ಸ್ಟಿಂಗ್ ಆಪರೇಷನ್ ಬಿರುಗಾಳಿ: ಎಚ್ ಡಿಕೆ, ಸುರೇಶ್ ಬಾಬು ಸ್ಫೋಟಕ ಹೇಳಿಕೆ
ಸ್ಟಿಂಗ್ ಆಪರೇಷನ್ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರು.. ಧರಣಿ ವೇಳೆ ʼದ ಫೆಡರಲ್ ಕರ್ನಾಟಕ' ಜತೆ ಎಚ್‌ಡಿಕೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ ಸ್ಟಿಂಗ್ ಆಪರೇಷನ್ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದರು. ಧರಣಿ ಸಂದರ್ಭದಲ್ಲಿ ʼದ ಫೆಡರಲ್ ಕರ್ನಾಟಕ' ಜತೆ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅವರು ಮಾತನಾಡಿದ್ದಾರೆ.
ಸ್ಟಿಂಗ್ ಆಪರೇಷನ್ ರೂವಾರಿನೇ ಸಿಎಂ ಡಿ.ಕೆ.ಶಿವಕುಮಾರ್ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.ರಾಜ್ಯದ ಗೃಹ ಸಚಿವರು ನನ್ನ ಮೇಲೆ ತನಿಖೆ ಮಾಡಬೇಕು ಎಂಬ ಆಸೆ ಇದೆ ಬೇಕಾದರೆ ನನ್ನನ್ನು ಈಗಲೇ ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ನಮ್ಮ ಪಕ್ಷದ ಇಬ್ಬರು ಹುಡುಗರನ್ನು ಹೆದರಿಸಿ ಸಾಕ್ಷಿಗಳನ್ನು ಕ್ರಿಯಟ್ ಮಾಡಲು ಸಮಯ ಯಾಕೆ ವ್ಯರ್ಥ ಮಾಡುತ್ತೀರಾ ನನ್ನನ್ನು ತನಿಖೆ ನಡೆಸಿ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.ಪ್ರಿಯಾಂಕ್ ಖರ್ಗೆ ಅಧಿಕಾರದ ಮದ ಇಳಿಸಿಕೊಂಡು ಕಾರ್ಯ ಮಾಡಿ ಎಂದು ಹೇಳಿದರು. ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಿಎಂ ಅವರೇ ಪಾಲುದಾರರು ಎಂದು ದೂರಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾತನಾಡಿ ಸ್ಟಿಂಗ್ ಆಪರೇಷನ್ ಹಲವರ ಮೇಲೆ ನಡೆದಿದೆ ಇದಕ್ಕೆ ಕಾರಣ ಡಿ.ಕೆ.ಶಿವಕುಮಾರ್ ಎಂದು ಹೇಳಿದರು ಸಿದ್ದರಾಮಯ್ಯ ಅಂತಹವರು ತಡೆಯಾಜ್ಞೆ ತೆಗೆದುಕೊಳ್ಳುವಂತಾಯಿತು ಸಿದ್ದರಾಮಯ್ಯ ಅವರು ಈ ಷಡ್ಯಂತ್ರ ಬಗ್ಗೆ ಮಾತನಾಡಬೇಕು ಎಂದು ಹೇಳಿದರು. ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಲಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಇನ್ನು ಏನಾದರು ಸ್ಟಿಂಗ್ ಗಳನ್ನು ಹೆಣೆಯುತ್ತಿದ್ದಾರಾ ಎಂದು ಆರೋಪಿಸಿದರು. ಕಾಂಗ್ರೆಸ್ ಹೈಕಮಾಂಡ್ ಗೆ ಎಲ್ಲವೂ ಗೊತ್ತಿದೆ ಸ್ಟಿಂಗ್ ಆಪರೇಷವ್ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಸದನದಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಪ್ರಸ್ತಾಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು

