ಬರದ ಎಫೆಕ್ಟ್: ಜಿಕೆವಿಕೆ ಕೃಷಿ ಮೇಳ ಈ ವರ್ಷ ಕೇವಲ ಒಂದೇ ದಿನ
x

ಕರ್ನಾಟಕದ ತೀವ್ರ ಬರದ ಹಿನ್ನೆಲೆ ಬೆಂಗಳೂರಿನ ಜಿಕೆವಿಕೆ ಕೃಷಿ ಮೇಳವನ್ನು ನಾಲ್ಕು ದಿನಗಳಿಂದ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. ನ

ಬರದ ಎಫೆಕ್ಟ್: ಜಿಕೆವಿಕೆ ಕೃಷಿ ಮೇಳ ಈ ವರ್ಷ ಕೇವಲ ಒಂದೇ ದಿನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಆರು ಜಿಲ್ಲೆಗಳ 36 ತಾಲೂಕುಗಳ ಪೈಕಿ 34 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.


Click the Play button to hear this message in audio format

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯುವ ಪ್ರಸಿದ್ಧ ಕೃಷಿ ಮೇಳದ ಅವಧಿಯನ್ನು ನಾಲ್ಕು ದಿನಗಳಿಂದ ಒಂದೇ ದಿನಕ್ಕೆ ಕಡಿತಗೊಳಿಸಲಾಗಿದೆ. ಈ ಬಾರಿ ಕೃಷಿ ಮೇಳವನ್ನು ನವೆಂಬರ್ 13ರಂದು ನಡೆಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಆರು ಜಿಲ್ಲೆಗಳ 36 ತಾಲೂಕುಗಳ ಪೈಕಿ 34 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದ್ದು, ಸಾಮಾನ್ಯವಾಗಿ ನಡೆಯುವ ಕೃಷಿ ಪ್ರದರ್ಶನಗಳು ಹಾಗೂ ಬೆಳೆಗಳ ಪ್ರಾತ್ಯಕ್ಷಿಕೆಗಳಿಗೂ ಸವಾಲು ಎದುರಾಗಿದೆ.

ನವೆಂಬರ್ 13ರಂದು ಒಂದೇ ದಿನ ಮೇಳ

ಪ್ರತಿ ವರ್ಷ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ರೈತರು, ಕೃಷಿ ವಿಜ್ಞಾನಿಗಳು, ಕೃಷಿ ಯಂತ್ರೋಪಕರಣ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳು ಭಾಗವಹಿಸುತ್ತವೆ. ಹೊಸ ತಳಿಗಳ ಪರಿಚಯ, ಕೃಷಿ ತಂತ್ರಜ್ಞಾನ, ವಿಶೇಷ ಕಾರ್ಯಾಗಾರಗಳು ಸೇರಿದಂತೆ ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಈ ಬಾರಿಯೂ ಆಯೋಜಿಸಲಾಗುತ್ತಿದೆ. ಆರು ಜಿಲ್ಲೆಗಳ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನವೂ ನಡೆಯಲಿದೆ.

ಕಳೆದ ವರ್ಷ 54 ಲಕ್ಷಕ್ಕೂ ಹೆಚ್ಚು ಜನ ಭೇಟಿ

ಜಿಕೆವಿಕೆ ಕೃಷಿ ಮೇಳವು ರಾಜ್ಯದ ಪ್ರಮುಖ ಕೃಷಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. 2025ರ ನಾಲ್ಕು ದಿನಗಳ ಮೇಳಕ್ಕೆ ಸುಮಾರು 54 ಲಕ್ಷ ಮಂದಿ ಭೇಟಿ ನೀಡಿದ್ದು, 750ಕ್ಕೂ ಹೆಚ್ಚು ಮಳಿಗೆಗಳು ಇದ್ದವು. ಮೇಳದಿಂದ ಸುಮಾರು 4.77 ಕೋಟಿ ರೂ. ಆದಾಯವೂ ಸಂಗ್ರಹವಾಗಿತ್ತು.

ಈ ವರ್ಷ ಕರ್ನಾಟಕದಲ್ಲಿ ಮಳೆಯ ಕೊರತೆ ವ್ಯಾಪಕವಾಗಿದ್ದು, ರಾಜ್ಯದ ಹಲವು ತಾಲೂಕುಗಳು ಬರಪೀಡಿತವಾಗಿವೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ 217 ತಾಲೂಕುಗಳು ಬರಪೀಡಿತವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯವು ನಾಲ್ಕು ದಿನಗಳ ಬೃಹತ್ ಮೇಳವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿದೆ

Read More
Next Story