The adventure of creating Gadag in the lap of the Himalayas: Climbing the 15,500-foot-high Hura Top!
x

ಎನ್‌ಸಿಸಿ ಕೆಡೆಟ್ ಸೃಷ್ಟಿ ಮೇಟಿ

ಹಿಮಾಲಯ ಶಿಖರದಲ್ಲಿ ಗದಗದ ಸೃಷ್ಟಿ ಸಾಹಸ: 15,500 ಅಡಿ ಎತ್ತರದ 'ಹುರಾ ಟಾಪ್' ಮೇಲೆ ತ್ರಿವರ್ಣ ಧ್ವಜ!

ಜೆ.ಟಿ. ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, 38 ಕೆಎಆರ್‌ ಬಿಎನ್ ಎನ್‌ಸಿಸಿ ಘಟಕದ ಹೆಮ್ಮೆಯ ಕೆಡೆಟ್ ಆಗಿದ್ದು, ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶಿಖರದ ತುದಿಯನ್ನು ತಲುಪಿದ್ದರು.


Click the Play button to hear this message in audio format

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಪ್ರತಿಷ್ಠಿತ 'ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್' (NIM) ವತಿಯಿಂದ ಆಯೋಜಿಸಲಾಗಿದ್ದ ಪರ್ವತಾರೋಹಣ ಶಿಬಿರದಲ್ಲಿ ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು 15,500 ಅಡಿ ಎತ್ತರದ 'ಹುರಾ ಟಾಪ್' ಶಿಖರವನ್ನು ಯಶಸ್ವಿಯಾಗಿ ಏರುವ ಮೂಲಕ ಅಪೂರ್ವ ಸಾಹಸ ಮೆರೆದಿದ್ದಾರೆ.

ತ್ರಿವರ್ಣ ಧ್ವಜ ಹಾರಿಸಿದ ಸೃಷ್ಟಿ

ಗದಗದ ಜೆ.ಟಿ. ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, 38 ಕೆಎಆರ್‌ ಬಿಎನ್ ಎನ್‌ಸಿಸಿ ಘಟಕದ ಹೆಮ್ಮೆಯ ಕೆಡೆಟ್ ಆಗಿದ್ದಾರೆ. ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶಿಖರದ ತುದಿಯನ್ನು ತಲುಪಿದ ಅವರು, ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ತಮ್ಮ ದೇಶಭಕ್ತಿ, ಧೈರ್ಯ ಹಾಗೂ ಅಪ್ರತಿಮ ಸಾಹಸ ಮನೋಭಾವವನ್ನು ಜಗತ್ತಿಗೆ ಅನಾವರಣಗೊಳಿಸಿದ್ದಾರೆ. ಈ ಮೂಲಕ ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮಕ್ಕೆ ವಿಶೇಷ ಕೀರ್ತಿ ತಂದಿದ್ದಾರೆ.

ಅಭಿನಂದನೆಗಳ ಮಹಾಪೂರ

ಸೃಷ್ಟಿ ಅವರ ಈ ಐತಿಹಾಸಿಕ ಸಾಧನೆಗೆ ಜೆ.ಟಿ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಅಧಿಕಾರಿಗಳು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸೃಷ್ಟಿ ಅವರು ಇನ್ನಷ್ಟು ಉನ್ನತ ಶಿಖರಗಳನ್ನು ಮುಟ್ಟಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದ್ದಾರೆ.

Read More
Next Story