SIR ವಿರುದ್ಧ ಜನಾಂದೋಲನ ಅನಿವಾರ್ಯ; ಬಿ.ಟಿ.ಲಲಿತಾ ನಾಯಕ್ ಕಿಡಿ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದ ಇಬ್ಬರ ಸದಸ್ಯರ ಆಸಮಧಾನ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಬಗ್ಗೆ SIR ವಿರುದ್ದ ಹೋರಾಟದಲ್ಲಿ ಭಾಗಿಯಾಗಿರುವ ಬಿ.ಟಿ. ಲಲಿತಾ ನಾಯಕ್ ಮಾತವಾಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ಚುನಾವಣಾ ಆಯೋಗದೊಳಗೇ ಭಿನ್ನಾಭಿಪ್ರಾಯದ ಪ್ರಶ್ನೆಗಳು ಎದ್ದಿವೆ. ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಅಧಿಕೃತವಾಗಿ ಆಕ್ಷೇಪ ದಾಖಲಿಸಿದ್ದಾರೆ. ಈ ಬಗ್ಗೆ ದ 'ಫೆಡರಲ್ ಕರ್ನಾಟಕ' ಜತೆ ಮಾಜಿ ಸಚಿವೆ ಹಾಗು SIR ವಿರುದ್ದ ಹೋರಾಟದಲ್ಲಿ ಭಾಗಿಯಾಗಿರುವ ಬಿ.ಟಿ. ಲಲಿತಾ ನಾಯಕ್ ಮಾತನಾಡಿದ್ದಾರೆ.
ಎಸ್ ಐಆರ್ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಇಬ್ಬರು ಸದಸ್ಯರು ಹಲವು ಪ್ರಶ್ನೆ ಕೇಳಿದ್ದರೂ ಅದನ್ನು ಸರಿಪಡಿಸದೆ ಹೇಗೆ SIR ಮಾಡಿದರು ಎಂದು ಪ್ರಶ್ನಿಸಿದರು. ನಾವು ಮುಂಚಿನಿಂದಲೂ SIR ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಇದರ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ. ಇಡೀ ರಾಜ್ಯಾದ್ಯಂತ ಈ ಬಗ್ಗೆ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ನಾವು ಆರೋಪ ಮಾಡಿದರೆ ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಾರೆ ಎಂದರು. ಆದರೆ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ ಸದಸ್ಯರಿಬ್ಬರು SIR ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಇದಕ್ಕೆ ಉತ್ತರ ನೀಡಬೇಕು ಎಂದು ಹೇಳಿದರು.
SIR ನ್ನು ಸಂಪೂರ್ಣ ನಿಲ್ಲಿಸಬೇಕು ಇಲ್ಲದಿದ್ದರೆ ಜನ ಬೀದಿಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದರು.ಮುಂಚಿನಿಂದಲೂ ಮತ ಚಲಾವಣೆ ಮಾಡಲಾಗಿದೆ ಆಗಿದ್ದರೂ ತಾತ ಅಜ್ಜಿಯ ಬಗ್ಗೆ ದಾಖಲೆಗಳು ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು. SIR ಮಾಡಲಿ ಬೇಡ ಎನ್ನುವುದಿಲ್ಲ ಆದರೆ ಅದನ್ನು ಸರಳೀಕರಣಗೊಳಿಸಬೇಕು ವಿನಾ ಕಾರಣ ನೋಟಿಸ್ ನೀಡಿ ಮತಗಳನ್ನು ಡಿಲೀಟ್ ಮಾಡಬಾರದು ಎಂದು ಆಗ್ರಹಿಸಿದರು.

