x

ಕನ್ನಡ ವೈದ್ಯಕೀಯ ಪಠ್ಯಕ್ರಮಕ್ಕೆ ಇನ್ನೂ ವರ್ಷಗಳ ಸಿದ್ಧತೆ ಬೇಕು: ಡಾ. ಆರ್.ಕೆ. ಸರೋಜಾ

ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಅಳವಡಿಕೆಗೆ ಸಮಯ, ಯೋಜನೆ ಮತ್ತು ಸಾಮೂಹಿಕ ಪ್ರಯತ್ನ ಅಗತ್ಯ. ಹಲವು ವರ್ಷಗಳ ನಿರಂತರ ಕೆಲಸದಿಂದಷ್ಟೇ ಇದು ಸಾಧ್ಯ ಎಂದು ಡಾ. ಆರ್.ಕೆ. ಸರೋಜಾ ಹೇಳಿದ್ದಾರೆ.


Click the Play button to hear this message in audio format

ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡವನ್ನು ಅಳವಡಿಸುವುದು ಒಂದೇ ದಿನದಲ್ಲಿ ಸಾಧ್ಯವಾಗುವ ಕೆಲಸವಲ್ಲ. ಸಮ್ಮೇಳನದ ವೇದಿಕೆಯಲ್ಲಿ ಚರ್ಚಿಸುವುದರಿಂದ ಹಿಡಿದು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಕನ್ನಡವನ್ನು ಜಾರಿಗೆ ತರುವವರೆಗೆ ಹಲವು ಹಂತಗಳ ಸಿದ್ಧತೆ ಅಗತ್ಯ. ಇದಕ್ಕೆ ಸಾಕಷ್ಟು ಸಮಯ, ಯೋಜನೆ ಮತ್ತು ಸಾಮೂಹಿಕ ಪ್ರಯತ್ನ ಬೇಕಾಗುತ್ತದೆ. ಇದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ, ಹಲವು ವರ್ಷಗಳ ನಿರಂತರ ಕೆಲಸದ ಮೂಲಕವೇ ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅಳವಡಿಸಬಹುದು ಎಂದು ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ–2026ರ ಸಂಘಟನಾ ಕಾರ್ಯದರ್ಶಿ ಡಾ. ಆರ್.ಕೆ. ಸರೋಜಾ ತಿಳಿಸಿದ್ದಾರೆ.

Read More
Next Story