ಕಲಬುರಗಿಯಲ್ಲಿ 6.06 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ ಸುಸಜ್ಜಿತ ವಚನ ಮಂಟಪ
x

ಕಲಬುರಗಿಯ ಕಪನೂರು ಪ್ರದೇಶದಲ್ಲಿ ಒಟ್ಟು 6.06 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ವಚನ ಮಂಟಪ ನಿರ್ಮಾಣವಾಗಲಿದೆ. ಈ ಕೇಂದ್ರದಲ್ಲಿ ಹಲವು ವಿಶಿಷ್ಟ ಸೌಲಭ್ಯಗಳನ್ನು ಅಳವಡಿಸಲು ಗುರಿ ಹೊಂದಲಾಗಿದೆ.

ಕಲಬುರಗಿಯಲ್ಲಿ 6.06 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ ಸುಸಜ್ಜಿತ 'ವಚನ ಮಂಟಪ'

ಕಲಬುರಗಿಯ ಕಪನೂರು ಪ್ರದೇಶದಲ್ಲಿ ಒಟ್ಟು 6.06 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ವಚನ ಮಂಟಪ ನಿರ್ಮಾಣವಾಗಲಿದೆ. ಈ ಕೇಂದ್ರದಲ್ಲಿ ಹಲವು ವಿಶಿಷ್ಟ ಸೌಲಭ್ಯಗಳನ್ನು ಅಳವಡಿಸಲು ಗುರಿ ಹೊಂದಲಾಗಿದೆ.


Click the Play button to hear this message in audio format

ಕಲ್ಯಾಣ ಭಾಗದ ಶ್ರೀಮಂತ ಶರಣ ಪರಂಪರೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಸುಸಜ್ಜಿತವಾದ 'ವಚನ ಮಂಟಪ' ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ.

12ನೇ ಶತಮಾನದ ಶರಣರ ತತ್ವಗಳು ಹಾಗೂ ಶ್ರೇಷ್ಠ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬಸವಾದಿ ಶರಣರು ಕಂಡ ಸಮಸಮಾಜದ ಕಲ್ಪನೆ ಹಾಗೂ ಅವರ ದಾರ್ಶನಿಕ ವಿಚಾರಗಳನ್ನು ಸಾರ್ವಜನಿಕರಿಗೆ ಪರಿಚಯಿಸಲು ಮತ್ತು ಪ್ರಸಾರ ಮಾಡಲು ಈ ಮಂಟಪವು ಒಂದು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ವಚನಗಳ ಪ್ರದರ್ಶನ ವ್ಯವಸ್ಥೆ

ಕಲಬುರಗಿಯ ಕಪನೂರು ಪ್ರದೇಶದಲ್ಲಿ ಒಟ್ಟು 6.06 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ವಚನ ಮಂಟಪ ನಿರ್ಮಾಣವಾಗಲಿದೆ. ಈ ಕೇಂದ್ರದಲ್ಲಿ ಹಲವು ವಿಶಿಷ್ಟ ಸೌಲಭ್ಯಗಳನ್ನು ಅಳವಡಿಸಲು ಗುರಿ ಹೊಂದಲಾಗಿದೆ. ಶ್ರೇಷ್ಠ ಶರಣರಿಗೆ ಗೌರವ ಸಮರ್ಪಣೆ ಮಾಡುವ ವಿಶೇಷ ಸ್ಥಳ, ಅವರ ಪ್ರಮುಖ ವಚನಗಳನ್ನು ಪರಿಚಯಿಸುವ ವ್ಯವಸ್ಥಿತ ಪ್ರದರ್ಶನ ವಿಭಾಗ ಹಾಗೂ ಶರಣರ ಇತಿಹಾಸವನ್ನು ಸಾರುವ ಸುಸಜ್ಜಿತ ವಸ್ತುಸಂಗ್ರಹಾಲಯವನ್ನು (ಮ್ಯೂಸಿಯಂ) ಈ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಶರಣರ ಬದುಕಿನ ಮೌಲ್ಯಗಳನ್ನು ತಿಳಿಯಬಯಸುವವರಿಗೆ ಇದೊಂದು ಅಧ್ಯಯನ ತಾಣವಾಗಲಿದೆ.

ತಜ್ಞರ ವಿನ್ಯಾಸಗಳ ಪರಿಶೀಲನೆ ಹಾಗೂ ಚರ್ಚೆ

ವಚನ ಮಂಟಪದ ನಿರ್ಮಾಣವನ್ನು ಅತ್ಯಂತ ಆಕರ್ಷಕವಾಗಿ ಹಾಗೂ ಶರಣ ಪರಂಪರೆಗೆ ಪೂರಕವಾಗಿ ರೂಪಿಸಲು ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ವಿವಿಧ ಕಟ್ಟಡ ನಿರ್ಮಾಣ ತಜ್ಞರು ಮತ್ತು ವಾಸ್ತುಶಿಲ್ಪಿಗಳು ಸಿದ್ಧಪಡಿಸಿರುವ ವಚನ ಮಂಟಪದ ವಿನ್ಯಾಸ ನಕ್ಷೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Read More
Next Story