ಹಾಸನ: ಫ್ಲೈಓವರ್ ಮೇಲೆ ಪೆಟ್ರೋಲ್ ಟ್ಯಾಂಕರ್ ಪಲ್ಟಿ; ರಸ್ತೆಗಿಳಿದ ಸಾವಿರಾರು ಲೀಟರ್ ಇಂಧನ
x

ಟ್ಯಾಂಕರ್‌ನಲ್ಲಿದ್ದ ಸಾವಿರಾರು ಲೀಟರ್ ಪೆಟ್ರೋಲ್ ರಸ್ತೆಗೆ ಸೋರಿಕೆಯಾಗಿದೆ.

ಹಾಸನ: ಫ್ಲೈಓವರ್ ಮೇಲೆ ಪೆಟ್ರೋಲ್ ಟ್ಯಾಂಕರ್ ಪಲ್ಟಿ; ರಸ್ತೆಗಿಳಿದ ಸಾವಿರಾರು ಲೀಟರ್ ಇಂಧನ

ಹಾಸನದ ಕೆಂಚಟ್ಟಹಳ್ಳಿ ಫ್ಲೈಓವರ್ ಮೇಲೆ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸಾವಿರಾರು ಲೀಟರ್ ಇಂಧನ ರಸ್ತೆಗೆ ಸೋರಿಕೆಯಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.


Click the Play button to hear this message in audio format

ನಗರದ ಕೆಂಚಟ್ಟಹಳ್ಳಿ ಫ್ಲೈಓವರ್ ಮೇಲೆ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಪಲ್ಟಿಯಾಗಿದ್ದು, ಟ್ಯಾಂಕರ್‌ನಲ್ಲಿದ್ದ ಸಾವಿರಾರು ಲೀಟರ್ ಪೆಟ್ರೋಲ್ ರಸ್ತೆಗೆ ಸೋರಿಕೆಯಾಗಿದೆ. ಘಟನೆಯಿಂದ ಫ್ಲೈಓವರ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಟ್ಯಾಂಕರ್ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಪೆಟ್ರೋಲ್‌ ರಸ್ತೆಯ ಮೇಲೆ ಹರಿದಿದೆ. ಇಂಧನ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯ ನಡೆಸಿದ್ದಾರೆ. ಸೋರಿಕೆಯಾದ ಪೆಟ್ರೋಲ್‌ನಿಂದ ಯಾವುದೇ ಬೆಂಕಿ ಅವಘಡ ಸಂಭವಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಫ್ಲೈಓವರ್‌ನಲ್ಲಿ ಸಂಚಾರಕ್ಕೆ ಅಡ್ಡಿ

ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಫ್ಲೈಓವರ್‌ನಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯ ಮೇಲೆ ಪೆಟ್ರೋಲ್ ಹರಿದಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಟ್ಯಾಂಕರ್ ತೆರವುಗೊಳಿಸುವ ಹಾಗೂ ರಸ್ತೆಯ ಮೇಲಿನ ಇಂಧನವನ್ನು ಸ್ವಚ್ಛಗೊಳಿಸುವ ಕಾರ್ಯ ಮುಂದುವರಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

Read More
Next Story