ಐಟಿ ಕಂಪನಿಗಳ ಬಳಿಕ ರಿಟೇಲ್ ಚೈನ್‌ಗಳತ್ತ ಕರವೇ ನಡೆ; ಕನ್ನಡಿಗರಿಗೆ ಉದ್ಯೋಗ ನೀಡಲು ಆಗ್ರಹ!
ಬೆಂಗಳೂರಿನ ಪ್ರಮುಖ ರಿಟೇಲ್ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡುವಂತೆ ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಸ್ಥಳೀಯರ ಉದ್ಯೋಗ ಹಕ್ಕಿನ ಕುರಿತು ಹೊಸ ಚರ್ಚೆ ಶುರುವಾಗಿದೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ಆಗ್ರಹದೊಂದಿಗೆ ಕನ್ನಡ ಪರ ಹೋರಾಟಗಾರರು ಇದೀಗ ಬೆಂಗಳೂರಿನ ಪ್ರಮುಖ ರಿಟೇಲ್ ಕಂಪನಿಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ಐಟಿ ಮತ್ತು ಬಿಟಿ ಕಂಪನಿಗಳಿಗೆ ತೆರಳಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದ ಕನ್ನಡ ಪರ ಕಾರ್ಯಕರ್ತರು, ಇಂದು ದೊಡ್ಡ ರಿಟೇಲ್ ಚೈನ್‌ಗಳಿಗೂ ಭೇಟಿ ನೀಡಿ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ರಿಟೇಲ್ ಮಳಿಗೆಗಳು ಮತ್ತು ಕಂಪನಿಗಳಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗಾವಕಾಶ ಸಿಗುತ್ತಿದೆ? ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಕಂಪನಿಗಳ ಜವಾಬ್ದಾರಿಯೇನು? ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಎಷ್ಟರ ಮಟ್ಟಿಗೆ ಕಾರ್ಯಸಾಧ್ಯ? ಕನ್ನಡಿಗರ ಉದ್ಯೋಗದ ಹಕ್ಕು, ಕಂಪನಿಗಳ ನೇಮಕಾತಿ ನೀತಿ ಮತ್ತು ಉದ್ಯಮ ವಲಯದ ಪ್ರತಿಕ್ರಿಯೆ ಕುರಿತ ಸಂಪೂರ್ಣ ವರದಿ ನೋಡಿ.
Next Story

