GBA Tax | Good news for property owners; 5% tax rebate period extended till May 31
x

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ

ಜಿಬಿಎ ಚುನಾವಣೆ 2026: ಆಕ್ಷೇಪಣೆಗಳ ಬೆನ್ನಲ್ಲೇ 27 ವಾರ್ಡ್‌ಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಆದೇಶ

ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರಪಾಲಿಕೆಗಳ ಸಾರ್ವತ್ರಿಕ ಚುನಾವಣೆ-2026ರ ಸಿದ್ಧತೆಗಳು ಬಿರುಸುಗೊಂಡಿವೆ. ಇದೇ ವೇಳೆ, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದೆ. ಆಕ್ಷೇಪಣೆ ಬಂದಿರುವ ನಿರ್ದಿಷ್ಟ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ವಿಶೇಷ ತೀವ್ರ ಪರಿಷ್ಕರಣೆಗೊಳಪಡಿಸಲು ಜೂನ್ 19, 2026 ರಂದು ಆಯೋಗವು ಪತ್ರಿಕಾ ಪ್ರಕಟಣೆಯ ಮೂಲಕ ಆದೇಶ ಹೊರಡಿಸಿದೆ.



ಬೆಂಗಳೂರಿನ ಮೂರು ಪ್ರಮುಖ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಕೆಲವು ವಾರ್ಡ್‌ಗಳ ಮತದಾರರ ಪಟ್ಟಿಯಲ್ಲಿ ಲೋಪಗಳಿರುವ ಬಗ್ಗೆ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಏಪ್ರಿಲ್ 18, 2026 ರಂದು ಪ್ರಕಟಿಸಲಾಗಿದ್ದ ಅಂತಿಮ ಮತದಾರರ ಪಟ್ಟಿಯನ್ನು ಆಯೋಗವು ಮುಂದಿನ ಆದೇಶದವರೆಗೆ ತಡೆಹಿಡಿದು ಫ್ರೀಜ್ ಮಾಡಿದೆ. ಭಾರತ ಸಂವಿಧಾನದ ಆರ್ಟಿಕಲ್ 243-ZA ಹಾಗೂ ಗ್ರೇಟರ್ ಬೆಂಗಳೂರು (ಆಡಳಿತ) ಅಧಿನಿಯಮ 2025ರ ಪ್ರಕರಣ 35 ಮತ್ತು ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು 2025ರ ನಿಯಮ 23(2)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿರುವ ಆಯೋಗವು, ಆಕ್ಷೇಪಣೆ ವ್ಯಕ್ತವಾಗಿರುವ ವಾರ್ಡ್‌ಗಳಲ್ಲಿ ಜೂನ್ 26 ರಿಂದ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಿದೆ.

ಯಾವೆಲ್ಲಾ ವಾರ್ಡ್‌ಗಳಲ್ಲಿ ನಡೆಯಲಿದೆ ವಿಶೇಷ ಪರಿಷ್ಕರಣೆ?

ರಾಜ್ಯ ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆಯ ಪ್ರಕಾರ, ಒಟ್ಟು 27 ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಯನ್ನು ಮರುಪರಿಶೀಲನೆ ಮಾಡಲಾಗುತ್ತಿದೆ. ಇದರಲ್ಲಿ ಬೆಂಗಳೂರು ಪೂರ್ವ ನಗರಪಾಲಿಕೆಯ ವಾರ್ಡ್ ಸಂಖ್ಯೆ 28 ರಿಂದ 50 ರವರೆಗಿನ ಒಟ್ಟು 23 ವಾರ್ಡ್‌ಗಳು ಸೇರಿವೆ. ಇದರ ಜೊತೆಗೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ 31 (ಒಂದು ವಾರ್ಡ್) ಹಾಗೂ ಬೆಂಗಳೂರು ಕೇಂದ್ರ ನಗರಪಾಲಿಕೆಯ ವ್ಯಾಪ್ತಿಯ ವಾರ್ಡ್ ಸಂಖ್ಯೆ 57, 58 ಮತ್ತು 59 ಸೇರಿದಂತೆ ಮೂರು ವಾರ್ಡ್‌ಗಳಲ್ಲಿ ಈ ಪರಿಷ್ಕರಣಾ ಕಾರ್ಯ ನಡೆಯಲಿದೆ.

ಪರಿಷ್ಕರಣಾ ಕಾರ್ಯದ ಸಂಪೂರ್ಣ ವೇಳಾಪಟ್ಟಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವು ನಿರ್ದಿಷ್ಟ ಹಂತಗಳಲ್ಲಿ ನಡೆಯಲಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಮನೆ-ಮನೆ ಸಮೀಕ್ಷೆಯ ಕುರಿತಂತೆ ಜೂನ್ 25 ರಂದು ವಿಶೇಷ ತರಬೇತಿ ನೀಡಲಾಗುತ್ತದೆ. ತದನಂತರ ಜೂನ್ 26 ರಿಂದ ಬಿಎಲ್‌ಒಗಳು ಮನೆ-ಮನೆ ಸಮೀಕ್ಷೆ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ. ಸಮೀಕ್ಷೆಯ ನಂತರ ಜುಲೈ 9 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಯ ಕುರಿತು ಯಾವುದೇ ಕ್ಲೇಮ್ ಮತ್ತು ಆಕ್ಷೇಪಣೆಗಳಿದ್ದರೆ ಅವುಗಳನ್ನು ಸಲ್ಲಿಸಲು ಮತ್ತು ಇತ್ಯರ್ಥಪಡಿಸಲು ಜುಲೈ 10 ರಿಂದ ಜುಲೈ 26 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಜುಲೈ 31 ರಂದು ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಪ್ರಕಟಿಸಲಿದೆ.

Read More
Next Story