Bengaluru Rain | ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತಕ್ಕೆ ಬಲಿಯಾದವರ ಪಟ್ಟಿ ಬಿಡುಗಡೆ
x
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ(ಸಂಗ್ರಹ ಚಿತ್ರ)

Bengaluru Rain | ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತಕ್ಕೆ ಬಲಿಯಾದವರ ಪಟ್ಟಿ ಬಿಡುಗಡೆ

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ. ಮೃತರ ಅಧಿಕೃತ ಪಟ್ಟಿ ಮತ್ತು ಘಟನೆಯ ಸಂಪೂರ್ಣ ವಿವರ ಇಲ್ಲಿದೆ.


ರಾಜಧಾನಿಯಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಆರ್ಭಟಕ್ಕೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ ಏಳು ಜನರ ಅಧಿಕೃತ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಘೋರ ಘಟನೆಯಲ್ಲಿ ಸ್ಥಳೀಯರು ಮಾತ್ರವಲ್ಲದೆ, ಹೊರರಾಜ್ಯದ ಪ್ರವಾಸಿಗರು ಮತ್ತು ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ವಿಷಾದನೀಯ.

ಮೃತದೇಹಗಳ ಮರಣೋತ್ತರ ಪರೀಕ್ಷೆಯ ನಂತರ ಆಸ್ಪತ್ರೆ ಮೂಲಗಳು ಬಿಡುಗಡೆ ಮಾಡಿರುವ ಮೃತರ ಸಂಪೂರ್ಣ ವಿವರ ಈ ಕೆಳಗಿನಂತಿದೆ:

ಮೃತರ ವಿವರಗಳು:

1. ಮೊಹಮ್ಮದ್ ಅಬ್ದುಲ್ (52): ಬೆಂಗಳೂರಿನ ಜೆ.ಸಿ. ನಗರ ನಿವಾಸಿ.

2. ಫಯಾಜ್ ಅಹ್ಮದ್ (39): ಬೆಂಗಳೂರಿನ ಡಿ.ಜೆ. ಹಳ್ಳಿ ನಿವಾಸಿ.

3. ಮುಸಾವಿರ್ ಬೇಗಂ (6): ಬೆಂಗಳೂರಿನ ಕೆ.ಜೆ. ಹಳ್ಳಿ ಮೂಲದ ಬಾಲಕಿ.

4. ಸ್ಮಿತಾ (47): ಕೇರಳದ ಎರ್ನಾಕುಲಂ ಮೂಲದ ಪ್ರವಾಸಿಗರು.

5. ಲತಾ (57): ಕೇರಳದ ಎರ್ನಾಕುಲಂ ಮೂಲದ ಪ್ರವಾಸಿಗರು.

6. ನಸೀಮುಲ್ಲಾ (19): ಅಸ್ಸಾಂ ಮೂಲದ ಯುವಕ (ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದರು).

7. ಸಲಾವುದ್ದೀನ್ ಅನ್ಸಾರಿ (36): ಉತ್ತರ ಪ್ರದೇಶ ಮೂಲದ ವ್ಯಾಪಾರಿ.

ಘಟನೆಯ ಹಿನ್ನೆಲೆ

ನಗರದಲ್ಲಿ ದಿಢೀರ್ ಎದುರಾದ ವಾಯುಭಾರ ಕುಸಿತದ ಪರಿಣಾಮವಾಗಿ ಸುರಿದ ಭಾರಿ ಮಳೆಗೆ ಹಳೆಯದಾಗಿದ್ದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಗೋಡೆಯ ಪಕ್ಕದಲ್ಲಿ ನಿಂತಿದ್ದವರ ಮೇಲೆ ಕಾಂಪೌಂಡ್ ಬಿದ್ದಿದ್ದರಿಂದ ಈ ಸಾವು-ನೋವು ಸಂಭವಿಸಿದೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಪರಿಹಾರ ಘೋಷಿಸುವ ಸಾಧ್ಯತೆಯಿದೆ.

Read More
Next Story