್!
ಕಲಾಪ ಆರಂಭವಾಗುತ್ತಿದ್ದಂತೆಯೇ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು, "ನಮಗೆ ಅಜೆಂಡಾ ನೋಡಲು ಲ್ಯಾಪ್‌ಟಾಪ್ ನೀಡಬೇಕು," ಎಂದು ಸಭಾಧ್ಯಕ್ಷರ ಮುಂದಿಟ್ಟರು.
ಸೋಮವಾರ ಆರಂಭವಾದ ವಿಧಾನಸಭೆ ಕಲಾಪದಲ್ಲಿ ಆಸಕ್ತಿದಾಯಕ ಪ್ರಸಂಗವೊಂದು ನಡೆದಿದೆ. ಸದನದ ಕಾರ್ಯ ಕಲಾಪಗಳ ಪಟ್ಟಿ ವೀಕ್ಷಿಸಲು ತಮಗೆ ಲ್ಯಾಪ್‌ಟಾಪ್ ಒದಗಿಸಬೇಕು ಎಂದು ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಬೇಡಿಕೆ ಇಟ್ಟರೆ, ಅದಕ್ಕೆ ಸ್ಪೀಕರ್ ನೀಡಿದ ಉತ್ತರ ಸದನದಲ್ಲಿ ನಗೆಯುಕ್ಕಿಸಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು, "ನಮಗೆ ಅಜೆಂಡಾ ನೋಡಲು ಲ್ಯಾಪ್‌ಟಾಪ್ ನೀಡಬೇಕು," ಎಂದು ಸಭಾಧ್ಯಕ್ಷರ ಮುಂದಿಟ್ಟರು.
ಸ್ಪೀಕರ್ ಉತ್ತರವೇನು?
ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್, "ನೀವು ಅದನ್ನು ಸರಿಯಾಗಿ ಉಪಯೋಗ ಮಾಡುವುದಾದರೆ ಮಾತ್ರ ಕೊಡೋಣ. ಈಗಾಗಲೇ ಸದಸ್ಯರಿಗೆ ಲ್ಯಾಪ್‌ಟಾಪ್ ನೀಡುವ ಯೋಚನೆ ಇದೆ. ಆದರೆ, ಲ್ಯಾಪ್‌ಟಾಪ್ ಬದಲಿಗೆ 'ಟ್ಯಾಬ್' ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ," ಎಂದರು.
ಮುಂದುವರಿದು ಪ್ರಭು ಚವ್ಹಾಣ್ ಅವರಿಗೆ ಸಲಹೆ ನೀಡಿದ ಸ್ಪೀಕರ್, "ಉಪಕರಣಗಳನ್ನು ಕೊಡುವುದೇನೋ ಸರಿ, ಆದರೆ ಅದನ್ನು ಬಳಸಲು ನೀವು ಮೊದಲು ಸರಿಯಾಗಿ 'ಟ್ರೈನಿಂಗ್' ಪಡೆಯಬೇಕು," ಎಂದು ಕಿವಿಮಾತು ಹೇಳಿದರು. ಸ್ಪೀಕರ್ ಅವರ ಈ ಮಾತು ಸದನದಲ್ಲಿ ಕೆಲಕಾಲ ನಗೆಪಾಟಲಿಗೆ ಕಾರಣವಾಯಿತು.