x

ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರ ಜೊತೆ ಸಿಎಂ ಮಾತುಕತೆ- ಬಂದ್‌ಗೆ ಕೊಟ್ಟಿದ್ದ ಬೆಂಬಲ ವಾಪಸ್‌

ವಿಧಾನಸೌಧದ ಎದುರು ಮಾತನಾಡಿದ ಡಿ.ಕೆ. ಶಿವಕುಮಾರ್‌, ಸತ್ಯ, ನ್ಯಾಯ ಮತ್ತು ನೀತಿಯ ಆಧಾರದಲ್ಲಿ ಸರಿಯಾದ ಹಾಗೂ ವಾಸ್ತವಾಂಶಗಳನ್ನು ಮಾತ್ರ ಜನರಿಗೆ ತಲುಪಿಸುವಂತೆ ಮಾಧ್ಯಮಕ್ಕೆ ಮನವಿ ಮಾಡಿದರು.


Click the Play button to hear this message in audio format

ವಿಧಾನಸೌಧದ ಎದುರು ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್‌ ಅವರು, “ಈಗ ತಾನೇ ನನಗೆ ನಮ್ಮ ಎಲ್ಲ ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲ ಪ್ರಮುಖರೆಲ್ಲ ಬಂದು ಭೇಟಿ ಮಾಡಿದರು. ಅವರು 'ನಾವು ವಾಪಸ್ ತೆಗೆದುಕೊಂಡಿದ್ದೇವೆ' ಅಂತ ಹೇಳಿದ್ದಾರೆ. ಬಹಳ ಸಂತೋಷ, ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆಗಳು ರಾಜ್ಯದ ಹಿತಕ್ಕೆ. ಮತ್ತು ಅವರು ಅನೇಕ ರಾಜ್ಯದ ಹಿತಕ್ಕೋಸ್ಕರ, ಜನರ ಕಲ್ಯಾಣಕ್ಕೆ, ರೈತರಿಗೋಸ್ಕರ ಕೆಲವು ಬೇಡಿಕೆಗಳನ್ನು ಕೂಡ ಕೊಟ್ಟಿದ್ದಾರೆ. ನಾನು ಅದನ್ನು ವಾಪಸ್ ನಾನು ನೋಡ್ತೇನೆ. ಅವರ ಎಲ್ಲ ಸಹಕಾರಕ್ಕೆ ಅವರಿಗೆ ನನ್ನ ಕೃತಜ್ಞತೆಗಳು" ಎಂದಿದ್ದಾರೆ.

Read More
Next Story