ಹಾಸನಾಂಬ ದರ್ಶನಕ್ಕೆ ಇಂದು ಕೊನೆಯ ದಿನ; ಮಧ್ಯಾಹ್ನ 12ಕ್ಕೆ ಗರ್ಭಗುಡಿ ಬಂದ್
ಹಾಸನಾಂಬೆ ದೇವಿ ದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ಭಕ್ತರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ. ದರ್ಶನಕ್ಕಾಗಿ 10ರಿಂದ 12 ಗಂಟೆಗಳವರೆಗೆ ಕಾಯಬೇಕಾಗಬಹುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಇಂದು ಕಡೆಯ ದಿನ. ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದು, ಕೊನೆಯ ದಿನವಾದ ಇಂದು ಭಕ್ತರ ಮಹಾಸಾಗರವೇ ಹರಿದುಬರುವ ನಿರೀಕ್ಷೆಯಿದೆ. ಇಂದು ದರ್ಶನಕ್ಕೆ ಹೋದ್ರೆ ಗಂಟೆಗಟ್ಟಲೆ ಕಾಯೋದು ಗ್ಯಾರಂಟಿ! ಹೌದು, ಭಕ್ತರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ 10ರಿಂದ 12 ಗಂಟೆಗಳವರೆಗೆ ಕಾಯಬೇಕಾಗಬಹುದು ಎಂದು ಜಿಲ್ಲಾಡಳಿತವೇ ಎಚ್ಚರಿಕೆ ನೀಡಿದೆ.
Next Story

