
ಹಾವೇರಿಯಲ್ಲಿ ತೀವ್ರ ಜ್ವರಕ್ಕೆ 10 ವರ್ಷದ ಬಾಲಕಿ ಕೋಮಾಗೆ ಜಾರಿದ್ದು, ಜಪಾನೀಸ್ ಎನ್ಸೆಫಲೈಟಿಸ್ ಶಂಕೆ ಮೂಡಿದೆ.
ತೀವ್ರ ಜ್ವರದಿಂದ ಕೋಮಾಗೆ ಜಾರಿದ 10 ವರ್ಷದ ಬಾಲಕಿ: ಜಪಾನೀಸ್ ಎನ್ಸೆಫಲೈಟಿಸ್ ಸೋಂಕಿನ ಶಂಕೆ
ಬಾಲಕಿಗೆ ತೀವ್ರ ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗಿದ್ದರೂ, ಆಗಸ್ಟ್ 7ರಂದು ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿ, ಕೋಮಾಗೆ ಜಾರಿದ್ದಾಳೆ.
ಹಾವೇರಿಯಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ 10 ವರ್ಷದ ಬಾಲಕಿಯೊಬ್ಬಳು ಕೋಮಾಗೆ ಜಾರಿದ್ದು, ಆಕೆಗೆ ಜಪಾನೀಸ್ ಎನ್ಸೆಫಲೈಟಿಸ್ (JE) ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ನಗರದ ಬಸವೇಶ್ವರ ನಗರದ ನಿವಾಸಿಯಾಗಿರುವ ಬಾಲಕಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಬಾಲಕಿಗೆ ತೀವ್ರ ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗಿದ್ದರೂ, ಆಗಸ್ಟ್ 7ರಂದು ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿ, ಕೋಮಾಗೆ ಜಾರಿದ್ದಾಳೆ. ಬಳಿಕ ಪೋಷಕರು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಮಾರು ಎರಡು ವಾರಗಳು ಕಳೆದರೂ ಬಾಲಕಿ ಇನ್ನೂ ಕೋಮಾದಿಂದ ಹೊರಬಂದಿಲ್ಲ. ವೈದ್ಯರು ಜಪಾನೀಸ್ ಎನ್ಸೆಫಲೈಟಿಸ್ ಸೋಂಕಿನ ಸಾಧ್ಯತೆಯನ್ನು ಶಂಕಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬಾಲಕಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕುಟುಂಬ ಬಸವೇಶ್ವರ ನಗರದಲ್ಲೇ ವಾಸಿಸುತ್ತಿದ್ದು, ಬಾಲಕಿ ಪ್ರತಿದಿನ ಮನೆಯಿಂದ ಶಾಲೆಗೆ ತೆರಳಿ ಮತ್ತೆ ಮನೆಗೆ ವಾಪಸ್ ಬರುತ್ತಿದ್ದಳು ಎಂದು ಹೇಳಿದ್ದಾರೆ.
ತೀವ್ರ ಜ್ವರದ ಬಳಿಕ ಏಕಾಏಕಿ ಆರೋಗ್ಯ ಸ್ಥಿತಿ ಹದಗೆಟ್ಟು ಬಾಲಕಿ ಕೋಮಾಗೆ ಜಾರಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ವೈದ್ಯರು ಜಪಾನೀಸ್ ಎನ್ಸೆಫಲೈಟಿಸ್ ಸೋಂಕಿನ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳು ಹಾಗೂ ಚಿಕಿತ್ಸೆ ಮುಂದುವರಿದಿದೆ.

