x

ಹನೂರು ಶೂಟೌಟ್: ಇವರು ಹೋಗಿದ್ದು ತಪ್ಪು ಅವರು ಶೂಟೌಟ್ ಮಾಡಿದ್ದು ತಪ್ಪು: ಶಾಸಕ ಮಂಜುನಾಥ್​

ಹನೂರು ಶೂಟೌಟ್‌ಗೆ ಹೊಸ ಆಯಾಮ ನೀಡಿದ ಶಾಸಕ ಎಂ.ಆರ್. ಮಂಜುನಾಥ್; ಮೂವರ ಸಾವು ದುರಂತ, ಯಾರದ್ದು ಸರಿ-ತಪ್ಪು ಎಂಬುದು ನ್ಯಾಯಾಂಗ ತನಿಖೆಯಿಂದ ಹೊರಬರಲಿ ಎಂದು ಆಗ್ರಹ.


ಹನೂರು ತಾಲ್ಲೂಕಿನ ವ್ಯಾಪ್ತಿಯ ಅಭಯಾರಣ್ಯದಲ್ಲಿ ವನ್ಯಜೀವಿ ಕಾನೂನು ನಿಯಮಗಳಲ್ಲಿ ಕೆಲ ಸಡಿಲಿಕೆ ಬೇಕು ಎಂದು ಸ್ಥಳೀಯ ಶಾಸಕಎಂ.ಆರ್ .ಮಂಜುನಾಥ್ ಆಗ್ರಹಿಸಿದ್ದಾರೆ.‌ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಆಗಸ್ಟ್ 15ರಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮೃತರು ಬೇಟೆಗಾರರು ಎಂದು ಸರ್ಕಾರ ಮತ್ತು ಅರಣ್ಯ ಇಲಾಖೆ ಹೇಳುತ್ತಿದ್ದರೆ, ಅವರು ರೈತರು ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ವಾದಿಸುತ್ತಿದ್ದಾರೆ. ಘಟನೆಯ ಬಳಿಕ ಹನೂರು ಭಾಗದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರಕರಣದ ಕುರಿತು ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ಎದ್ದಿವೆ. ಈ ಘಟನೆ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. ಘಟನೆ ನಡೆದ ಕ್ಷಣದಿಂದ ಹಿಡಿದು ನಂತರ ನಡೆದ ಬೆಳವಣಿಗೆಗಳವರೆಗೆ ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಾಡಿನೊಳಗೆ ಇವರು ಹೋಗಿದ್ದು ತಪ್ಪು, ಅವರು ಗುಂಡು ಹಾರಿಸಿದ್ದು ತಪ್ಪು

ಮೂವರು ಸಾವನ್ನಪ್ಪಿರುವುದು ದುರಂತ ಇದರಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂದು ನ್ಯಾಯಾಂಗ ತನಿಖೆಯಾಗಬೇಕು ಎಂದು ಹೇಳಿದರು. ಕಾಡಿನೊಳಗೆ ಇವರು ಹೋಗಿದ್ದು ತಪ್ಪು ಆದರೆ ಅರಣ್ಯ ಸಿಬ್ಬಂಧಿ ಗುಂಡು ಹಾರಿಸಿದ್ದು ತಪ್ಪುಈ ಬಗ್ಗೆ ತನಿಖೆಯಿಂದ ಮಾತ್ರ ಸತ್ಯಾಂಶಹೊರಬರುತ್ತದೆ. ಈ ಹಿಂದೆ ಹಲವು ಬಾರಿ ಅಕ್ರಮವಾಗಿ ಅರಣ್ಯ ಪ್ರದೇಶಕ್ಕೆ ಹೋದಾಗ ಬಂಧಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಯಾಕೆ ಗುಂಡು ಹಾರಿಸಿದರು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾದರೆ ಸತ್ಯಗೊತ್ತಾಗಲಿದೆ ಎಂದು ಹೇಳಿದರು.

ಮೃತರಿಗೆ ಚಿಕ್ಕಮಕ್ಕಳಿದ್ದಾರೆ ಇವರ ಜವಾಬ್ದಾರಿ ಏನು ಎಂಬ ಪ್ರಶ್ನೆ ಎದುರಾಗಿದೆ. 2 ಕೋಟಿ ಪರಿಹಾರ ನೀಡಬೇಕು ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಬೇಕು ಹಾಗು ಕುಟುಂಬಸ್ಥರಿಗೆ ನೌಕರಿ ಕೋಡಬೇಕು ಎಂಬ ಬೇಡಿಕೆಯಿದೆ ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು

ಘಟನೆ ಆದಾಗ ನಾನು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿದ್ದೆ. ಆಗ ನಾನು ಅರ್ಧಕ್ಕೆ ಸಮಾರಂಭ ಮೊಟಕುಗೊಳಿಸಿ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಣ ಕ್ಕೆ ತರಲು ಕ್ರಮವಹಿಸಿದೆ. ನಾನು ಸ್ಥಳಕ್ಕೆ ಹೋಗಿ ನಿಭಾಯಿಸಲಿಲ್ಲ ಅಂದರೆ ಪರಿಸ್ಥಿತಿ ಏನಾಗುತ್ತಿತ್ತೊ ಗೊತ್ತಿಲ್ಲ. ಪರಿಸ್ಥಿತಿ ಹತೋಟಿಗೆ ತಂದದ್ದು ನನಗೆ ದೊಡ್ಡ ಸವಾಲಾಗಿತ್ತು ಎಂದು ಹೇಳಿದರು

ಹನೂರು ಭಾಗ ಬೇರೆ ಕಾಡಿನ ಪ್ರದೇಶದ ರೀತಿಯಿಲ್ಲ. ಈ ಭಾಗದಲ್ಲಿ ಹೆಚ್ಚು ಅರಣ್ಯ ಪ್ರದೇಶವಿದೆ. ಸಂರಕ್ಷಿತ ಅರಣ್ಯವಲಯ ಮಾಡಬೇಕಾದರೆ ಒಂದಷ್ಟು ವಿಚಾರಗಳನ್ನು ನೋಡಬೇಕಿತ್ತು ಅದನ್ನು ಮಾಡಿಲ್ಲ ಎಂದು ಹೇಳಿದರು. ಅರಣ್ಯ ಗಡಿಭಾಗದಿಂದ ಒಂದೂವರೆ ಕಿಲೋಮೀಟರ್ ಓಡಾಡಲಿಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು

ತಮಿಳುನಾಡು ಸಿಎಂ ಹಸ್ತಕ್ಷೇಪ ಸರಿಯಲ್ಲ

ಈ ಪ್ರಕರಣದಲ್ಲಿ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ಹಸ್ತಕ್ಷೇಪ ಮಾಡಲು ನಾವು ಒಪ್ಪಲ್ಲ. ಅವರ ಕುಟುಂಬಗಳಿಗೆ ನ್ಯಾಯಕೊಡಲು ನಾವು ಸಿದ್ದರಿದ್ದೇವೆ. ನಮ್ಮ ನಾಡಲ್ಲಿರುವವರು ಕನ್ನಡಿಗರು ಆದರೆ ತಮಿಳುನಾಡು ಸಿಎಂ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

Read More
Next Story